ರಾಮನಗರ(ಫೆ.28) : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ(HD Kumaraswamy) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Shivakumar) ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆ 2.0 ಪ್ರಾರಂಭವಾದ ಹಿನ್ನೆಲೆ, ಬಿಡದಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಚಾಟಿ ಬೀಸಿದರು. ಕಲ್ಲಿನ ಮಕ್ಕಳು ಯಾರು? ಮಣ್ಣಿನ ಮಕ್ಕಳು ಯಾರೆಂದು ಜನರಿಗೆ ಗೊತ್ತಿದೆ ಎಂದಿದ್ದ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲಿಂದ ಮಣ್ಣು, ದಿಂಡು, ಜಲ್ಲಿ ಕೊನೆಗೆ ಮರಳು, ಮಣ್ಣು ಅದನ್ನ ನಾವು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ನಮ್ಮಣ್ಣ ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಲಿ, ಕಲ್ಲಿನ ಮಕ್ಕಳು ಎಂದಿದ್ದ ಕುಮಾರಸ್ವಾಮಿಗೆ ಈ ಮೂಲಕ ಟಾಂಗ್ ನೀಡಿದರು.
ಇನ್ನು ಪಾದಯಾತ್ರೆಯಲ್ಲಿ ಮಜ್ಜಿಗೆ, ಹಣ್ಣು, ಎಳನೀರು ಕೊಟ್ರು ಬೇಡ ಎನ್ನಲು ಆಗುತ್ತಾ? ಆದರೆ ಇದರ ಬಗ್ಗೆ ಜೆಡಿಎಸ್ - ಬಿಜೆಪಿ ಟೀಕೆ ಮಾಡ್ತಿವೆ ಎಂದರು. ಇನ್ನು ಮಾಗಡಿಯ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರನ್ನು ನೋಡಿ, ಕುಮಾರಸ್ವಾಮಿ ಗೆ ಟಾಂಗ್ ನೀಡಿದ ಡಿಕೆಶಿ, ನನಗೆ ಬಾಲಕೃಷ್ಣ ಹೊಡೆದರೆ ತಡೆಯಬಹುದು, ಕೈ ಹಿಡಿಯಬಹುದು. ಆದರೆ ಬಾಯಿಗೆ ಬಂದಂತೆ ಬೈದರೆ ನಾಲಿಗೆ ಹಿಡಿಯಲು ಸಾಧ್ಯವಿಲ್ಲ, ರಕ್ಷಣೆಗೆ ಹಲ್ಲಿದೆ. ಅಣ್ಣ ಯಾಕಣ್ಣಾ ಮಾತನಾಡ್ತಿದ್ದೀಯ, ಜನ ಛೀ ಥೂ ಅಂತಿದ್ದಾರೆ. ಮೊದಲು ನಾಲಿಗೆ ರಕ್ಷಣೆ ಮಾಡಿಕೊಳ್ಳಣ್ಣ ಎಂದು ಡಿಕೆಶಿ ಕುಮಾರಸ್ವಾಮಿಗೆ ಮಾರ್ಮಿಕವಾಗಿ ಕಿಚಾಯಿಸಿದರು.
ಇದನ್ನೂ ಓದಿ:Ukraineನಲ್ಲಿ ಪರದಾಡುತ್ತಿದ್ದಾರೆ ರಾಜ್ಯದ ವಿದ್ಯಾರ್ಥಿಗಳು! "Please Help Me..." ಅಂದ್ರೆ ಕೇಳೋರಾರು?
ಈ ಹಿಂದೆ ದೇವೇಗೌಡರು, ಎಸ್.ಎಂ.ಕೃಷ್ಣ ಸಹ ಪಾದಯಾತ್ರೆ ಮಾಡಿದ್ದರು. ನಾವು ನೀರಿಗಾಗಿ ಹೋರಾಟ ಮಾಡ್ತಿದ್ದೇವೆ. ಮಹಾತ್ಮ ಗಾಂಧಿಯವರ ತತ್ವಸಿದ್ಧಾಂತದ ಮೇಲೆ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ಜೆಡಿಎಸ್ ನವರು ಭಾಗವಹಿಸಿದ್ದಾರೆ. ಕಾಂಗ್ರೆಸ್ ಮುಂದಾಳತ್ವ ವಹಿಸಿದೆ ಅಷ್ಟೇ. ಈಗ ಜೆಡಿಎಸ್ನವರು ಜಲಧಾರೆ ಹೋರಾಟ ಮಾಡಲು ಹೊರಟಿದ್ದಾರೆ. ಆದರೆ ನನಗೆ ಅದರ ಬಗ್ಗೆ ಯಾವ ತಕರಾರು ಇಲ್ಲ, ನಾನು ಸ್ವಾಗತ ಮಾಡ್ತೇನೆ. ಅವರ ಹೋರಾಟ ಅವರದ್ದು, ನಮ್ಮ ಹೋರಾಟ ನಮ್ಮದು ಎಂದರು.
ಇದು ಪಾದಯಾತ್ರೆ ಅಲ್ಲ, ಮನರಂಜನೆಯ ಜಾತ್ರೆ - ಹೆಚ್.ಡಿ.ಕೆ
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ ಮೇಕೆದಾಟು 2.0 ಪಾದಯಾತ್ರೆ ಪ್ರಾರಂಭ ಆಗ್ತಿದೆ. ರಾಮನಗರದಲ್ಲಿ ನಾಯಕರ ಫೋಟೋ ಹಾಕಿಕೊಂಡು ಬಲೂನ್ ಹಾರಿಸಿಕೊಂಡು ಕೂತಿದ್ದಾರೆ. ರಾಮನಗರದಲ್ಲಿ ಬಲೂನ್ ಗಳು ರಾರಾಜಿಸುತ್ತಿವೆ. ನೋಡಿಕೊಂಡು ಬಂದೆ, ಜಾತ್ರೆ ರೀತಿ ಮಾಡ್ತಿದ್ದಾರೆ, ಇದು ನೀರು ತರುವ ಪಾದಯಾತ್ರೆನಾ? ಇದು ಅವರ ಪಕ್ಷದ ಪ್ರಚಾರಕ್ಕೆ ಮಾಡ್ತಿರುವ ಪಾದಯಾತ್ರೆ. ಮೇಕೆದಾಟು ಕಾಮಗಾರಿ ಪ್ರಾರಂಭ ಮಾಡಲು ಯಾರ ಒಪ್ಪಿಗೆ ಬೇಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Belagavi: ಸಚಿವರ ಸಭೆಯಲ್ಲಿ ಗಾಂಜಾ ಘಾಟು ಪ್ರಸ್ತಾಪ; ಪೊಲೀಸ್ ಅಧಿಕಾರಿಗಳ ವಿರುದ್ಧ ಶಾಸಕರು ಗರಂ
ರಾಮಲಿಂಗಾರೆಡ್ಡಿ ಈ ಕುರಿತು ಹೇಳಿದ್ದಾರೆ. 5 ವರ್ಷ ಸರ್ಕಾರ ಇದ್ದಾಗ ಮಾಡಿದ್ದರೆ ಬಿಸಿಲಿನಲ್ಲಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೊದಲ ಹಂತದ ಪಾದಯಾತ್ರೆ ನಿಲ್ಲಲು ಕುಮಾರಸ್ವಾಮಿ ಎಂಬ ವಿಚಾರಕ್ಕೆ ಮಾತನಾಡಿ, ಕುಮಾರಸ್ವಾಮಿ ಶಕ್ತಿ ದೊಡ್ಡಮಟ್ಟದಲ್ಲಿದೆ ಎಂದು ಅಂದುಕೊಂಡಿದ್ದಾರಲ್ಲ ಅಷ್ಟು ಸಾಕು ಬನ್ನಿ, ಈ ಪಾದಯಾತ್ರೆಯಿಂದ ಯಾವ ಟಾಂಗ್ ಕೊಟ್ಟರೂ ತಲೆಕೆಡಿಸಿಕೊಳ್ಳಲ್ಲ. ನಮಗೆ ನಮ್ಮ ರಾಜ್ಯದ ನೀರು ಉಳಿಸಿಕೊಳ್ಳಬೇಕು, ಅದು ಇವರಿಂದ ಆಗಲ್ಲ. 5 ವರ್ಷ ನಮಗೆ ಸರ್ಕಾರ ಕೊಡಲಿ ಜನರು ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕಾರ ಮಾಡಿ, ನಮಗೆ ಅಧಿಕಾರ ಕೊಡಲಿ. ರಾಜ್ಯದ ನೀರಾವರಿ ಉಳಿಸುವ ಸೂತ್ರ ನಮ್ಮ ಬಳಿ ಇದೆ ಎಂದರು.
ವರದಿ : ಎ.ಟಿ.ವೆಂಕಟೇಶ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ