• Home
  • »
  • News
  • »
  • state
  • »
  • DK Shivakumar: ಒಬ್ಬ ಮಂಚಕ್ಕೆ, ಮತ್ತೊಬ್ಬ ಲಂಚಕ್ಕೆ ತಲೆದಂಡ; ಡಿಕೆಶಿ ವಾಗ್ದಾಳಿ

DK Shivakumar: ಒಬ್ಬ ಮಂಚಕ್ಕೆ, ಮತ್ತೊಬ್ಬ ಲಂಚಕ್ಕೆ ತಲೆದಂಡ; ಡಿಕೆಶಿ ವಾಗ್ದಾಳಿ

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಮ್ಮ ಸರ್ಕಾರದಲ್ಲಿ ಅವರಿಗೆ ಒಂದು ಹಗರಣ ತೆಗೆಯಲು ಇವರಿಗೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಬಿಜೆಪಿಯಲ್ಲಿ ಭ್ರಷ್ಟಾಚಾರಕ್ಕೆ ಇಬ್ಬರು ಮಂತ್ರಿಗಳ ತಲೆದಂಡ ಆಯ್ತು ಎಂದು ಟೀಕಿಸಿದರು.

  • Share this:

ಇಂದು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಬಿಜೆಪಿ ಸರ್ಕಾರ ಹಾಗೂ ಮಂತ್ರಿಗಳ (BJP Government And Ministers) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳು ಪಿಲ್ಲರ್. ಒಂದು ಪಿಲ್ಲರ್ ಬಿದ್ರು ಹೋದ್ರು ಕೂಡ ಸಂವಿಧಾನ (Constitution) ಹಾಗೂ ಬದುಕಿಗೆ ತೊಂದರೆ ಆಗುತ್ತದೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಸಂವಿಧಾನ ಬಿಟ್ಟು ನಾವು ಯಾರು ಕೂಡ ಕೆಲಸ ಮಾಡೋಕೆ ಸಾಧ್ಯ ಇಲ್ಲ. ಇವಾಗ ಸಂವಿಧಾನಕ್ಕೆ ಕಳಂಕ ಬಂದಿದ್ದು, ನಾವು ಬದುಕಿಗಾಗಿ ಹೋರಾಟ ಮಾಡ್ತಿದ್ದೇವೆ ಎಂದರು.


ನಮ್ಮ ವಿರೋಧ ಪಾರ್ಟಿಯವರು ಭಾವನೆ ವಿಷಯದಲ್ಲಿ ಹೋರಾಟ ಮಾಡ್ತಿದ್ದಾರೆ. ನನಗೆ ಅಸೆಂಬ್ಲಿಯಲ್ಲಿ ಹೆಚ್ಚು ಮಾತಾಡೋಕೆ ಸಮಯ ಇಲ್ಲ. ರಾಜ್ಯದಲ್ಲಿ ಆಗ್ತಿರುವ ಬೆಳವಣಿಗೆ ಹಾಗೂ ಇಲಾಖೆಗಳ ಹಗರಣ ಗಳ ಬಗ್ಗೆ ಮಾಧ್ಯಮಗಳು ಜನರಿಗೆ ತೋರಿಸಿದ್ದೀರಿ.


ಕೊರೋನಾ ಸಂದರ್ಭದಲ್ಲಿ ನನ್ನನ್ನು ಸೋನಿಯಾ ಗಾಂಧಿ ಅವರು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಾಡಿದ್ರು. ಚುನಾವಣೆಯಲ್ಲಿ ಸೋತಿದ್ದಕ್ಕೆ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ರು. ದಿನೇಶ್ ಗುಂಡೂರಾವ್ ಕೂಡ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು ಎಂದು ಹಳೆ ವಿಷಯವನ್ನು ನೆನಪು ಮಾಡಿದರು.


KPCC President dk shivakumar Address Press Conference and slams bjp leaders mrq
ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ


ಸಿಎಂ ರೇಸ್ ಸುದ್ದಿಗೆ ಬೇಸರ


ನನಗಿರುವ ಶಕ್ತಿ ಯಲ್ಲಿ ಶೇಕಡಾ 30 ರಷ್ಟು ದಾಟಿದ್ದೇನೆ ಹೊರತು, 70 ಪರ್ಸೆಂಟ್ ರೀಚ್ ಆಗಿಲ್ಲ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಕಾಂಗ್ರೆಸ್ ನಲ್ಲಿನ ಸಿಎಂ ಫೈಟ್ ಬಗ್ಗೆ ತೋರಿಸ್ತಿದ್ದಾರೆ. ಆಮೇಲೆ ವಿರೋಧ ಪಕ್ಷದವರು ಕೂಡ ಹೇಳುತ್ತಿದ್ದಾರರೆ ಎಂದು ಮಾಧ್ಯಮಗಳ ಮೇಲಿನ ಅಸಮಾಧಾನ ಹೊರ ಹಾಕಿದರು.


ಚುನಾವಣೆಗೆ ಭಯಪಡ್ತಿರೋದು ಯಾಕೆ?


ಜನರ ಮುಂದೆ ಬಿಜೆಪಿ ಸರ್ಕಾರ ಯಾಕೆ ಹೋಗೋಕೆ ಭಯ ಪಡ್ತಿದೆ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಬಿಬಿಎಂಪಿ ಚುನಾವಣೆ ಮಾಡೋಕೆ ನಿಮಗೆ ಆತಂಕ ಯಾಕೆ ಎಂದು ಕೇಳಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿದಾಗ ನಾವು ಮತ್ತು ಅವರು ಸಹ ಗೆಲ್ಲುತ್ತಾರೆ. ಪದವೀಧರ ಚುನಾವಣೆ ನಡೆದಾಗ, ಮಂಡ್ಯ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ತಾರೆ. ಉಪಚುನಾವಣೆಯಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲ್ತಾರೆ. ಆದರೂ ನಾವು ಅದರಲ್ಲಿ ಗೆದ್ದಿದ್ದೇವೆ ಎಂದರು.


ಚುನಾವಣೆ ಮಾಡದೆ ಇರೋದಕ್ಕೆ ಕೋರ್ಟ್ 5 ಲಕ್ಷ ದಂಡ ಹಾಕಿದೆ. ಇದಕ್ಕೆ ಯಾರು ಜವಾಬ್ದಾರಿ? ಅದಕ್ಕಾಗಿ ಇದರ‌ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.


ED summons KPCC President DK Shivakumar in money laundering case mrq
ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ


ಇಬ್ಬರು ಮಂತ್ರಿಗಳ ತಲೆದಂಡ


ನಮ್ಮ ಸರ್ಕಾರದಲ್ಲಿ ಅವರಿಗೆ ಒಂದು ಹಗರಣ ತೆಗೆಯಲು ಇವರಿಗೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಬಿಜೆಪಿಯಲ್ಲಿ ಭ್ರಷ್ಟಾಚಾರಕ್ಕೆ ಇಬ್ಬರು ಮಂತ್ರಿಗಳ ತಲೆದಂಡ ಆಯ್ತು ಎಂದು ಟೀಕಿಸಿದರು.


ಇದನ್ನೂ ಓದಿ: Sidddaramaiah: ಮದುವೆ ಮಂಟಪದಲ್ಲಿ ಆಪ್ತರ ಪರ ಮತ ಕೇಳಿ ಡಿಕೆಶಿಗೆ ಟಾಂಗ್ ಕೊಟ್ರಾ ಸಿದ್ದರಾಮಯ್ಯ?


ಒಬ್ಬ ಮಂಚಕ್ಕೆ ಹೋದ, ಮತ್ತೊಬ್ಬ ಲಂಚಕ್ಕೆ ಹೋದ. ಆದರೆ ಅವಾಗ, ಮುಖ್ಯಮಂತ್ರಿಗಳು ಮಾತ್ರ ಇವರನ್ನು ಸಮರ್ಥನೆ ಮಾಡ್ಕೊಂಡು, ಆದಷ್ಟು ಬೇಗ ಹೊರಗಡೆ ಬರ್ತಾರೆ ಅಂದರು ಅಂತ ಹೆಸರು ಹೇಳದೇ ಮತ್ತೆ ಕೆಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಏಕ ವಚನದಲ್ಲೇ ಟಾಂಗ್ ನೀಡಿದರು.


ಚಿಲುಮೆ ತನಿಖೆಗೆ ಡಿಕೆಶಿ ಅನುಮಾನ


ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ವೋಟರ್ ಐಡಿ ಹಗರಣ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಹೋಗ್ತಿದೆ ಎಂದು ಆರೋಪಿಸಿದರು. ಈ ಹಗರಣದಲ್ಲಿ ಶಾಸಕರು, ಸಂಸದರು ಇದರಲ್ಲಿ ಸಿಕ್ಕಿ ಹಾಕಿಕೊಳ್ತಿಲ್ಲ. ಆದರೆ ಅಧಿಕಾರಿಗಳು ಇವಾಗ ತಗ್ಲಾಕೊಂಡಿದ್ದಾರೆ ಎಂದು ಚಿಲುಮೆ ಪ್ರಕರಣದ ತನಿಖೆ ಬಗ್ಗೆ ಡಿಕೆ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: Chandrashekhar Death: ಚಂದ್ರು ಸಾವಿನ ಪ್ರಕರಣ, ರೇಣುಕಾಚಾರ್ಯ ನಿವಾಸಕ್ಕೆ ಸಿಐಡಿ ತಂಡ


ಕಾಂಗ್ರೆಸ್ ಆಂತರಿಕ ಸಮೀಕ್ಷೆ


ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್​ಗೆ 136, ಬಿಜೆಪಿಗೆ 67 ಬರಲಿದೆ. ಇನ್ನೊಂದು ಪಾರ್ಟಿ ಬಗ್ಗೆ ಆಮೇಲೆ ಮಾತನಾಡೋಣ ಎಂದು ಹೇಳುವ ಜೆಡಿಎಸ್ ಎಷ್ಟು ಕ್ಷೇತ್ರದಲ್ಲಿ ಗೆಲ್ಲುತ್ತೆ ಅನ್ನೋ ಸಮೀಕ್ಷೆಯ ಗುಟ್ಟು ಬಿಟ್ಟು ಕೊಡಲಿಲ್ಲ.

Published by:Mahmadrafik K
First published: