HOME » NEWS » State » KPCC PRESIDENT DK SHIVAKUMAR ANGRY ON BS YEDYURAPPA GOVERNMENT FOR SUPPRESSING FARMERS PROTEST VCTV SCT

ಬೆಂಗಳೂರಿನಲ್ಲಿ ದೊಡ್ಡ ಕಾರು, ಸಾಹುಕಾರರೇ ಓಡಾಡಬೇಕಾ? ರೈತರ ಪ್ರತಿಭಟನೆ ತಡೆದಿದ್ದಕ್ಕೆ ಡಿಕೆ ಶಿವಕುಮಾರ್ ಆಕ್ರೋಶ

ಬರೀ ಮರ್ಸಿಡಿಸ್ ಬೆಂಜ್, ದೊಡ್ಡ ಕಾರು, ಸಾಹುಕಾರರ ಕಾರೇ ಬೆಂಗಳೂರಿನಲ್ಲಿ ಓಡಾಡಬೇಕಾ? ಬೆಂಗಳೂರಲ್ಲಿ ರೈತರ ಟ್ರ್ಯಾಕ್ಟರ್ ಓಡಾಡಲಿ. ಬೆಂಗಳೂರು ಬರೀ ಸರ್ಕಾರ ನಡೆಸೋರ ಆಸ್ತಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.

news18-kannada
Updated:January 27, 2021, 7:57 AM IST
ಬೆಂಗಳೂರಿನಲ್ಲಿ ದೊಡ್ಡ ಕಾರು, ಸಾಹುಕಾರರೇ ಓಡಾಡಬೇಕಾ? ರೈತರ ಪ್ರತಿಭಟನೆ ತಡೆದಿದ್ದಕ್ಕೆ ಡಿಕೆ ಶಿವಕುಮಾರ್ ಆಕ್ರೋಶ
ಡಿಕೆ ಶಿವಕುಮಾರ್.
  • Share this:
ಚಿಕ್ಕಮಗಳೂರು (ಜ. 27): ಸರ್ಕಾರದಲ್ಲಿ ಇರುವವರೆಲ್ಲ ರೈತರ ಮಕ್ಕಳಲ್ವಾ? ನಾನು ರೈತರ ಮಗ ಎಂದು ಹಸಿರು ಶಾಲು ಹಾಕಿಕೊಂಡು ಸರ್ಕಾರ ಮಾಡುತ್ತೇನೆ ಎಂದು ಹೇಳಿ ರೈತರು ಬೆಂಗಳೂರೊಳಗೆ ಬರಲು ಯಾಕೆ ಬಿಡಲಿಲ್ಲ?  ಬರೀ ಮರ್ಸಿಡಿಸ್ ಬೆಂಜ್, ದೊಡ್ಡ ಕಾರು, ಸಾಹುಕಾರರ ಕಾರೇ ಬೆಂಗಳೂರಿನಲ್ಲಿ ಓಡಾಡಬೇಕಾ? ಬೆಂಗಳೂರಲ್ಲಿ ರೈತರ ಟ್ರ್ಯಾಕ್ಟರ್ ಓಡಾಡಲಿ. ರೈತರು ಬೆಂಗಳೂರಲ್ಲಿ ಪ್ರತಿಭಟನೆ ಮಾಡಲಿ. ಏನು ತಪ್ಪಿದೆ? ರೈತರ ಮಕ್ಕಳು ಬೆಂಗಳೂರಿನ ಆಸ್ತಿ. ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಜನತೆಯ ಆಸ್ತಿ. ಬೆಂಗಳೂರು ಬರೀ ಸರ್ಕಾರ ನಡೆಸೋರ ಆಸ್ತಿಯಲ್ಲ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.

ಬೆಂಗಳೂರು ನಗರಕ್ಕೆ ಸರ್ಕಾರ ನಮ್ಮ ರೈತರನ್ನು ಬಿಟ್ಟಿಲ್ಲ. ರೈತರ ಕೋಪ-ತಾಪ-ಶಾಪ ಎಲ್ಲವೂ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಸರ್ಕಾರಕ್ಕೆ ಅಂತ್ಯದ ದಿನ ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಮಾತನಾಡಿದ ಅವರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಖಂಡನೀಯ. ಅವರು ರ್ಯಾಲಿ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಅವರ್ಯಾರೂ ಕಾನೂನು ಭಂಗ ಮಾಡಿರಲಿಲ್ಲ. ರೈತ ವಿರೋಧಿ ಸರ್ಕಾರ ಅನ್ನೋದಕ್ಕೆ ನಮ್ಮ ಸಂವಿಧಾನದ ಪ್ರಥಮ ದಿನ ಗಣರಾಜ್ಯೋತ್ಸವದಂದು ಇದಕ್ಕೆ ಸಾಕ್ಷಿ ನುಡಿಯನ್ನ ಮಾಡಿದ್ದಾರೆ ಎಂದರು. ರಾಜ್ಯದಲ್ಲೂ ಕೂಡ ಇದೆ ಆಗಿದೆ. ದೆಹಲಿಯಲ್ಲೇ ಬಿಟ್ಟಿರುವಾಗ ಇವರಿಗೇನು ಬಂತು? ಯಾಕೆ ಒಳಗೆ ಬರಬಾರದು? ಅವರೆಲ್ಲಾ ಇಲ್ಲ ಅಂದರೆ ಬೆಂಗಳೂರಲ್ಲಿ ಇವರು ಊಟ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Farmers Protest: ರೈತರು ಭಯೋತ್ಪಾಕರೇ, ಹೊಟ್ಟೆಗೆ ಅನ್ನ ತಿನ್ನೋ ಜನ ಆಡೋ ಮಾತುಗಳೇ ಇವು?; ಕೋಡಿಹಳ್ಳಿ ಚಂದ್ರಶೇಖರ್​ ಕಿಡಿ

ಸಿ.ಟಿ.ರವಿಗೆ ಏನೋ ಸಮಸ್ಯೆ ಇದ್ದಂತೆ ಕಾಣುತ್ತೆ. ಓಲೈಕೆ ಮಾಡಿಕೊಳ್ಳಬೇಕು ಎಂದು ಏನೋ ಭಾಷಣ ಮಾಡುತ್ತಿದ್ದಾರೆ ಅಷ್ಟೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿ ದಿನ ಈ ಸರ್ಕಾರದ ವೈಫಲ್ಯವನ್ನ ಜನತೆ ಮುಂದಿಡುವ ಕೆಲಸವನ್ನ ವಿರೋಧ ಪಕ್ಷಗಳು, ಸಂಘಟನೆಗಳು ಮಾಡುತ್ತವೆ. ಅದರಲ್ಲಿ ತಪ್ಪೇನಿದೆ? ಇವರು ಅದೇ ರೀತಿ ಮಾಡಿಲ್ವ? ಇವರು ಮಾಡಿದಂತೆ ಎಲ್ಲರೂ ಮಾಡೋದು ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ತಮ್ಮ ಮಗಳು ಐಶ್ವರ್ಯ ಮದುವೆಗೆ ಆಹ್ವಾನ ನೀಡಲು  ಮಂಗಳವಾರ ಚಿಕ್ಕಮಗಳೂರಿಗೆ ಬಂದಿದ್ದರು. ಬೆಂಗಳೂರಿನಿಂದ 12 ಗಂಟೆಗೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀ ಜಗದ್ಗುರು ಶಿವಕುಮಾರ ಶಿವಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ಮಗಳ ಮದುವೆಗೆ ಬರುವಂತೆ ಸ್ವಾಮೀಜಿ ಆಹ್ವಾನ ನೀಡಿದರು. ನಂತರ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಆಶೀರ್ವಾದ ಪಡೆದು, ತದನಂತರ ಶೃಂಗೇರಿ ಶಾರದಾಂಬೆ ಹಾಗೂ ಗುರುಗಳ ದರ್ಶನ ಪಡೆದು ಮದುವೆಗೆ ಆಹ್ವಾನ ನೀಡಿದರು.
Published by: Sushma Chakre
First published: January 27, 2021, 7:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories