ಕೊಪ್ಪಳ (ಡಿ.16): ಕೊಪ್ಪಳದ ಕುಷ್ಟಗಿಯಲ್ಲಿ ಕಾಂಗ್ರೆಸ್ ಸಮಾವೇಶ (Congress Convention) ಹಮ್ಮಿಕೊಂಡಿತ್ತು. ಇದೇ ವೇಳೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾತಿನ ಆರಂಭದಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿಯವರು (BJP) ಜನಸಂಕಲ್ಪ ಯಾತ್ರೆ ಹೊರಟಿದ್ದಾರೆ. ಮೂರು ವರ್ಷ ಅಧಿಕಾರ ಮಾಡಿದ್ದೀರ ಏನೇನು ಕೊಡುಗೆ ಕೊಟ್ಟಿದ್ದೀರಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಸಾಲ ಮನ್ನಾ, ರೈತರ ಡಬಲ್ ಆದಾಯ ಮಾಡಲು ಹೇಳಿದ್ದು ಆಗಿದಿಯೇ? ಸಿಲಿಂಡರ್ ದರ (Cylinder Rate) ಏರಿಸಿದ್ದಾರೆ. ಬೆಲೆಯೇರಿಕೆ ಗಗನಕ್ಕೇರುತ್ತಿದೆ. ಬಿಜೆಪಿ ನಿಮ್ಮ ಬಳಿ ಪಿಕ್ ಪಾಕೇಟ್ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸಿಎಂ ನಮ್ಮ ಪ್ರಶ್ನೆಗೆ ಉತ್ತರಿಸಿಲ್ಲ
ಬಿಜೆಪಿಯವರು 600 ಭರವಸೆ ಕೊಟ್ಟಿದ್ದಾರೆ. ಶೇ 90 ರಷ್ಟು ಈಡೇರಿಸಲು ಆಗಿಲ್ಲ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಕೇಳುತ್ತಿದ್ದೇವೆ, ಅವುಗಳಿಗೆ ಉತ್ತರಿಸಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಾಕತ್ತಿದ್ರೆ ತನಿಖೆ ಮಾಡಿಸಲಿ
ಪಿಎಸ್ ಐ, ಶಿಕ್ಷಕರು, ಕ್ಲರ್ಕ್ ನೇಮಕಾತಿಯಲ್ಲಿ ಲಂಚ ಪಡೆದಿದ್ದಾರೆ. ಐಎಎಸ್ , ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಈ ಪ್ರಕರಣಗಳ ಬಗ್ಗೆ ತನಿಖೆ ಮಾಡಿಸಲು ತಾಕತ್ತಿಲ್ವಾ? ಧಮ್ಮಿದ್ರೆ ತನಿಖೆ ನಡೆಸಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ. ನಮ್ಮ ಆಡಳಿತದಲ್ಲಿ ಲೋಪವಾಗಿದ್ದರೆ ತನಿಖೆ ಮಾಡಿಸಲಿ ಎಂದು ಹೇಳಿದ್ದಾರೆ.
ಯಾವ ಗೋಡೆ ಮುಟ್ಟಿದರೂ ಕಾಸು ಕಾಸು ಎನ್ನುತ್ತಿವೆ
ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ. ಈ ಸರ್ಕಾರದ ಕೊಠಡಿಯಲ್ಲಿ ಯಾವುದೇ ಗೋಡೆ ಮುಟ್ಟಿದರೂ ಕಾಸು ಕಾಸು ಎನ್ನುತ್ತಿವೆ. ಬಿಜೆಪಿ ಸರ್ಕಾರಕ್ಕೆ ಕಣ್ಣಿಲ್ಲ, ಹೃದಯವಿಲ್ಲ, ಸಚಿವರ ಮಧ್ಯೆ ಲಂಚಕ್ಕೆ ಪೈಪೋಟಿ ನಡೆದಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾವು ಸಮಿಕ್ಷೆ ಮಾಡಿದ್ದೇವೆ. ಕಾಂಗ್ರೆಸ್ 136 ಸ್ಥಾನ, ಬಿಜೆಪಿ 66 ಸ್ಥಾನ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಇತ್ತ ಯಡಿಯೂರಪ್ಪ ಭಿನ್ನಾಭಿಪ್ರಾಯವಿಲ್ಲ ಎನ್ನುತ್ತಿದ್ದಾರೆ. ಆದ್ರೆ ಅವರ ಪಕ್ಷದವರಾದ ಧಾರವಾಡ ಎಂಎಲ್ಎ, ಯತ್ನಾಳ ಮಾತು ಮರೆತು ಬಿಟ್ಟಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದ್ರು.
ನಾನು ಕುಷ್ಟಗಿಯಿಂದ ಸ್ಪರ್ಧಿಸುವುದಿಲ್ಲ
ಕುಷ್ಟಗಿಯಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ , ಸೋಲು ಕೂಡ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. 1991 ರಲ್ಲಿ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದ್ದೆ. ಆಗ ರಾಜೀವ ಗಾಂಧಿ ಹತ್ಯೆಯಾಗದಿದ್ದರೆ ನಾನು ಗೆಲ್ಲುತ್ತಿದ್ದೆ. ಆಗ ನಾನು ಲೋಕಸಭೆಯಲ್ಲಿರುತ್ತದೆ. ಸಿಎಂ ಆಗುತ್ತಿರಲಿಲ್ಲ. ನಾನು ಕುಷ್ಟಗಿಯಿಂದ ಸ್ಪರ್ಧಿಸುವುದಿಲ್ಲ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ರು.
ನಿಮ್ಮ ಸರಕಾರ ಲಂಚದ ಸರಕಾರ- ಸಿದ್ದರಾಮಯ್ಯ
ರಾಜ್ಯದಲ್ಲಿ ಬಿಜೆಪಿ ಲಂಚ ರಹಿತ ಸರಕಾರ ಎಂದು ನಡ್ಡಾ ಹೇಳಿದ್ದಾರೆ. ನೀವು ಪ್ರಗತಿ ಕಾರ್ಡ್ ತೆಗೆದುಕೊಂಡು ಹೋಗಿದ್ದಾರೆ. ಮೂರು ವರ್ಷ ಸಚಿವರು ಲಂಚ ಪಡೆದಿದ್ದಾರೆ. ನಡ್ಡಾರವರಿಗೆ ನಾಚಿಕೆಯಾಗುವುದಿಲ್ಲವೇ?, ಮಿಸ್ಟರ್ ನಡ್ಡಾ, ನಿಮ್ಮ ಸರಕಾರ ಲಂಚದ ಸರಕಾರ ಎಂದು ವಿಧಾನಸೌಧ ಗೋಡೆಗಳು ಮಾತನಾಡುತ್ತವೆ. ಬಸವರಾಜ ಬೊಮ್ಮಾಯಿ ಸರಕಾರ 40 ಪರ್ಸೆಂಟ್ ಹೊಡೆಯುತ್ತಿದೆ. ಮೋದಿಯವರೆ ಏನು ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನೆಸಿದ್ದಾರೆ. ಕೆಆರ್ ಪುರಂ ಇನ್ಸ್ಪೆಕ್ಟರ್ ಸಾವಿಗೆ 70-80 ಲಕ್ಷ ಹಣ ಕೊಟ್ಟು ಬಂದಿದ್ದಾನೆ ಎಂದು ಎಂಟಿಬಿ ನಾಗರಾಜ ಹೇಳಿದ್ದಾನೆ.
ಇದನ್ನೂ ಓದಿ: CM Bommai: ಕಾಂಗ್ರೆಸ್ ಹೈಕಮಾಂಡ್ಗೆ ಸಿಎಂ ಬೊಮ್ಮಾಯಿ ಸವಾಲು
ಯಡಿಯೂರಪ್ಪ ಹಾಗು ಬೊಮ್ಮಾಯಿ ಮಧ್ಯೆ ವೈಮನಸ್ಸು ಬಂದಿದೆ
ಬೊಮ್ಮಾಯಿ ಆರ್ ಎಸ್ ಎಸ್ ಕುಳಿತುಕೊ ಎಂದರೆ ಕುಳಿತುಕೊಳ್ತಾರೆ. ಆರ್ ಎಸ್ ಎಸ್ ಮಾತು ಕೇಳುವ ಬೊಮ್ಮಾಯಿಯನ್ನು ಸಿಎಂ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ