HOME » NEWS » State » KPCC PRESIDENT DK SHIVAKUMAR HITS BACK AT STATE GOVERNMENT ABOUT VACCINE SHORTAGE LG

ಸರ್ಕಾರದ ಕೈಯಲ್ಲಿ ಉಚಿತವಾಗಿ ಲಸಿಕೆ ಕೊಡೋಕೆ ಆಗಲಿಲ್ಲ ಅಂದ್ರೆ, ನಾವೇ ವ್ಯವಸ್ಥೆ ಮಾಡ್ತೀವಿ; ಡಿ.ಕೆ.ಶಿವಕುಮಾರ್

ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಡಬೇಕು.  ತರಕಾರಿ, ಹೂವು ಬೆಳಗಾರರಿಗೆ ದುಡ್ಡುಕೊಡಬೇಕು. ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡವರಿಗೆ ಉಚಿತ ಹಣ ಸಿಗಬೇಕು. ಇದೆಲ್ಲವನ್ನೂ ನಿಮ್ಮಿಂದ ಮ್ಯಾನೇಜ್ ಮಾಡೋಕಾಗ್ತಿಲ್ಲ. ಟೆಸ್ಟಿಂಗ್ ಅನ್ನೇ ಕಡಿಮೆ ಮಾಡ್ತಿದ್ದೀರಿ. ಬೇಕೂ ಅಂತ ನಂಬರ್ ಕಡಿಮೆ ಮಾಡಲು ಹೊರಟಿದ್ದೀರಿ ಎಂದು ಡಿಕೆಶಿ ಕಿಡಿಕಾರಿದರು.

news18-kannada
Updated:May 13, 2021, 2:53 PM IST
ಸರ್ಕಾರದ ಕೈಯಲ್ಲಿ ಉಚಿತವಾಗಿ ಲಸಿಕೆ ಕೊಡೋಕೆ ಆಗಲಿಲ್ಲ ಅಂದ್ರೆ, ನಾವೇ ವ್ಯವಸ್ಥೆ ಮಾಡ್ತೀವಿ; ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
  • Share this:
ಬೆಂಗಳೂರು(ಮೇ 13): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,  ಚಾಮರಾಜನಗರದ 24 ಜನರ ಕೊಲೆಗೆ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.  ನ್ಯಾಯಮೂರ್ತಿಗಳು ಇದೇ ವರದಿ ಕೊಟ್ಟಿದ್ದಾರೆ.  ಜನರ ಸಾವಿನ ಹೊಣೆ ಯಾರು ಹೊತ್ಕೊಳ್ತಾರೆ? ಇದನ್ನ ನೀವೇ ನಿರ್ಧಾರ ಮಾಡಬೇಕು. ಸರ್ಕಾರದವರು ಮಿಸ್ ಗೈಡ್ ಮಾಡುವ ಪ್ರಯತ್ನ ಮಾಡಿದರೂ,  ನ್ಯಾಯಮೂರ್ತಿಗಳೇ ವರದಿ ಕೊಟ್ಟಿದ್ದಾರೆ.  24 ಜನ ಸತ್ತಿದ್ದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾದರು.

ಮುಂದುವರೆದ ಅವರು, ಲಸಿಕೆ ವಿಚಾರವಾಗಿ ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ ನಡೆಸಿದರು. ಲಸಿಕೆ ಅಭಿಯಾನಕ್ಕೆ ಸಿಎಂ ಬೌರಿಂಗ್ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.  ಆಗ ಸರ್ಕಾರಕ್ಕೆ ಎಷ್ಟು ಲಸಿಕೆ ಇದೆ ಎನ್ನೋದು ಗೊತ್ತಿರಲಿಲ್ಲವೇ? ಕೇಂದ್ರವೇ ವ್ಯಾಕ್ಸಿನ್ ನೀಡಬೇಕು. ಸರ್ಕಾರದ ಕೈಯಲ್ಲಿ ಉಚಿತವಾಗಿ ಲಸಿಕೆ ಕೊಡೋಕಾಗ್ಲಿಲ್ಲ ಅಂದ್ರೆ, ನಾವೇ ಬೇಕಿದ್ರೆ ಅದಕ್ಕೆ ವ್ಯವಸ್ಥೆ ಮಾಡ್ತೀವಿ ಎಂದು ಹೇಳಿದರು.

ಫ್ರಾನ್ಸ್‌ನಷ್ಟು ವಿಸ್ತಾರವಾದ ಅರಣ್ಯವು ಕಳೆದ 20 ವರ್ಷಗಳಲ್ಲಿ ಬೆಳೆದಿದೆ; ಸಂಶೋಧನೆಯಿಂದ ಬಹಿರಂಗ

ಸರ್ಕಾರದ ಡಬಲ್ ಇಂಜಿನ್ ಈಗ ನಿಂತೋಗಿದೆ. ಕೋರ್ಟ್​​ ಕೂಡ ಸ್ವಲ್ಪ ನಮಗೆ ಸಹಾಯ ಮಾಡಿತು. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇವರ ಕೈಯಲ್ಲಿ ಪ್ಲ್ಯಾನಿಂಗ್ ಇಲ್ಲ, ಸರ್ಕಾರ ನಡೆಸೋಕಾಗ್ತಿಲ್ಲ ಎಂದು ಲೇವಡಿ ಮಾಡಿದರು.

ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಡಬೇಕು.  ತರಕಾರಿ, ಹೂವು ಬೆಳಗಾರರಿಗೆ ದುಡ್ಡುಕೊಡಬೇಕು. ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡವರಿಗೆ ಉಚಿತ ಹಣ ಸಿಗಬೇಕು. ಇದೆಲ್ಲವನ್ನೂ ನಿಮ್ಮಿಂದ ಮ್ಯಾನೇಜ್ ಮಾಡೋಕಾಗ್ತಿಲ್ಲ. ಟೆಸ್ಟಿಂಗ್ ಅನ್ನೇ ಕಡಿಮೆ ಮಾಡ್ತಿದ್ದೀರಿ. ಬೇಕೂ ಅಂತ ನಂಬರ್ ಕಡಿಮೆ ಮಾಡಲು ಹೊರಟಿದ್ದೀರಿ. ಗ್ಲೋಬಲ್ ಟೆಂಡರ್ ಅಂತೆ ಈಗ. ಯಾರ್ ಯಾರ ಹತ್ರ ಟೆಂಡರ್ ಆಗ್ತಿದೆ? ಯಾರ್​​ ‌ಯಾರ ಹತ್ರ ಮಾತುಕತೆ ಆಗ್ತಿದೆ? ಇನ್ನು ಏನೇನು ಮಾಡ್ತೀರಾ ಅಂತ ನೋಡೋಕೆ ಕಾಯ್ತಾ ಇದ್ದೀವಿ ನಾವು ಎಂದರು.
Youtube Video

ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ್ದೂ ತಪ್ಪಿದೆ, ಕೇಂದ್ರ ಸರ್ಕಾರದ್ದೂ ತಪ್ಪಿದೆ.  ಸಿದ್ದರಾಮಯ್ಯರವರು ಪತ್ರ ಬರೆದಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡರು.
Published by: Latha CG
First published: May 13, 2021, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories