ಟ್ರಂಪ್​ ಗೆಲ್ಲಿಸಲು ಮೋದಿ, ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಸಿಎಂ ಸಂತ್ರಸ್ತರ ಗೋಳು ಕೇಳೋರು ಯಾರು; ದಿನೇಶ್​ ಗುಂಡೂರಾವ್​​

ರಾಜ್ಯದಲ್ಲಿ ನೆರೆ ಸಂತ್ರಸ್ತರ ಸಂಕಷ್ಟ ಕೇಳಲು ಸರ್ಕಾರ ಅಸ್ತಿತ್ವದಲ್ಲಿಲ್ಲ. ಅಧಿವೇಶನದಲ್ಲಿಯೂ ಸಂತ್ರಸ್ತರ ಸಂಕಷ್ಟ, ಪರಿಹಾರ ಕುರಿತ ಚರ್ಚೆಗೆ ಸಿದ್ಧರಿಲ್ಲ. ಈ ಕುರಿತು ಮೋದಿ ಹತ್ತಿರ ಕೂಡ ಮಾತನಾಡಲು ಸಿದ್ಧವಿಲ್ಲ. ಕೇಂದ್ರ ಸರ್ಕಾರ ಕೂಡ ಇತ್ತ ಗಮನಹರಿಸುತ್ತಿಲ್ಲ

Seema.R | news18-kannada
Updated:October 16, 2019, 3:14 PM IST
ಟ್ರಂಪ್​ ಗೆಲ್ಲಿಸಲು ಮೋದಿ, ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಸಿಎಂ ಸಂತ್ರಸ್ತರ ಗೋಳು ಕೇಳೋರು ಯಾರು; ದಿನೇಶ್​ ಗುಂಡೂರಾವ್​​
ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​
  • Share this:
ಬೆಂಗಳೂರು (ಅ. 16): ಟ್ರಂಪ್​ ಗೆಲ್ಲಿಸಲು ಮೋದಿ ಅಮೆರಿಕಕ್ಕೆ ಹೋದರು. ಇತ್ತ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಯಡಿಯೂರಪ್ಪ ಮತ್ತವರ ಸಚಿವರ ತಂಡ ಹೋಗಿದೆ. ಈ ನಡುವೆ ಸಂತ್ರಸ್ತರ ಗೋಳು ಕೇಳುವವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಪ್ರಶ್ನಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಸಂತ್ರಸ್ತರ ಸಂಕಷ್ಟ ಕೇಳಲು ಸರ್ಕಾರ ಅಸ್ತಿತ್ವದಲ್ಲಿಲ್ಲ. ಅಧಿವೇಶನದಲ್ಲಿಯೂ ಸಂತ್ರಸ್ತರ ಸಂಕಷ್ಟ, ಪರಿಹಾರ ಕುರಿತ ಚರ್ಚೆಗೆ ಸಿದ್ಧರಿಲ್ಲ. ಈ ಕುರಿತು ಮೋದಿ ಹತ್ತಿರ ಕೂಡ ಮಾತನಾಡಲು ಸಿದ್ಧವಿಲ್ಲ. ಕೇಂದ್ರ ಸರ್ಕಾರ ಕೂಡ ಇತ್ತ ಗಮನಹರಿಸುತ್ತಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡುತ್ತಾರೆ.  ಅವರಿಗೆ ಅನುದಾನ ಬಿಡುಗಡೆ ಮಾಡುತ್ತಾರೆ. ಇದು ಹೇಗೆ ಸಾಧ್ಯ. ಚುನಾವಣಾ ಆಯೋಗ ಈ ನೇಮಕಾತಿಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ; ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ

ರೌಡಿಶೀಟರ್ ಇಸ್ತಿಯಾಕ್ ಅಹಮ್ಮದ್  ವೇಣುಗೋಪಾಲ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವೇಣುಗೋಪಾಲ್​ ಅವರ ತೇಜೋವಧೆ ಮಾಡುವ ಕಾರ್ಯ ನಡೆಯಲಾಗುತ್ತಿದೆ. ಇಸ್ತಿಯಾಕ್​  ಮೇಲಿನ ಕೆಲ ಪ್ರಕರಣಗಳು ರದ್ದಾಗಿವೆ. ಅವರು ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ನನ್ನನ್ನ ಭೇಟಿ ಮಾಡಿದ್ದಾರೆ.‌ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್​ ಮೇಲೆ ಕೂಡ ಪ್ರಕರಣಗಳಿವೆ ಅವರನ್ನು ಅಪರಾಧಿ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading