ಬಿಜೆಪಿ ಅಭ್ಯರ್ಥಿ ಸುಧಾಕರ್ ಮಹಾನ್ ಸುಳ್ಳುಗಾರ - ಕಾಂಗ್ರೆಸ್ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯ್ತು ; ದಿನೇಶ್ ಗುಂಡೂರಾವ್

ಬಿಜೆಪಿಯವರು ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಕಲುಷಿತ ಮಾಡಿಕೊಂಡಿದ್ದಾರೆ‌. ಬಿಜೆಪಿಯಲ್ಲೂ ಈಗ ಹೊರಗಿನಿಂದ ಬಂದವರು ಹಾಗೂ ಮೂಲ ಬಿಜೆಪಿಗರ ನಡುವೆ ಸಂಘರ್ಷ ಶುರುವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ನಾವು 15ಕ್ಕೆ 15 ಸ್ಥಾನಗಳನ್ನೂ ಗೆಲ್ಲುತ್ತೇವೆ.

news18-kannada
Updated:November 25, 2019, 7:53 PM IST
ಬಿಜೆಪಿ ಅಭ್ಯರ್ಥಿ ಸುಧಾಕರ್ ಮಹಾನ್ ಸುಳ್ಳುಗಾರ - ಕಾಂಗ್ರೆಸ್ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯ್ತು ; ದಿನೇಶ್ ಗುಂಡೂರಾವ್
ಕೆ ಸುಧಾಕರ್​ ಹಾಗೂ ದಿನೇಶ್ ಗುಂಡೂರಾವ್​​​
  • Share this:
ಬೆಂಗಳೂರು(ನ.25) : ಬಿಜೆಪಿ ಅಭ್ಯರ್ಥಿ ಸುಧಾಕರ್ ಒಬ್ಬ ಮಹಾನ್ ಸುಳ್ಳುಗಾರ. ನಾನು ಗಾಂಧಿನಗರ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಒಮ್ಮೆಯಾದರೂ ಯಾರಾದರೂ ನನ್ನ ಮೇಲೆ ಹಫ್ತಾ ವಸೂಲಿಯ ಆರೋಪ ಮಾಡಿದ್ದಾರಾ.‌ ಈಗ ಅವರು ಕಾಂಗ್ರೆಸ್ ಬಿಟ್ಟುಹೋಗಿದ್ದೇ ಒಳ್ಳೆದಾಯ್ತು. ಇದರಿಂದ ನಮ್ಮ ಪಕ್ಷ ಶುದ್ದವಾಯ್ತು ಎಂದು ಸುಧಾಕರ್​ ವಿರುದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಕಲುಷಿತ ಮಾಡಿಕೊಂಡಿದ್ದಾರೆ‌. ಬಿಜೆಪಿಯಲ್ಲೂ ಈಗ ಹೊರಗಿನಿಂದ ಬಂದವರು ಹಾಗೂ ಮೂಲ ಬಿಜೆಪಿಗರ ನಡುವೆ ಸಂಘರ್ಷ ಶುರುವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ನಾವು 15ಕ್ಕೆ 15 ಸ್ಥಾನಗಳನ್ನೂ ಗೆಲ್ಲುತ್ತೇವೆ. ಚುನಾವಣೆ ನಂತರ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ ಎಂದರು.

ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಗೆ ದ್ರೋಹ ಮಾಡಿದ್ದಾರೆ 

ಈ ಚುನಾವಣೆ ಬಳಿಕ ಎಸ್.ಟಿ.ಸೋಮಶೇಖರ್ ನಿರ್ನಾಮವಾಗುತ್ತಾರೆ. ಸೋಮಶೇಖರ್ ಕಾಂಗ್ರೆಸ್ ಗೆ ದ್ರೋಹ ಮಾಡಿದ್ದಾರೆ. ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಲು ನಾನು ಹೋರಾಟ ಮಾಡಿದೆ. ಅವರು ಹೇಳುವ ಪ್ರಕಾರ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿಯವರು ಕಿರುಕುಳ ಕೊಟ್ಟಿದ್ದು ನಿಜವೇ ಆಗಿದ್ದಿದ್ದರೆ ನಾವೆಲ್ಲರೂ ಕಾಂಗ್ರೆಸ್ ಬಿಟ್ಟು ಹೋಗಬೇಕಿತ್ತು. ಬಿಜೆಪಿಯಲ್ಕೂ ಸಹ ಎಸ್.ಟಿ‌‌.ಸೋಮಶೇಖರ್ ರನ್ನು ಹೆಚ್ಚು ಕಾಲ ಇಟ್ಟುಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಅವರು ಸೋಲುತ್ತಿದ್ದಂತೆಯೇ ಅವರನ್ನು ಬಿಜೆಪಿಯಿಂದಲೂ ಹೊರ ಹಾಕುತ್ತಾರೆ ಎಂದು ತಿಳಿಸಿರು.

ದಿನೇಶ್ ಗುಂಡೂರಾವ್ ಒಬ್ಬ ಸಂಸ್ಕಾರ ಇಲ್ಲದೇ ಇರುವ ವ್ಯಕ್ತಿ ; ಸುಧಾಕರ್​​

ಸುಧಾಕರ್ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ನೀಡಿದ ಅವರು, ದಿನೇಶ್ ಗುಂಡೂರಾವ್ ಒಬ್ಬ ಸಂಸ್ಕಾರ ಇಲ್ಲದೇ ಇರೋ ವ್ಯಕ್ತಿ. ಸಂಸ್ಕಾರ ಕಲಿಸೋದಕ್ಕೆ ಅವರಿಗೆ ವಯಸ್ಸಾಗಿಬಿಟ್ಟಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸ್ಕಾರ ಕಲಿತಿದ್ರೇ ಚೆನ್ನಾಗಿರುತ್ತಿತ್ತು ದುರದೃಷ್ಟ ಅವರು ಕೆಪಿಸಿಸಿ ಅಧ್ಯಕ್ಷ ಆಗಿದ್ದಾರೆ. ಅವರಿಗೆ ನಾನು ಏನು ಬುದ್ಧಿ ಕಲಿಸಲಿ. ದೇವರು ಆತನಿಗೆ ಬುದ್ದಿ ಕೊಡಲಿ ಅಂತ ಹಾರೈಸುತ್ತೇನೆ ಎಂದು ಗೊಲ್ಲಹಳ್ಳಿ ಗ್ರಾಮದಲ್ಲಿ  ಬಿಜೆಪಿ ಅಭ್ಯರ್ಥಿ ಸುಧಾಕರ್ ಹೇಳಿದರು.

ಇದನ್ನೂ ಓದಿ : ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ