ಬೆಂಗಳೂರು; ಇಂದು ಬಹಳ ಪವಿತ್ರವಾದ ದಿನ. ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಇಬ್ಬರು ದೊಡ್ಡ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಡಿಕೆಶಿ, ದೇಶದಲ್ಲಿ ಭವಿಷ್ಯಕ್ಕಾಗಿ ಹೊಸ ನಾಯಕರನ್ನು ತಯಾರು ಮಾಡಬೇಕು ಎಂದು ರಾಜೀವ್ ಗಾಂಧಿ ಹೇಳಿದರು. ಸಂಸತ್ತು ಮತ್ತು ಪಂಚಾಯತ್ ಮಧ್ಯದಲ್ಲೂ ಕೂಡ ನಾಯಕರು ಇರಬೇಕು. ಹಾಗಾಗಿ ಈ ಇಬ್ಬರು ನಾಯಕರು ಸಾಕಷ್ಟು ನಾಯಕರನ್ನು ತಯಾರು ಮಾಡಿದರು. ಅವರುಗಳಲ್ಲಿ ನಾನು ಒಬ್ಬ. ದೇವರಾಜ ಅರಸು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದರು. ಮನೆ ಇಲ್ಲದ ಬಡವರಿಗೆ ಮನೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜೀವ್ ಗಾಂಧಿ ಆಲೋಚನೆ ತುಂಬಾ ದೊಡ್ಡದಾಗಿದ್ದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಕೊಡುಗೆ ರಾಜೀವ್ ಗಾಂಧಿ ಅಪಾರ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ. ಭಾರತವನ್ನು ಇವತ್ತು ಇಡೀ ವಿಶ್ವ ನೋಡುತ್ತಾ ಇದೆ ಅಂದರೆ ಅದಕ್ಕೆ ಕಾರಣ ರಾಜೀವ್ ಗಾಂಧಿ ಎಂದರು.
ಇದನ್ನು ಓದಿ: SDPI ಬ್ಯಾನ್ಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ; ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಶಿಫಾರಸು
ಜನರ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಈ ಪ್ರತಿಭಟನಾ ಮಾಡಲಾಗುತ್ತಿದೆ. ಜನಧ್ವನಿ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಧ್ವನಿ ಆಗಬೇಕು. ರಾಜ್ಯದ 25 ಸಂಸದರು ಎಲ್ಲಿ ಹೋಗಿದ್ದಾರೆ. ಪ್ರಧಾನಿಗಳ ಬಗ್ಗೆ ನಿಯೋಗ ಕರೆದುಕೊಂಡು ಹೋಗಲಿ. ಕಳೆದ ವರ್ಷದ ನೆರೆ ಪರಿಹಾರ ಕೇಳಿದಷ್ಟು ಬಂದಿಲ್ಲ. ಈ ಬಾರಿಯಾದರೂ ಬಿಜೆಪಿಯ 25 ಸಂಸದರು ಪ್ರಧಾನಿಗೆ ಕೇಳಲಿ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನು ಸಿಕ್ಕಿಲ್ಲ. ಚಾಲಕರಿಗೆ 5000 ರೂಪಾಯಿ ಪರಿಹಾರ ಇನ್ನು ಬಂದಿಲ್ಲ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ಯಾರಿಗೆ ಕೊಟ್ಟಿದ್ದೀರಾ ಅಂತ ಮಾಹಿತಿ ನೀಡಲಿ. ಯಾರು ಯಾರಿಗೆ ಹಣ ಕೊಟ್ಟಿದ್ದೀರಾ ಅಂತ ದಾಖಲೆ ನೀಡಲಿ. ಕೊರೋನಾದಿಂದ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದು ಕಟುವಾಗಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ