ಚಿತ್ರದುರ್ಗ(ಜೂ.13): ಸಾರ್ವಜನಿಕರ ಜೇಬನ್ನು ಪಿಕ್ ಪಾಕೆಟ್ ಮಾಡುತ್ತಿರುವ ಬಿಜೆಪಿ ಸರ್ಕಾರ, ತನ್ನ ಜೇಬನ್ನ ತುಂಬಿಸಿಕೊಳ್ಳುತ್ತಿದೆ. ಹೆಣದಲ್ಲಿಯೂ ಬಿಜೆಪಿಯವರು ಹಣ ಹೊಡೆದಿದ್ದಾರೆ ಎಂದು ಹಿರಿಯೂರಲ್ಲಿ KPCC ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿದ ಡಿಕೆ ಶಿವಕುಮಾರ್, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾನು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪಗೆ ಕೇಳುತ್ತೇನೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ರಲ, ನಮ್ಮ ರೈತರಿಗೆ ಬೆಂಬಲ ಬೆಲೆಯನ್ನೇನಾದರೂ ಏರಿಸಿದ್ದೀರೇನ್ರಿ? ತರಕಾರಿ ಸೇರಿ ರೈತ ಬೆಳೆದ ಎಲ್ಲಾ ಬೆಳೆಗೆ ಅನೂಕೂಲ ಆಗುವಂತೆ ಬೆಲೆ ಏರಿಸಿದ್ದೀರಾ? ಎಂದು ಪ್ರಶ್ನಿಸಿದರು.
ಮುಂದುವರೆದ ಅವರು, ಇಲ್ಲಾ ಸರ್ಕಾರಿ, ಖಾಸಗಿ ನೌಕರರು, ದಿನಗೂಲಿ ನೌಕರರಿಗೆ ವೇತನ, ನರೇಗಾ ಯೋಜನೆಯಲ್ಲಿ ಕೂಲಿ ದರವನ್ನಾದರೂ ಹೆಚ್ಚಿಸಿದ್ದೀರೇನ್ರಿ, ನಿಮ್ಮ ಜೇಬು ಮಾತ್ರ ತುಂಬಬೇಕಾ? ಆ ಬಡವರು ಏನು ಮಾಡಿದ್ದಾರೆ? ಶ್ರೀ ಸಾಮಾನ್ಯರು, ದಳದವರೇ ಈ ಸರ್ಕಾರವನ್ನ ಕಿತ್ತು ಹೊಗೆಯಬೇಕು ಎಂದು ಭಾರತದ ಉದ್ದಗಲಕ್ಕೂ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿಂದ ಶುರುವಾಗಿರೋ ಈ ಪ್ರತಿಭಟನೆ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಆಗುತ್ತದೆ. ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೇ ಕಡ್ಡಾಯವಾಗಿ ನಮ್ಮ ಲೀಡರ್ಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:Covid Free villages: ಕೊರೋನಾ ಮುಕ್ತವಾಗುತ್ತಿದೆ ಹಳ್ಳಿಗಳು; ಮೈ ಮರೆತರೆ ಅಪಾಯ...
ಇನ್ನೂ ವಾಕ್ಸಿನ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಸರಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ರಾಜಕೀಯ ನಡೆಯೋದಿಲ್ಲ ಎಂಬ ಸಚಿವ ಬಿಸಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್, ಅದ್ಯಾವ ಬಿಸಿ ಪಾಟೀಲೋ ಅವರ ಹೆಸರು ಬೇಡ, ಹೆಣ ಸುಡೋಕೆ, ಬೆಡ್ ತಗಳೋಕೆ, ಆ್ಯಂಬುಲೆನ್ಸ್ಗೆ, ಔಷಧಿ, ಆಕ್ಸಿಜನ್ ಗೂ ಕ್ಯೂ ಆಗಿದೆ. ರೆಮ್ಡಿಸಿವಿರ್, ಬ್ಯಾಂಕ್ ಸೇರಿದಂತೆ ಎಲ್ಲದಕ್ಕೂ ಕ್ಯೂ ಆಯ್ತಲ್ಲ, ಬಿಜೆಪಿಯವರು ಇನ್ನೇನು ಜನರನ್ನ ಕಾಪಾಡಿದ್ದಾರೆ? ಎಂದು ಪ್ರಶ್ನಿಸಿದರು.
ಅಲ್ಲದೇ ಬಿಜೆಪಿಯವರು ಹೆಣದಲ್ಲಿ, ಔಷಧಿಯಲ್ಲಿ, ಬೆಡ್ನಲ್ಲೂ ಹಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಈ ಎಲ್ಲಾ ಖಾಯಿಲೆ ತಂದವರು ನಾವಲ್ಲ, ಕಾಯಿಲೆ ತಂದ ಅವರು ಮಾಡಿರುವುದೇನು, ಜನ ಅವರನ್ನ ಉಗಿತಾ ಇದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಮಾನವೀಯತೆ ಮರೆತು ಮಾನಸಿಕ ಅಸ್ವಸ್ಥನ ಮೇಲೆ ಪೊಲೀಸರ ಹಲ್ಲೆ : ಖಾಕಿ ಕ್ರೌರ್ಯಕ್ಕೆ ಅಮಾಯಕ ಬಲಿ!
ಇನ್ನು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಿಎಂ ಬದಲಾವಣೆ, ಬಿಜೆಪಿ ನಾಯಕರ ದೆಹಲಿ ಭೇಟಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರು ಏನೇನು ಸಿನಿಮಾ ತೋರಿಸುತ್ತಾರೋ ನಾವು ನೋಡುತ್ತಾ ಇರುತ್ತೇವೆ ಎಂದು ಹೇಳಿದರು. ಇನ್ನೂ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುತ್ರಿರುವ ಕಾರ್ಯಕ್ರಮ ಐದು ದಿನಗಳವರೆಗೆ ಇರುತ್ತದೆ. ಬಿಜೆಪಿಯವರು ಈ ಹಿಂದೆ ಬೆಲೆ ಏರಿಕೆ ಖಂಡಿಸಿ ಇದೇ ಕೆಲಸ ಮಾಡಿದ್ದಾರಲ್ಲ. ಅದನ್ನೇ ನಾವು ಮುಂದುವರೆಸುತ್ತಿದ್ದೇವೆ ಎಂದರು.
ಅವರು ಬರೀ 52 ರೂಪಾಯಿಗೆ ದೊಡ್ಡ ಹೋರಾಟ ಮಾಡಿದ್ದರು, ಈಗ 100 ರೂಪಾಯಿ ಆಗಿದೆ . ಈ ವರ್ಷದಲ್ಲಿಯೇ ಸಾಕಷ್ಟು ಬಾರಿ ಬೆಲೆ ಏರಿಕೆ ಮಾಡಿದ್ದಾರೆ. 100 ರೂ ಮುಟ್ಟಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಹಲವಾರು ಕಡೆ ಪ್ರತಿಭಟನೆ ಮಾಡಿ ತಮಟೆ ಹೊಡೆಯುತ್ತಿದ್ದಾರೆ, ಜಾಗಟೆ ಬಾರಿಸುತ್ತಿದ್ದಾರೆ, ಸ್ವೀಟ್ ಹಂಚುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೀವೇ ಬಿಜೆಪಿಯರು ಹೇಳಿ ಕೊಟ್ಟಿದ್ದು ಎಂದು ವ್ಯಂಗ್ಯ ಮಾಡಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ