DK Shivakumar: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ; ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ವ್ಯಂಗ್ಯ

ಬಿಬಿಎಂಪಿ‌ ಚುನಾವಣೆ ನಡೆಸ್ರಿ. ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆ ನಡೆಸ್ರಿ,  ಯಾಕೆ ಚುನಾವಣೆಗಳನ್ನು ಮುಂದೂಡಿದ್ದೀರಿ.? ಕಾಂಗ್ರೆಸ್ ಪಕ್ಷದ ಶಕ್ತಿ ಏನು ಅಂತ ಗೊತ್ತಾಗುತ್ತದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಡಿ.ಕೆ. ಶಿವಕುಮಾರ್.

ಡಿ.ಕೆ. ಶಿವಕುಮಾರ್.

 • Share this:
  ಬೆಂಗಳೂರು(ಸೆ.07):  ನಾನು ತಿಹಾರ್ ಜೈಲಿ(Tihar Jail)ನಿಂದ ಬಂದ ವೇಳೆ, ಬ್ಯಾಟರಾಯನಪುರ ಕಾಂಗ್ರೆಸ್ ಕಾರ್ಯಕರ್ತರು (Congress Workers )ಮತ್ತು ಜನತೆ ನನಗೆ ನೀಡಿದ ಸ್ವಾಗತವನ್ನು ಜೀವನ ಪೂರ್ತಿ ಮರೆಯಲಾಗದು.  ಏಕೆಂದರೆ, ಇಡಿ ಕೇಸ್‌ ವಿಚಾರದಲ್ಲಿ ನಾನು ಜೈಲಿನಲ್ಲಿ ಇದ್ದ ವೇಳೆ, ನನ್ನ ರಾಜಕೀಯ ವಿರೋಧಿಗಳು ನನ್ನ ಮೇಲೆ ಸಾಕಷ್ಟು ಟೀಕೆ ಮಾಡಿದರೂ, ಅದ್ಯಾವೂದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ನನಗೆ ಅದ್ಧೂರಿಯಾಗಿ ಸ್ವಾಗತ ನೀಡಿದ್ದೀರಿ. ಅದನ್ನ ಈ ಜೀವನದಲ್ಲಿ ನಾನು ಮರೆಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar)​ ಬ್ಯಾಟರಾಯನಪುರ ಕಾರ್ಯಕ್ರಮದಲ್ಲಿ ಹೇಳಿದರು.

  ಇದೇ ವೇಳೆ ಪಾಲಿಕೆ ಚುನಾವಣೆ ವಿಚಾರವಾಗಿ  ಡಿಕೆಶಿ ಬಿಜೆಪಿ ನಾಯಕರಿಗೆ(BJP Leaders) ಸವಾಲು ಹಾಕಿದರು. ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಿಟ್ಟಿದ್ದೇವೆ ಎಂದು ಹೇಳಿದ್ದೀರಿ. ಬಿಬಿಎಂಪಿ‌ ಚುನಾವಣೆ ನಡೆಸ್ರಿ. ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆ ನಡೆಸ್ರಿ,  ಯಾಕೆ ಚುನಾವಣೆಗಳನ್ನು ಮುಂದೂಡಿದ್ದೀರಿ.? ಕಾಂಗ್ರೆಸ್ ಪಕ್ಷದ ಶಕ್ತಿ ಏನು ಅಂತ ಗೊತ್ತಾಗುತ್ತದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

  ಇದನ್ನೂ ಓದಿ:BBMP Workers Strike: ಬಿಬಿಎಂಪಿ ನೌಕರರ ಮುಷ್ಕರ, ಬೆಂಗಳೂರಿನ ಜನರಿಗೆ ನಾಳೆಯಿಂದ ಈ ಸೌಲಭ್ಯ ಸಿಗಲ್ಲ

  ಕೊರೋನಾ ಸಮಯದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನು ಮಾಡಲಿಲ್ಲ. ಕಾರ್ಪೊರೇಷನ್ ಚುನಾವಣೆ ನನಗೆ ತೃಪ್ತಿ ತಂದಿದೆ. ಕಲ್ಬುರ್ಗಿಯಲ್ಲಿ ನಾವು ಜಾಸ್ತಿ ಗೆದ್ದಿದ್ದೇವೆ. ಹುಬ್ಬಳ್ಳಿಯಲ್ಲಿ 33 ಸ್ಥಾನ ಗೆದ್ದಿದ್ದೇವೆ. ಕಳೆದ ಬಾರಿ ನಾವು ಕಡಿಮೆ ಗೆದ್ದಿದ್ದೆವು. ತರೀಕೆರೆಯಲ್ಲಿ ನಾವು ಗೆದ್ದಿದ್ದೇವೆ.  ಬೆಳಗಾವಿಯಲ್ಲಿ ಎಂಇಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿ ಹಾಕಿದ್ದಾರೆ ಎಂದರು.

  ಇನ್ನು, ಸಿದ್ದರಾಮಯ್ಯ ಮತ್ತು ಡಿಕೆಶಿ ಬೇರೆ ಬೇರೆ ಬಣ ಎಂಬ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಒಂದು ಬಣ ಮತ್ತು ಡಿಕೆ ಶಿವಕುಮಾರ್  ಬಣ ಎಂದು ಮಾಧ್ಯಮದವರು ಬಿಂಬಿಸುತ್ತಿದ್ದಾರೆ. ನಮ್ಮದು ಒಂದೇ ಬಣ ಕಾಂಗ್ರೆಸ್ ಬಣ ಎಂದು ಹೇಳಿದರು.

  ಈ ಚುನಾವಣಾ ಫಲಿತಾಂಶ ಯಾವುದೇ ದಿಕ್ಸೂಚಿ ಅಲ್ಲ. ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನ ನೋಡಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದರು.

  ನೀವು ಹಿಂದೂ ಎಂದು ಹೋಗ್ತೀರಾ.  ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗ್ತೀವಿ ಎಂದು ಡಿಕೆಶಿ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

  ಇದನ್ನೂ ಓದಿ:ಹೆಂಡತಿ ಗರ್ಭಿಣಿ ಅನ್ನೋದು ತಿಳಿದು ಗಂಡ ಶಾಕ್..! ಏನು ಮಾಡ್ಬೇಕು ಅಂತ ಎಲ್ರನ್ನೂ ಕೇಳ್ತಿದ್ದಾನೆ

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: