HOME » NEWS » State » KPCC PRESIDENT DK SHIVAKUMAR MET MUSLIM PRIESTS WITH SALIM AHMED AND TAKEN THEIR BLESSING IN BANGALORE MAK

ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಪ್ರಾರ್ಥನೆ ವೇಳೆ ಇಡೀ ಮಾನವ ಕುಲದ ರಕ್ಷಣೆಗೆ ಪ್ರಾರ್ಥಿಸಲಾಗಿದೆ. ಇದು ಧರ್ಮದ ವಿಚಾರವಲ್ಲ. ಮಾನವಕುಲದ ಒಳಿತಿನ ವಿಚಾರ. ಎಲ್ಲ ಧರ್ಮದ ಉತ್ತಮ ವಿಚಾರ, ಹೀಗಾಗಿ ನಾವು ಭಾವನೆಗಳ ಜತೆ ನಾವು ನಿಲ್ಲುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

news18-kannada
Updated:July 8, 2020, 7:08 PM IST
ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಇಸ್ಲಾಂ ಧರ್ಮಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್‌.
  • Share this:
ಬೆಂಗಳೂರು (ಜುಲೈ 08); ಕಳೆದ ವಾರ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ  ಡಿ.ಕೆ. ಶಿವಕುಮಾರ್ ಇಂದು ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್ ನಲ್ಲಿ ಮುಸ್ಲಿಂ ಧರ್ಮಗುರುಗಳಾದ ಅಮಿರ್-ಇ-ಷರಿಯತ್, ಮುಫ್ತಿ ಸಗೀರ್ ಅಹಮದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯ, ದೇಶ ಹಾಗೂ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದ ಮುಕ್ತಿ ನೀಡುವಂತೆ  ಪ್ರಾರ್ಥನೆ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ, "ಡಿ.ಕೆ. ಶಿವಕುಮಾರ್, ಅರೇಬಿಕ್ ವಿದ್ಯಾ ಸಂಸ್ಥೆ ಧರ್ಮ ಹಾಗೂ ಶಾಂತಿಯನ್ನು ಕಾಪಾಡಲು ಇರುವ ಪವಿತ್ರ ಸಂಸ್ಥೆ. ಈ ಧರ್ಮ ಪೀಠದ ಪ್ರಮುಖರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ನಾನು ಎಲ್ಲ ಧರ್ಮಗಳನ್ನು ನಂಬಿ ಗೌರವಿಸುತ್ತಾ ಬಂದಿದ್ದೇನೆ. ಜಾತ್ಯಾತೀತ ತತ್ವಕ್ಕೆ ಒಟ್ಟುಕೊಟ್ಟಿದ್ದೇನೆ. ಧರ್ಮಗುರುಗಳ, ಗುರುಹಿರಿಯರ ಆಶೀರ್ವಾದ ಪಡೆದಿದ್ದು, ಬಹಳ ಸಂತೋಷವಾಗಿದೆ" ಎಂದಿದ್ದಾರೆ.

"ಪ್ರಾರ್ಥನೆ ವೇಳೆ ಇಡೀ ಮಾನವ ಕುಲದ ರಕ್ಷಣೆಗೆ ಪ್ರಾರ್ಥಿಸಲಾಗಿದೆ. ಇದು ಧರ್ಮದ ವಿಚಾರವಲ್ಲ. ಮಾನವಕುಲದ ಒಳಿತಿನ ವಿಚಾರ. ಎಲ್ಲ ಧರ್ಮದ ಉತ್ತಮ ವಿಚಾರ, ಹೀಗಾಗಿ ನಾವು ಭಾವನೆಗಳ ಜತೆ ನಾವು ನಿಲ್ಲುತ್ತೇವೆ. ಆದರೆ, ಇತ್ತೀಚೆಗೆ ಕೊರೋನಾ ಸೋಂಕು ಹರಡುವಿಕೆ ಸಂಬಂಧ ರಾಜಕೀಯ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಯಿತು.

ಇದನ್ನೂ ಓದಿ: Siddaramaiah: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಸಾಧಿಸಿ ತಪ್ಪು ಮಾಡಿದೆವು; ಸಿದ್ದರಾಮಯ್ಯ

ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಎಲ್ಲರ ಹಿತ ಕಾಯಲು ಬದ್ಧವಾಗಿದೆ. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣಬೇಕು. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ" ಎಂದು ಡಿ.ಕೆ. ಶಿವಕುಮಾರ್‌‌ ತಿಳಿಸಿದ್ದಾರೆ.
Published by: MAshok Kumar
First published: July 8, 2020, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories