• Home
  • »
  • News
  • »
  • state
  • »
  • Karnataka Congress: ಮತದಾರರನ್ನ ಸೆಳೆಯಲು ಡಿಕೆಶಿ ರಣತಂತ್ರ​; ಭಾರತ್​ ಜೋಡೋ ಆಯ್ತು ಇದೀಗ ಮಹಾಧಿವೇಶನಕ್ಕೆ ಪ್ಲಾನ್

Karnataka Congress: ಮತದಾರರನ್ನ ಸೆಳೆಯಲು ಡಿಕೆಶಿ ರಣತಂತ್ರ​; ಭಾರತ್​ ಜೋಡೋ ಆಯ್ತು ಇದೀಗ ಮಹಾಧಿವೇಶನಕ್ಕೆ ಪ್ಲಾನ್

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಆಗಿರೋ ಹಿನ್ನೆಲೆ ಕರ್ನಾಟಕದಲ್ಲಿ ಎಐಸಿಸಿ ಮಹಾಧಿವೇಶನ ನಡೆಸಲು ಡಿಕೆ ಶಿವಕುಮಾರ್ (D K Shivakumar)​ ಅಂಡ್​ ಟೀಮ್​ ಸಜ್ಜಾಗಿದೆ.

  • News18 Kannada
  • Last Updated :
  • Karnataka, India
  • Share this:

ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರ್ತಿದ್ದು, ಎಲ್ಲಾ ಪಕ್ಷಗಳು ಕಾರ್ಯ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ. ಕರ್ನಾಟಕದಲ್ಲಿ (Karnataka) ದೊಡ್ಡ ಕಾರ್ಯಕ್ರಮಕ್ಕೆ ರೂಪುರೇಷೆ ನಡೆಸಲಾಗುತ್ತಿದೆ. ಭಾರತ್ ಜೋಡೋ (Bharat Jodo Yatre) ಯಶಸ್ಸಿನ ಬಳಿಕ ಡಿಕೆಶಿ ಮತ್ತೊಂದು ಮೆಗಾ ಕಾರ್ಯಕ್ರಮಕ್ಕೆ ಪ್ಲಾನ್ ಮಾಡಿದ್ದಾರೆ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಎಐಸಿಸಿ ಅಧ್ಯಕ್ಷ ಆಗಿರೋ ಹಿನ್ನೆಲೆ ಕರ್ನಾಟಕದಲ್ಲಿ ಎಐಸಿಸಿ ಮಹಾಧಿವೇಶನ ನಡೆಸಲು ಡಿಕೆ ಶಿವಕುಮಾರ್ (D K Shivakumar)​ ಅಂಡ್​ ಟೀಮ್​ ಸಜ್ಜಾಗಿದೆ. ಮಹಾಧಿವೇಶ ನಡೆಸುವ ಬಗ್ಗೆ ಖರ್ಗೆ ಹಾಗೂ ಸಿದ್ದರಾಮಯ್ಯ ಜೊತೆ ಚರ್ಚಿಸಲಾಗುತ್ತದೆ. ಬೆಂಗಳೂರಿನಲ್ಲಿ ನಡೆಸಬೇಕೋ ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಬೇಕೋ ಎಂಬ ನಿರ್ಧಾರವನ್ನು ಶ್ರೀಘ್ರವೇ ಕೈಗೊಳ್ಳಲಾಗುತ್ತದೆ.


ನನ್ನನ್ನು, ಸಿದ್ದರಾಮಯ್ಯರನ್ನು ಓಡಿಸಿದ್ರು


ಭಾರತ ಜೋಡೋ ಯಾತ್ರೆ ಯಶಸ್ಸಿನ ಬಳಿಕ ಸುದ್ದಿಕೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತಾಡಿದ್ದಾರೆ.  ಪಾದಯಾತ್ರೆಯಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಂಡಿದ್ರು. ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ನನ್ನನ್ನು ಮತ್ತೆ ಸಿದ್ದರಾಮಯ್ಯ ಅವರನ್ನು ಓಡಿಸಿದ್ರು. ಸಿದ್ದರಾಮಯ್ಯ ಜೊತೆ ಕೈ ಹಿಡಿದು ನಡೆದಿದ್ದಾರೆ. ನನ್ನ ಕೈಯಲ್ಲಿ ಬಾವುಟ ಕೊಟ್ಟು ನಂಗೂ ಓಡಿಸಿದ್ರು ಎಂದು ಹೇಳಿದ್ದಾರೆ.


ಭಾರತ ಐಕ್ಯತಾ ಯಾತ್ರೆ ಯಶಸ್ವಿ


ರಾಜ್ಯದಲ್ಲಿ ಎಲ್ಲರ ಸಹಕಾರದಿಂದ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿದೆ. ರಾಹುಲ್ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು.  ಇದು ದೇಶದ ರಾಜಕಾರಣವನ್ನೇ ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಆಂದೋಲನವಾಗಿ ರೂಪುಗೊಂಡಿದೆ. ಇದೊಂದು ಚಳವಳಿಯಾಗಿ ರೂಪುಗೊಂಡಿದ್ದು, ಯುವಕರು, ಮಹಿಳೆಯರ ಸಾಗರ ಪಾದಯಾತ್ರೆಯಲ್ಲಿತ್ತು ಎಂದು ಹೇಳಿದ್ರು.


ಇದನ್ನೂ ಓದಿ:  Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು 


ರಾಹುಲ್ ನೋಡಲು ಬಂದಿದ್ರು ಮಕ್ಕಳು


ಪಾದಯಾತ್ರೆಯಲ್ಲಿ ಚಿಕ್ಕಮಕ್ಕಳ ಉತ್ಸಾಹ ಎದ್ದು ಕಾಣುತ್ತಿತ್ತು. ರಾಹುಲ್ ಗಾಂಧಿ ನೋಡಲು ಪೋಷಕರ ಜೊತೆ ನೂರಾರು ಕಿಮೀ ದೂರದಿಂದ ಮಕ್ಕಳು ಕೂಡಾ ಬಂದಿದ್ದರು. ರಾಹುಲ್ ಹಲವು ಮಕ್ಕಳ ಜೊತೆ ಮಾತನಾಡುತ್ತಿದ್ದರು.  ಅವರ ಗುರಿ ಆಸೆ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಡಿಕೆಶಿ ಹೇಳಿದ್ರು.


ರಾಹುಲ್​ಗಾಂಧಿ ನೋಡಲು ಜನಸಾಗರ


ಇಂದಿರಾಗಾಂಧಿ ರಾಜ್ಯಕ್ಕೆ ಬಂದಾಗ ಯಾವ ರೀತಿ ಜನರು‌ ಅವರನ್ನು ನೋಡಬೇಕು ಅಂತ ಬಂದಿದ್ದರೋ ಅದೇ ರೀತಿ ಜನರು ರಾಹುಲ್ ಗಾಂಧಿ ನೋಡಬೇಕು ಅಂತ ಕುಟುಂಬ ಸಮೇತ ಬಂದಿದ್ದರು. ನಿಗದಿಯಂತೆ ಪ್ರತಿದಿನ ರಾಹುಲ್ ಗಾಂಧಿ ಬೆಳಿಗ್ಗೆ 6ಕ್ಕೆ ನಡಿಗೆ ಪ್ರಾರಂಭ ಮಾಡುತ್ತಿದ್ದರು. ಪ್ರತಿ ದಿನ ಎಲ್ಲಾ ವರ್ಗದ‌ ಜನರ ಜೊತೆ ರಾಹುಲ್ ಗಾಂಧಿ ಸಂವಾದ ಮಾಡುತ್ತಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ:  Chitradurga: ಸಿಪಿಐ ಉಮೇಶ್ ವಿರುದ್ಧದ ರೇಪ್ ಕೇಸ್​​ಗೆ ಟ್ವಿಸ್ಟ್; ಹೇಳಿಕೆ ಬದಲಾಯಿಸಿದ ಸಂತ್ರಸ್ತೆ


ರಾಹುಲ್ ‌ನಡಿಗೆ ಸ್ಪೀಡ್ ಜಾಸ್ತಿ ಇತ್ತು. ನಿಧಾನವಾಗಿ ನಡೆಯಲು ನಾವು ಮನವಿ ಮಾಡಿದ್ದೆವು ಆದರೆ ಅವರು ಒಪ್ಪಲಿಲ್ಲ, ಮತ್ತೆ ನಾವು ಅದಕ್ಕೆ ಅಜೆಸ್ಟ್ ಆಗಬೇಕಾಯ್ತು. ಜನರು ಬರಲಿ ಎಂದು ಬೆಳಗ್ಗೆ ಸ್ವಲ್ಪ ಲೇಟ್ ಮಾಡೋಣ ಅಂತ ಎಂದು ಮನವಿ ಮಾಡಿದರೂ ಒಪ್ಪಲಿಲ್ಲ.  ಪಾದಯಾತ್ರೆಯ ರೂಟ್ ಬದಲಾವಣೆ ಮಾಡಲೂ ಒಪ್ಪಿರಲಿಲ್ಲ. ಪ್ರತಿದಿನ ಎಲ್ಲ ವರ್ಗಗಳ ಜನರ ಜೊತೆ ಸಂವಾದ ನಡೆಸುತ್ತಿದ್ದರು. ಆಕ್ಸಿಜನ್ ದುರಂತ, ನರೇಗ, ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಟೆಕ್ಕಿಗಳು, ರೈತರ ಜೊತೆ ಸಂವಾದ ನಡೆಸಿದ್ದಾರೆ.


 ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಬೇಕು


ರಾಜ್ಯದ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಬೇಕು ಎಂದಿದೆ. ಎಲ್ಲ ಧರ್ಮದ ಪ್ರಾರ್ಥನಾ ಮಂದಿಗಳಿಗೆ ಭೇಟಿ ನೀಡಿದ್ದರು. ಮಗ ಹಾಗೂ ತಾಯಿಯ ಪ್ರೀತಿಗೂ ಭಾರತ್ ಜೋಡೋ ಸಾಕ್ಷಿಯಾಗಿದೆ. ಸೋನಿಯಾ ಗಾಂಧಿ ಶೂ ಲೇಸ್ ಕಟ್ಟಿದ ಫೋಟೋ ವೈರಲ್ ಆಗಿತ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: