ಅನರ್ಹರು ಹೆತ್ತಮ್ಮನಿಗೆ ದ್ರೋಹ ಬಗೆಯೋದಕ್ಕಿಂತ ದೊಡ್ಡ ನೀಚ ಕೆಲಸ ಮಾಡಿದ್ದಾರೆ ; ದಿನೇಶ್ ಗುಂಡೂರಾವ್

news18 -himachal-pradesh
Updated:November 26, 2019, 5:57 PM IST
ಅನರ್ಹರು ಹೆತ್ತಮ್ಮನಿಗೆ ದ್ರೋಹ ಬಗೆಯೋದಕ್ಕಿಂತ ದೊಡ್ಡ ನೀಚ ಕೆಲಸ ಮಾಡಿದ್ದಾರೆ ; ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
  • Share this:
ಬೆಳಗಾವಿ(ನ.26): ಅನರ್ಹರು ಪಕ್ಷ ಬಿಟ್ಟು ಹೋಗಿ ತಾಯಿ ದ್ರೋಹಕ್ಕಿಂತ ದೊಡ್ಡ ನೀಚ ಕೆಲಸ ಮಾಡಿದ್ದಾರೆ. ಧರ್ಮ, ದೇವರು, ರಾಷ್ಟ್ರೀಯತೆ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿಯವರು ಯಾವಾಗಲು ಮುಂದಿರುತ್ತಾರೆ. ಬಿಜೆಪಿಯಲ್ಲಿ ಇಲ್ಲದೇ ಹೋದ್ರೆ ದೇಶದ್ರೋಹಿ ಅಂತಾ ಪ್ರಚಾರ ಮಾಡುತ್ತಾರೆ. ಆದರೆ, ಬಿಜೆಪಿ ವಿಚಾರಗಳು ಕೇವಲ ಮಾತಿಗಾಗಿ ಮಾತ್ರ ಇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​​​​ ಹೇಳಿದರು.

ಅಥಣಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಗೆಲ್ಲುವುದಿಲ್ಲ ಅಂತಾ ಗೊತ್ತಾಗಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಇನ್ನಷ್ಟು ಶಾಸಕರನ್ನು ಕರೆ ತರುತ್ತೇವೆ ಅಂತಿದಾರೆ. ಈಗ ವಿಧಾನಸೌಧ ಖಾಲಿ ಬಿದ್ದಿದ ಸರಕಾರ ಸತ್ತು‌ ಹೋಗಿದೆ. ಮೂರು ತಿಂಗಳಿನಿಂದ ಯಾರೂ ಕೆಲಸವನ್ನೆ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಯಾರ ಯಾರದೋ‌ ಋಣದಲ್ಲಿ ಇರೋದಾಗಿ ಹೇಳ್ತಾರೆ. ಇದು ಸರಿಯಲ್ಲ. ಒಂದು ರಾಜ್ಯದ ಸಿಎಂ ತನ್ನ ಪ್ರಜೆಗಳ ಋಣದಲ್ಲಿ ಇರಬೇಕು ಎಂದರು.

ಮಂಡ್ಯದಲ್ಲಿ ಎಷ್ಟು ಕೋಟಿ ಹಣ ಖರ್ಚಾಯಿತು ಗೊತ್ತಾ? ಅದು ದೇವರಿಗನೇ ಗೊತ್ತು ಆದರೆ ಜನ ಅಲ್ಲಿ ಬೇರೆಯೇ ಮಾಡಿದರು. ಎಷ್ಟೇ ಹಣ ಕೊಟ್ಟರು ಜನರ ನಿರ್ಣಯದ ಮುಂದೆ ಯಾವುದೂ ನಡೆಯುವುದಿಲ್ಲ. ಬಿಜೆಪಿಯವರಿಗೆ ಹಣದ ಅಹಂ ಬಂದು ಬಿಟ್ಟಿದೆ  ಎಂದು ತಿಳಿಸಿದರು.

ಮಹಾರಾಷ್ಟ್ರ ಸರಕಾರ ರಚನೆ ಸಂಬಂಧ ಸುಪ್ರಿಂಕೋರ್ಟ್ ಕೊಟ್ಟ ಆದೇಶ ವಿಚಾರ ಮಾತನಾಡಿದ ಅವರು, ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರಿಗೆ ಆಗಿರುವ ಕಪಾಳ ಮೋಕ್ಷ. ರಾತ್ರೋರಾತ್ರಿ ಸರಕಾರ ಮಾಡಲು ಅಂತಹ ಅವಸರ ಏನಿತ್ತು ? ಇದರಿಂದ ಬಿಜೆಪಿಗೆ ನೈತಿಕತೆ ಇಲ್ಲ ಅಂತ ಜನರಿಗೆ ಅರ್ಥ ಆಗಿದೆ ಎಂದರು.

ಇದನ್ನೂ ಓದಿ : ನಾನು ಈಗಾಗಲೇ ಗೆದ್ದಿದ್ದೇನೆ - ಯಾರನ್ನೇ ಸಚಿವರನ್ನಾಗಿ ಮಾಡ್ಲಿ, ನಾನು ಯಾವ ಸಿಎಂಗೂ ಕಮ್ಮಿಯಿಲ್ಲ ; ಎಂಟಿಬಿ ನಾಗರಾಜ್

ಮಹಾರಾಷ್ಟ್ರದಂತೆ ಕರ್ನಾಟದಲ್ಲಿಯೂ ಬಿಜೆಪಿ ಸರ್ಕಾರ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟರೆ ಶಾಸಕರಿಗೆ ನೂರು ಕೋಟಿ ಕೊಡುತ್ತೇನೆ. ಅದನ್ನು ನೋಡಿ ನಮ್ಮ ರಾಜ್ಯದ ಅನರ್ಹ ಶಾಸಕರು ನಮಗೂ ಅಷ್ಟೆ ಕೊಡಿ ಅಂತ ದುಂಬಾಲು ಬಿದಿದ್ದರು. ಕೇವಲ 20 ಕೋಟಿ ರೂಪಾಯಿ ಅಷ್ಟೇ ಕೊಟ್ಟಿದೀರಿ ನಮಗೂ ನೂರು ಕೋಟಿ ಬೇಕು ಎಂದಿದ್ದರು. ಸ್ಪೀಕರ್, ಕೋರ್ಟ್ ಇವರನ್ನೆಲ್ಲ ಈಗಾಗಲೇ ಅನರ್ಹ ಮಾಡಿ ಆಗಿದೆ. ಈಗ ಜನತಾ ನ್ಯಾಯಾಲಯದಲ್ಲಿಯೂ ಇವರನ್ನು ಅನರ್ಹ ಮಾಡಬೇಕಿದೆ ಎಂದು ಆಗ್ರಹಿಸಿದರು.
First published: November 26, 2019, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading