ಪೊಲೀಸರ ಮೇಲೆ ಗೌರವವಿದೆ, ಅವರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬಾರದು; ಡಿಕೆ ಶಿವಕುಮಾರ್

ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಸಭೆ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್,  ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್, ಶಾಸಕರಾದ ಅಜಯ ಸಿಂಗ್, ನಾರಾಯಣಸ್ವಾಮಿ ಹಾಗೂ ಉಗ್ರಪ್ಪ ಭಾಗಿಯಾಗಿದ್ದರು.

ಡಿಕೆ ಶಿವಕುಮಾರ್ ಪ್ರಾತಿನಿಧಿಕ ಚಿತ್ರ

ಡಿಕೆ ಶಿವಕುಮಾರ್ ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು (ಮಾ.18): ನಗರದ ಹೊರಭಾಗದಲ್ಲಿರುವ ರಮಾಡ ರೆಸಾರ್ಟ್​ನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್​ನ ರೆಬೆಲ್​ ಶಾಸಕರ ಭೇಟಿಗೆ ತೆರಳಿದಾಗ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಅವರನ್ನು ಪೊಲೀಸರು ತಡೆದಿದ್ದರು. ಈ ಬಗ್ಗೆ ಸಿಟ್ಟಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ನೀವು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬೇಡಿ ಎಂದು ಕೋರಿದ್ದಾರೆ. 

ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಸಭೆ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್,  ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್, ಶಾಸಕರಾದ ಅಜೇಯ ಸಿಂಗ್, ನಾರಾಯಣಸ್ವಾಮಿ ಹಾಗೂ ಉಗ್ರಪ್ಪ ಭಾಗಿಯಾಗಿದ್ದರು. ಸಭೆ ಪೂರ್ಣಗೊಂಡ ನಂತರ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡಿದರು.

“ಬೆಂಗಳೂರಿನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕರ ಭೇಟಿಗೆ ನಮಗೆ ಅವಕಾಶ ನೀಡುತ್ತಿಲ್ಲ.  ದಿಗ್ವಿಜಯ್​ ಸಿಂಗ್ ಹಾಗೂ ಇತರೆ  ನಮ್ಮ ಮುಖಂಡರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ‌ಇದು ಎಷ್ಟರಮಟ್ಟಿಗೆ ಸರಿ?,” ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಅತೃಪ್ತ ಶಾಸಕರ ಭೇಟಿಗೆ ಪೊಲೀಸರು ಅವಕಾಶ ನೀಡದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ ಡಿಕೆಶಿ, “ಪೊಲೀಸ್ ಬಗ್ಗೆ ನಮಗೆ ಇನ್ನೂ ಗೌರವವಿದೆ. ದಿಗ್ವಿಜಯ್​ ಸಿಂಗ್ ಅವರನ್ನು ಬಂಧಿಸಿದ್ದೇಕೆ? ಇವರು ಯಾರಿಗಾದರೂ ತೊಂದರೆ ಕೊಡಲು ಹೋಗಿದ್ದರಾ? ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬಾರದು,” ಎಂದು ಮನವಿ ಮಾಡಿದರು.

ದಿಗ್ವಿಜಯ್​ ಸಿಂಗ್​ ಮಾತನಾಡಿದ “ 2018ರ ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ನಾವು ಸೋಲಿಸಿದೆವು. ಮಧ್ಯಪ್ರದೇಶದಲ್ಲಿ ಬಹುದೊಡ್ಡ ರೀತಿಯ ಹಗರಣಗಳನ್ನು ಬಿಜೆಪಿ‌ ಮಾಡಿದೆ. ಹನಿಟ್ರ್ಯಾಪ್ ಪ್ರಕರಣಗಳಲ್ಲೂ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಕಮಲನಾಥ್ ಕೂಡ ಬಿಜೆಪಿಯ ಲ್ಯಾಂಡ್ ಮಾಫಿಯಾ, ಮೈನಿಂಗ್ ಮಾಫಿಯಾ, ಸ್ಯಾಂಡ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದ್ದರು. ಇದನ್ನು ಬಿಜೆಪಿ ನಾಯಕರಿಗೆ ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಿಜೆಪಿ ಈ ರೀತಿ ಮಾಡಿದೆ,” ಎಂದರು.

ಕರ್ನಾಟಕ ಕುದುರೆ ವ್ಯಾಪಾರಕ್ಕೆ ಸಾಕ್ಷಿಯಾಗಿದ್ದು ಶೋಚನೀಯ ಸಂಗತಿ ಎಂದ ದಿಗ್ವಿಜಯ್​ ಸಿಂಗ್, “ಶಾಸಕರನ್ನು ಖರೀದಿ ಮಾಡಿ ಇಲ್ಲಿ ಇಟ್ಡುಕೊಂಡಿರುವುದು ದುರಾದೃಷ್ಟಕರ ಸಂಗತಿ. ನಮ್ಮ ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ‌ ಇಟ್ಟಿಕೊಂಡಿರುವ ಪಕ್ಷ. ಬಿಜೆಪಿಗೆ ವಾಜಪೇಯಿ ತರಹದ ಸಿದ್ಧಾಂತ, ನಾಯಕತ್ವ ಈಗ ಇಲ್ಲ,”ಎಂದು ಬೇಸರ ವ್ಯಕ್ತಪಡಿಸಿದರು.

“ಜ್ಯೋತಿರಾದಿತ್ಯ ಸಿಂಧಿಯಾಗೆ ಕಾಂಗ್ರೆಸ್​ನಲ್ಲಿ ಒಳ್ಳೆ ಭವಿಷ್ಯ ಸಿಕ್ಕಿತ್ತು.ಆದರೆ, ಸಿಂಧಿಯಾರಿಂದ ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಇಲ್ಲಿಗೆ ಬರಲು ಶಾಸಕರ ಬಳಸಿರುವ ವಿಶೇಷ ವಿಮಾನಕ್ಕೆ ಬಿಜೆಪಿ ನಾಯಕರೇ ಹಣ ಕೊಟ್ಟಿದ್ದಾರೆ. ಹೊಟೇಲ್ ಬುಕ್ ಮಾಡಿದ್ದಾರೆ. ನಾನು ರಾಜ್ಯಸಭಾ ಚುನಾವಣೆ ಅಭ್ಯರ್ಥಿಯಾಗಿ ಮತ ಕೇಳುವುದಕ್ಕಷ್ಟೇ ಬಂದಿದ್ದೆ. ಆದರೆ, ಕರ್ನಾಟಕ ಪೊಲೀಸರು ನನ್ನನ್ನು ತಡೆದಿದ್ದಾರೆ. ಯಾವ ಕಾಯ್ದೆ, ಯಾವ ಹಕ್ಕಿನ ಅಡಿಯಲ್ಲಿ ಅವರು ನನ್ನನ್ನು ತಡೆದಿದ್ದಾರೆ ಎಂದು ಕೇಳಬೇಕಿದೆ,” ಎಂದರು.
First published: