D K Shivakumar: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆರೋಗ್ಯದಲ್ಲಿ ಏರುಪೇರು; ಯಾವುದೇ​ ಕಾರ್ಯಕ್ರಮಕ್ಕೂ ಬರಲ್ವಂತೆ ಡಿಕೆಶಿ

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್​ ಅವರು ಅನಾರೋಗ್ಯ ಉಂಟಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಈ ವೇಳೆ ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದರಂತೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ಬೆಂಗಳೂರು (ಸೆ. 20): ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಡಿ ವಿಚಾರಣೆಗೆ ಒಳಪಟ್ಟಿದ್ದ ಡಿ ಕೆ ಶಿವಕುಮಾರ್​ (D K Shivakumar) ಅವರಿಗೆ ಆರೋಗ್ಯದಲ್ಲಿ (Health) ದಿಢೀರ್ ಏರುಪೇರು ಉಂಟಾಗಿದೆ. ​ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ತೀವ್ರ ಜ್ವರದಿಂದ (High Fever) ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಡಿಕೆ ಶಿವಕುಮಾರ್​ ಆರೋಗ್ಯದ ಬಗ್ಗೆ ಕಾಂಗ್ರೆಸ್​ ಟ್ವೀಟ್​

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದಾಗಿ ವೇಳಾಪಟ್ಟಿಯಲ್ಲಿ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅನ್ಯಥಾ ಭಾವಿಸದಂತೆ ಕಾಂಗ್ರೆಸ್​ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ. 





ನಿನ್ನೆ 6 ಗಂಟೆಗಳ ಕಾಲ ವಿಚಾರಣೆ

ನಿನ್ನೆ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 ವರ್ಷಗಳ ಹಿಂದಿನ ಬ್ಯಾಂಕ್‌ ದಾಖಲೆಗಳನ್ನು ಕೇಳಿದ್ದಾರೆ. ಇಡಿಗೆ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ನಿನ್ನೆ 6 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: V Munirathna: 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ; ಕೆಂಪಣ್ಣ ಸೇರಿ 18 ಜನರಿಗೆ ಮುನಿರತ್ನ ಕೊಟ್ರು ವಾರ್ನಿಂಗ್​!

ಇದೇ ವೇಳೆ ಡಿ.ಕೆ ಶಿವಕುಮಾರ್‌ ದಾಖಲಾತಿಗಳನ್ನು ನೀಡಲು ಸಮಯವನ್ನು ಕೇಳಲಾಗಿದೆ. ಒಂದು ಸಾರಿ ಇಡಿ ಕೇಸ್‌ ಹಾಕಿ ಚಾರ್ಚ್‌ ಹಾಕಿದ ಮೇಲೆ ಮತ್ತೆ ಕೇಸ್‌ ಹಾಕುವ ಅವಶ್ಯಕತೆ ಇಲ್ಲ, ತಮ್ಮ ಹುಟ್ಟೂರಿನಲ್ಲಿ ಖರೀದಿ ಮಾಡಿರುವ ಆಸ್ತಿ ಬಗ್ಗೆ ಮತ್ತು ಯಂಗ್ ಇಂಡಿಯಾಕ್ಕೆ ಸಂಬಂಧಪಟ್ಟಂತೆ ಕೂಡ ಮಾಹಿತಿ ಕೇಳಿದ್ದಾರೆ. ಇದಕ್ಕೆ ದಾಖಲೆ ನೀಡುವಂತೆ ಕೇಳಿದ್ದು ಸಮಯ ಕೇಳಿರುವೆ ಅಂತ ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಿಂದ ಡಿಕೆಶಿಗೆ ನೋಟಿಸ್​

ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D.K Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿ.ಕೆ. ಶಿವಕುಮಾರ್​ಗೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ನೀಡಿದ್ರು, ಡಿಕೆಶಿ ವಿರುದ್ಧ ಐಟಿ ತನಿಖೆಗೂ ಸುಪ್ರೀಂ ಅಸ್ತು ಎಂದಿದೆ. ಈ ಸಂಬಂಧ ಕರ್ನಾಟಕ (Karnataka) ಹೈಕೋರ್ಟ್​ ಈ ಹಿಂದೆಯೇ ಅರ್ಜಿ ವಜಾಗೊಳಿಸಿತ್ತು. ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​​ ನೋಟಿಸ್​ ಜಾರಿ ಮಾಡಿದೆ. ಇದೇ ವೇಳೆ ಹೈಕೋರ್ಟ್​ (High Court) ನೀಡಿದ್ದ ಆದೇಶಕ್ಕೆ ಜಸ್ಟೀಸ್​​ ಸಂಜೀವ್​ ಖನ್ನಾ ಅವರ ನೇತೃತ್ವದ ಪೀಠ ಮಧ್ಯಂತರ ತಡೆ ನೀಡಿದೆ.

ಡಿಕೆಶಿ ವಿರುದ್ಧ ಐಟಿ ತನಿಖೆಗೆ ಅಸ್ತು

2018ರಲ್ಲಿ ಬಿಡದಿ ಈಗಲ್ಟನ್ ರೆಸಾರ್ಟ್​ನಲ್ಲಿ ಹಣ ವರ್ಗಾವಣೆ ದಾಖಲೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ರು. ಬಳಿಕ ಡಿಕೆಶಿ ಐಟಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಐಟಿ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು, ಇದೀಗ ಸುಪ್ರೀಂಕೋರ್ಟ್​ ಡಿಕೆಶಿ ವಿರುದ್ಧ ಐಟಿ ತನಿಖೆಗೆ ಅಸ್ತು ಎಂದಿದೆ.

6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡಲು ಸೂಚನೆ

ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಹೊಸದಾಗಿ ಪ್ರಾಸಿಕ್ಯೂಷನ್ ಸಲ್ಲಿಸಲು ಅರ್ಜಿದಾರರಿಗೆ ಸುಪ್ರೀಂಕೋರ್ಟ್​ ಸ್ವಾತಂತ್ರ್ಯ ನೀಡಿದೆ. 6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆಯೂ ಹಾಗೂ 4 ವಾರಗಳಲ್ಲಿ ಕೌಂಟರ್ ಸಲ್ಲಿಸಲು ಸೂಚನೆ ನೀಡಿದೆ. ಆ ಬಳಿಕ 2 ವಾರಗಳಲ್ಲಿ ಮರುಜೋಡಣೆ ಮಾಡಲು ನ್ಯಾಯಪೀಠ ಆದೇಶಿಸಿದೆ. ಕಕ್ಷಿದಾರರ ಪರ ಹಿರಿಯ ವಕೀಲ ಮುಕುಲ್​ ರೋಹ್ಟಗಿ ವಾದ ಮಂಡನೆ ಮಾಡಿದರು.
Published by:ಪಾವನ ಎಚ್ ಎಸ್
First published: