HOME » NEWS » State » KPCC PRESIDENT DK SHIVAKUMAR REACTION ON SIRA AND RR NAGAR ASSEMBLY BY ELECTION PREPARATION SCT

ಚುನಾವಣೆ ಪ್ರಚಾರಕ್ಕೆ ಸಿಬಿಐ ದಾಳಿಯನ್ನು ಬಳಸಿಕೊಳ್ಳೋದಿಲ್ಲ; ಡಿಕೆ ಶಿವಕುಮಾರ್ ಸ್ಪಷ್ಟನೆ

ನಮ್ಮ ಮನೆ ಮೇಲೆ ಸಿಬಿಐ ದಾಳಿಯಾಗಿದ್ದನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ. ರಾಜ್ಯದ ಮತದಾರರು ಎಲ್ಲವನ್ನೂ ನೋಡುತ್ತಿದ್ದಾರೆ. ಸರ್ಕಾರಕ್ಕೆ ಯಾವ ಮೆಸೇಜ್ ಹೋಗಬೇಕೋ ಅದನ್ನು ಜನರೇ ಕೊಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

news18-kannada
Updated:October 7, 2020, 4:04 PM IST
ಚುನಾವಣೆ ಪ್ರಚಾರಕ್ಕೆ ಸಿಬಿಐ ದಾಳಿಯನ್ನು ಬಳಸಿಕೊಳ್ಳೋದಿಲ್ಲ; ಡಿಕೆ ಶಿವಕುಮಾರ್ ಸ್ಪಷ್ಟನೆ
ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಅ. 7): ಶಿರಾ ಮತ್ತು ಆರ್​.ಆರ್​. ನಗರ ಉಪ ಚುನಾವಣೆಗೆ ನಾವೆಲ್ಲ ಒಟ್ಟಾಗಿ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದೆವು. ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಟಿ.ಬಿ. ಜಯಚಂದ್ರ, ಆರ್.ಆರ್. ನಗರಕ್ಕೆ ಕುಸುಮಾ ಅವರ ಹೆಸರನ್ನು ಹೈಕಮಾಂಡ್​ಗೆ ಶಿಫಾರಸು ಮಾಡಿದ್ದೆವು. ಆ ಶಿಫಾರಸನ್ನು ಒಪ್ಪಿರುವ ಕಾಂಗ್ರೆಸ್ ಹೈಕಮಾಂಡ್, ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ನಮ್ಮ ಮನೆ ಮೇಲೆ ಸಿಬಿಐ ದಾಳಿಯಾಗಿದ್ದನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ. ರಾಜ್ಯದ ಮತದಾರರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು ಶಿರಾ ಮತ್ತು ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ, ಇತ್ತೀಚೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ ಐಎಎಸ್​ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಆರ್​.ಆರ್ ನಗರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಇದು ನಮ್ಮ ಪಕ್ಷದ ಎಲ್ಲರೂ ಸೇರಿ ಮಾಡಿರುವ ಆಯ್ಕೆ. ಈ ಚುನಾವಣೆಯಲ್ಲಿ ತಂತ್ರ ಪ್ರತಿತಂತ್ರಗಳೇನೂ ಇರುವುದಿಲ್ಲ. ರಾಜ್ಯದ ಮತದಾರರು ಎಲ್ಲವನ್ನೂ ನೋಡುತ್ತಿದ್ದಾರೆ. ಸರ್ಕಾರಕ್ಕೆ ಯಾವ ಮೆಸೇಜ್ ಹೋಗಬೇಕೋ ಅದನ್ನು ಜನರೇ ಕೊಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಘೋಷಣೆ; ಶಿರಾದಲ್ಲಿ ಟಿ.ಬಿ. ಜಯಚಂದ್ರ, ಆರ್​ಆರ್​ ನಗರದಲ್ಲಿ ಕುಸುಮಾ ಸ್ಪರ್ಧೆ

ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಆರ್.ಆರ್. ನಗರಕ್ಕೆ ಕುಸುಮಾ, ಶಿರಾಗೆ ಮಾಜಿ ಸಚಿವ ಜಯಚಂದ್ರರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕುಸುಮಾ ಬಹಳ ಉತ್ತಮ ಅಭ್ಯರ್ಥಿಯಾಗಿದ್ದಾರೆ, ಸುಶಿಕ್ಷಿತರಾಗಿದ್ದಾರೆ. ಜಯಚಂದ್ರ ಕೂಡ ಪ್ರಬಲ ಸ್ಪರ್ಧಿಯೇ. ಡಿಕೆಶಿ ಮೇಲೆ ಸಿಬಿಐ ದಾಳಿಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಆರ್​ಆರ್​ ನಗರದಲ್ಲಿ ಬಿಜೆಪಿ, ಜೆಡಿಎಸ್ ಇಲ್ಲಿಯವರೆಗೂ ಅಭ್ಯರ್ಥಿಗಳನ್ನು ಹಾಕಿಲ್ಲ. ಶಿರಾದಲ್ಲೂ ಅವರಿಗೆ ಸೂಕ್ತ ಅಭ್ಯರ್ಥಿಗಳು ಸಿಕ್ಕಿಲ್ಲ. ಡಿಕೆ ಶಿವಕುಮಾರ್ ಮೇಲಿನ ಸಿಬಿಐ ವಿಚಾರವನ್ನೇ ಜನರ ಮುಂದೆ ಇಡುತ್ತೇವೆ. ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುತ್ತೇವೆ. ನಾವು ಎರಡೂ ಕ್ಷೇತ್ರಗಳಲ್ಲೂ ‌ಗೆದ್ದು ಬರುತ್ತೇವೆಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

Youtube Video

ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಗಳಿಗೆ ನ. 3ರಂದು ಉಪಚುನಾವಣೆ ನಡೆಯಲಿದೆ.
Published by: Sushma Chakre
First published: October 7, 2020, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories