ಕಾಂಗ್ರೆಸ್ ಎಂದಿಗೂ ದೇಶದಿಂದ ಮುಕ್ತವಾಗಲ್ಲ, ಗಾಂಧಿ ಕುಟುಂಬ ನಾಶವಾಗಲ್ಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​

ಕಾರ್ಯಕರ್ತರ ಹುರುಪನ್ನ ಹೆಚ್ಚಿಸಬೇಕಿದ್ದು, ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯನ್ನಾಗಿ ಮಾಡಲ್ಲ. ಪಕ್ಷವನ್ನು ಕೆಳಹಂತದಲ್ಲಿ ಗಟ್ಟಿಗೊಳಿಸಿ ತೋರಿಸುತ್ತೇವೆ ಎಂದು ಪರೋಕ್ಷವಾಗಿ ಹಿರಿಯ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್​

ಡಿಕೆ ಶಿವಕುಮಾರ್​

  • Share this:
ಬೆಂಗಳೂರು (ಮಾ.16) : ನನಗೆ  ಅಧ್ಯಕ್ಷನಾಗಬೇಕೆಂಬ ಆಸೆಯಿರಲಿಲ್ಲ, ಕಾರ್ಯಕರ್ತರು, ಮುಖಂಡರ ಅಭಿಪ್ರಾಯಕ್ಕೆ ಅವಕಾಶ ಕೊಟ್ಟಿದೆ. ನಾವು ಮೂವರು ಒಟ್ಟಾಗಿ ಸೇರಿ ಪಕ್ಷ ಸಂಘಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ‌ಹೈಕಮಾಂಡ್ ಹಲವು ಗೊಂದಲಕ್ಕೆ ತೆರೆ ಎಳೆದಿದ್ದು, ವಿಶ್ವಾಸವಿಟ್ಟು ನಮ್ಮ‌ಜೊತೆ ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಿ, ಜವಾಬ್ದಾರಿ ವಹಿಸಿದೆ. ಅಧಿಕಾರ ಎನ್ನುವುದನ್ನ ಬಿಟ್ಟು ಕೆಲಸ ಮಾಡಬೇಕಿದೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು

ನಮ್ಮ ಪಕ್ಷ ಮಾತ್ರ ದೇಶವನ್ನ ಉಳಿಸುವುದು, ಇದನ್ನ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಎಂದಿಗೂ ದೇಶದಿಂದ ಮುಕ್ತವಾಗಲ್ಲ. ಗಾಂಧಿ ಕುಟುಂಬ ನಾಶವಾಗಲ್ಲ. ಗಾಂಧಿ ಫ್ಯಾಮಿಲಿ ತ್ಯಾಗ ಮಾಡಿ ಈ ದೇಶ ಉಳಿಸುತ್ತಿದೆ. ಇದನ್ನ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಕ್ವಾಂಟಿಟಿ ಬೇಕಿಲ್ಲ, ಕ್ವಾಲಿಟಿ ಬೇಕಿದೆ. ಹಾಗಾಗಿ ನಮ್ಮ ಮೊದಲ ಆದ್ಯತೆ ಶಿಸ್ತು ಅಷ್ಟೇ ಮುಖ್ಯ ಎಂದು ತಿಳಿಸಿದರು.

ಕಾರ್ಯಕರ್ತರ ಹುರುಪನ್ನ ಹೆಚ್ಚಿಸಬೇಕಿದ್ದು, ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯನ್ನಾಗಿ ಮಾಡಲ್ಲ. ಪಕ್ಷವನ್ನು ಕೆಳಹಂತದಲ್ಲಿ ಗಟ್ಟಿಗೊಳಿಸಿ ತೋರಿಸುತ್ತೇವೆ ಎಂದು ಪರೋಕ್ಷವಾಗಿ ಹಿರಿಯ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದರು.

ಕೊರೋನಾ ಮಹಾಮಾರಿ ದೇಶದಲ್ಲಿ ಬಂದಿದೆ. ಕೇಂದ್ರ ಸರ್ಕಾರದ ಮೇಲೆ ಯಾವುದೇ ಆರೋಪ ಮಾಡಲ್ಲ. ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ನಾವು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಲ್ಲ. ಅಧಿವೇಶನ ಮುಗಿದ ನಂತರ ಹೋಗುತ್ತೇವೆ. ನಾವು ನಾಲ್ವರು, ಹಿರಿಯ ನಾಯಕರು ದೆಹಲಿಗೆ ಭೇಟಿ ನೀಡುತ್ತೇವೆ. ಒಟ್ಟಾಗಿ ಹೋಗಿ ಹೈಕಮಾಂಡ್ ಭೇಟಿ ಮಾಡಿ, ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು.

ಇದನ್ನೂ ಓದಿ : ಬಫರ್​ ಜೋನ್​ ಲೆಕ್ಕಿಸದೆ, ಬೆಂಗಳೂರು ಕೆರೆಗಳಿಗೆ ಮಣ್ಣು ಸುರಿದು ಅಕ್ರಮವಾಗಿ ಒತ್ತುವರಿ; ಶಾಸಕ ಆರಗ ಜ್ಞಾನೇಂದ್ರ ಆರೋಪ

ಪದಗ್ರಹಣ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ, ರಾಹುಲ್  ಗಾಂಧಿಯವರಿಗೆ ಇನ್ನೂ ಆಹ್ವಾನ ನೀಡಿಲ್ಲ. ಸೋನಿಯಾ, ರಾಹುಲ್ ಬರುತ್ತಾರೆ ಎಂದು ಹೆಸರು ಹಾಕಬೇಡಿ ಎಂದು ವರದಿಗಾರರಿಗೆ ಡಿಕೆಶಿ ಮನವಿ ಮಾಡಿದರು.
First published: