Karnataka Congress: ಹಿಂದುತ್ವ ಅಲೆಯಲ್ಲಿರುವ ಕರಾವಳಿ ಭಾಗಕ್ಕೆ ರಾಜ್ಯ ಕಾಂಗ್ರೆಸ್ ಹೊಸ ಸೂತ್ರ; ಡಿಕೆಶಿ ಪ್ಲ್ಯಾನ್ ಒಪ್ತಾರಾ ಸಿದ್ದರಾಮಯ್ಯ?

ಕರಾವಳಿ ಭಾಗ ಹಿಂದುತ್ವದ ಅಲೆ ಇರೋ ಕ್ಷೇತ್ರ. ಆದರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಕಮಲ ನಾಯಕರ ವಿರುದ್ಧ ಸ್ಥಳೀಯವಾಗಿ ಅಸಮಾಧಾನ ವ್ಯಕ್ತವಾಗಿತ್ತು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

 • Share this:
  2023ರ ವಿಧಾನಸಭಾ ಚುನಾವಣೆಗೆ (Assembly Election 2023) ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಬಾರಿ ಬಹುಮತದೊಂದಿಗೆ ಅಧಿಕಾರ ಹಿಡಿಯಲು ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಚುನಾವಣಾ ಅಖಾಡಕ್ಕೆ ಧುಮುಕಿವೆ. ಬಿಜೆಪಿ ಜನಸ್ಪಂದನ ಮಾಡುತ್ತಿದ್ರೆ, ಕಾಂಗ್ರೆಸ್ ಸಾಲು ಸಾಲು ಪಾದಯಾತ್ರೆಗಳನ್ನು ಆಯೋಜಿಸುತ್ತಿದೆ. ಇತ್ತ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಸಹ ತನ್ನ ಶಾಸಕರಿರುವ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಮತ್ತೊಂದು ಕಡೆ ಮೈಸೂರು ಭಾಗದ ಜೆಡಿಎಸ್ ಶಾಸಕರು (JDS MLA) ಕೆಲವು ದಿನಗಳಿಂದ ಸಕ್ರಿಯರಾಗಿದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್ ಕೇಸರಿ ಕೋಟೆಯಾಗಿರುವ ಕರಾವಳಿ ಭಾಗದಲ್ಲಿ (Karnataka Coastal Area) ಪತಾಕೆ ಹಾರಿಸಲು ಹೊಸ ಸೂತ್ರವನ್ನು ರಚಿಸಿದೆಯಂತೆ. ಈ ಸೂತ್ರದ ಮೂಲಕ ಕಮಲ ಕೋಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ (KPCC President DK Shivakumar) ಮುಂದಾಗಿದ್ದಾರೆ ಎನ್ನಲಾಗಿದೆ.

  ಆದರೆ ಡಿಕೆ ಶಿವಕುಮಾರ್ ರಚಿಸಿರುವ ಹೊಸ ಸೂತ್ರವನ್ನು ಕಾಂಗ್ರೆಸ್ ಶಾಸಕಾಂಗದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಒಪ್ತಾರಾ ಅನ್ನೋ ಅನುಮಾನಗಳು ಮತ್ತೊಂದು ಭಾಗದಿಂದ ಸುಳಿಯುತ್ತಿದೆ. ಹಾಗಾದ್ರೆ ಡಿಕೆ ಶಿವಕುಮಾರ್ ಅವರ ಹೊಸ ಪ್ಲಾನ್ ಏನು ಎಂಬುದರ ಮಾಹಿತಿ ಇಲ್ಲಿದೆ.

  ಕರಾವಳಿ ಭಾಗ ಹಿಂದುತ್ವದ ಅಲೆ ಇರೋ ಕ್ಷೇತ್ರ. ಆದರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಕಮಲ ನಾಯಕರ ವಿರುದ್ಧ ಸ್ಥಳೀಯವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಈ ಎಲ್ಲಾ ಅಂಶಗಳನ್ನು ಲಾಭವಾಗಿ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿರೋದು ಕಾಣಿಸುತ್ತಿದೆ.

  ಟಿಕೆಟ್​ ಫಿಲ್ಟರ್​ ಫಾರ್ಮುಲಾ?

  ಕರಾವಳಿಯಲ್ಲಿ ಹಿರಿಯ ನಾಯಕರಿಗೆ ಕೊಕ್ ನೀಡಿ, ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರಂತೆ. ಕರಾವಳಿ ಭಾಗದ ಗೆಲ್ಲುವ ಮುಖಗಳಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಡಿಕೆ ಶಿವಕುಮಾರ್ ಅವರ ಈ ನಿರ್ಧಾರಕ್ಕೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಡಿಕೆ ಶಿವಕುಮಾರ್ ಹೇಳಿಕೆಗೆ ಹಲವು ಹಿರಿಯ ನಾಯಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

  ಇದನ್ನೂ ಓದಿ:  HD Kote Tahshildar: ನಡೀರಿ ಆಚೆಗೆ, ಯಾವಾಗ್ಲೂ ಇದೇ ಆಯ್ತು: ದೂರು ನೀಡಲು ಬಂದವರಿಗೆ ತಹಶೀಲ್ದಾರ್ ಫುಲ್ ಆವಾಜ್

  ಹಿರಿಯ ನಾಯಕರಿಂದ ಅಸಮಾಧಾನ!

  ಡಿಕೆ ಶಿವಕುಮಾರ್ ಅವರ ಟಿಕೆಟ್ ಫಿಲ್ಟರ್​ ಸೂತ್ರಕ್ಕೆ ಆರಂಭದಲ್ಲಿ ಅಪಸ್ವರ ಕೇಳಿ ಬಂದಿದೆ. ಟಿಕೆಟ್ ಕೊಡಲು ಡಿಕೆಶಿ ಯಾರು ಎಂದು ಹಿರಿಯ ನಾಯಕರು ಪ್ರಶ್ನೆ ಮಾಡುತ್ತಿದ್ದಾರಂತೆ. ಆದ್ರೆ ಈ ಎಲ್ಲಾ ವಿರೋಧದ ನಡುವೆ ಉತ್ತರ ಕರ್ನಾಟಕ ಭಾಗದಲ್ಲೂ ಹೊಸಬರಿಗೆ ಟಿಕೆಟ್​ ನೀಡಲು ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

  Congress​​ ರಥಯಾತ್ರೆಗೆ ಸಿದ್ಧವಾಗುತ್ತಿದೆ ಹೊಸ ಲಕ್ಷುರಿ ವಾಹನ

  ಮೇಕೆದಾಟು ಪಾದಯಾತ್ರೆ (Mekedatu Padayatra), ಸಿದ್ದರಾಮೋತ್ಸವ (Siddaramotsava) ಬಳಿಕ ಕಾಂಗ್ರೆಸ್ (Congress) ಮತ್ತೊಂದು ಮೆಗಾ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ. ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ಹೋರಾಟ ನಡೆಸಲು ಮಾಜಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೆಗಾ rallyಗೆ ರಥಯಾತ್ರೆ ಎಂದು ಹೆಸರಿಡಲು ಕಾಂಗ್ರೆಸ್ ಪ್ಲಾನ್ ಮಾಡಿದೆಯಂತೆ. ಒಂದು ವಾಹನದಲ್ಲಿ ಕಾಂಗ್ರೆಸ್ ನಾಯಕರು ತೆರಳಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

  ಇದನ್ನೂ ಓದಿ:  Bengaluru: ಹುಡುಗಿ ಅಂಗಲಾಚಿದ್ರೂ ಬಿಡದ ಕಿರಾತಕರು; ನಡುರಸ್ತೆಯಲ್ಲೇ ಡಿಶುಂ-ಡಿಶುಂ

  ಸಿದ್ದರಾಮಯ್ಯ ಅವರ ಈ ರಥ ಯಾತ್ರೆಗೆ ಹೈಟೆಕ್ ಬಸ್ ರೆಡಿಯಾಗುತ್ತಿದೆ. ಇದು ಅತ್ಯಂತ ಸುಸಜ್ಜಿತವಾದ ಬಸ್ ಆಗಿದ್ದು, ಇಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗುವ ಎಲ್ಲಾ ತಂತ್ರಜ್ಞಾನ ಇದರಲ್ಲಿರಲಿದೆ. ಮಿತ್ಸುಬಿಷಿ ಎಂಬ ಕಂಪನಿ ಈ ವಾಹನವನ್ನು ವಿನ್ಯಾಸ ಮಾಡಲಿದೆ.
  Published by:Mahmadrafik K
  First published: