ಬೆಂಗಳೂರು (ಸೆ.28): ಬೆಂಗಳೂರು ಉಗ್ರರ ತಾಣ ವಾಗಿದೆ ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬೆಂಗಳೂರನ್ನು ದೇಶವನ್ನು ಜಗತ್ತು ನೋಡುತ್ತಿದೆ. ಪ್ರಪಂಚದ ಹಲವು ದೇಶಗಳಿಗೆ ಇಂಜಿನಿಯರ್ ಕೊಟ್ಟಿರುವ ನಗರ ಇದು. ಐಟಿ ಹಬ್ ಆಗಿ ಜನಪರಿಚಿತವಾಗಿರುವ ನಗರದ ಕುರಿತು ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಟೀಕಿಸಿದ್ದಾರೆ. ಕರ್ನಾಟಕವನ್ನು ಭಯೋತ್ಪಾದಕರ ತಾಣ ಎನ್ನುವ ಮೂಲಕ ಅವರು ಕನ್ನಡಿಗರನ್ನು ಅವಮಾನಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಕುರಿತು ಅವರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಕೂಡ ಇದೇ ವೇಳೆ ಆಗ್ರಹಿಸಿದರು.
ಸಿಲಿಕಾನ್ ಸಿಟಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶಾಶ್ವತ ಕಚೇರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಒತ್ತಾಯಿಸಿದ್ದ, ಮಾತನಾಡಿದ ಬಿಜೆಪಿ ಸಂಸದ ಬೆಂಗಳೂರು ಉಗ್ರರ ಚಟುವಟಿಕೆ ತಾಣವಾಗಿದೆ. ಇಲ್ಲಿ ಇದರ ಕೇಂದ್ರ ಕಚೇರಿ ಸ್ಥಾಪಿಸುವುದರಿಂದ ಅವರ ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದಿದ್ದರು.
BJP MP @Tejasvi_Surya calling Bengaluru, a global city known for Technology and Innovation, as an epicenter of terror is highly condemnable.
GDP growth has crashed and with such statements, which investor will come to Bengaluru & Karnataka?
Will PM and FM @nsitharaman answer?
— DK Shivakumar (@DKShivakumar) September 28, 2020
ಬೆಂಗಳೂರಿನ ಪ್ರಾಮುಖ್ಯತೆ ಬಗ್ಗೆ ಮಾಜಿ ಪ್ರಧಾನಿ ದಿ.ವಾಜಪೇಯಿ ಅವರು ಅಂದೇ ಮಾತನಾಡಿದ್ದರು. ಜಗತ್ತಿನ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ನೀಡಿದ ಬಳಿಕ ದೆಹಲಿಗೆ ಹೋಗುತ್ತಾರೆ. ಆದರೆ, ಬೆಂಗಳೂರಿನ ಬಗ್ಗೆ ತೇಜಸ್ವಿ ಸೂರ್ಯ ಈ ರೀತಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಅಪಮಾನಿಸಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಕನ್ನಡಿಗರ ಬಗ್ಗೆ ಈ ರೀತಿ ಮಾತನಾಡುವ ಅವರು ತೇಜಸ್ವಿ ಸೂರ್ಯ ಅಲ್ಲ, ಅಮವಾಸ್ಯೆ ಸೂರ್ಯ ಎಂದು ಇದೇ ವೇಳೆ ಕಿಡಿಕಾರಿದರು.
Namma Bengaluru a #terrorHub? Wth. I take offence to that. My city is beautiful, cosmopolitan, diverse, IT/BT Hub, safe, peaceful/silicon city.
I WILL NOT let a one guy tarnish the imagine of our city. Never. NO WAY. #proudofmycity
— Sowmya Reddy | ಸೌಮ್ಯ ರೆಡ್ಡಿ (@Sowmyareddyr) September 27, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ