ಚುನಾವಣಾ ಫಲಿತಾಂಶ ಬಂದ ಒಂದೇ ವಾರದಲ್ಲಿ ರಮೇಶ್​ಗೆ ಬಿಜೆಪಿ ಬಿಡೋ ಸ್ಥಿತಿ ಬರುತ್ತೆ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಜಾರಕಿಹೊಳಿ‌ ಬ್ರ್ಯಾಂಡ್ ಹೆಸರುವಾಸಿ ಆಗಿದ್ರೆ ಸತೀಶ ಜಾರಕಿಹೊಳಿಯವರೇ ಕಾರಣ. ಬಾಲಚಂದ್ರ ಜಾರಕಿಹೊಳಿ‌ಯವರು ಆಪರೇಷನ್​​​​​​​​​​ ಕಮಲಕ್ಕೆ ಫೆಮಸ್. ರಮೇಶ ಜಾರಕಿಹೊಳಿ‌ 20 ವರ್ಷ ಶಾಸಕರಾಗಿದ್ದರು ಯಾವುದೇ ಉಪಕಾರ ಆಗೋ ಕೆಲಸ ಮಾಡಿಲ್ಲ ಎಂದು ಹೇಳಿದರು

news18-kannada
Updated:November 27, 2019, 5:28 PM IST
ಚುನಾವಣಾ ಫಲಿತಾಂಶ ಬಂದ ಒಂದೇ ವಾರದಲ್ಲಿ ರಮೇಶ್​ಗೆ ಬಿಜೆಪಿ ಬಿಡೋ ಸ್ಥಿತಿ ಬರುತ್ತೆ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್​ ಹಾಗೂ ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ(ನ.27) : ಕಾಂಗ್ರೆಸ್ ಪಕ್ಷದಲ್ಲಿ ಇರುವ ಮುಕ್ತ ವಾತಾವರಣ ಬಿಜೆಪಿಯಲ್ಲಿ ಇಲ್ಲ. ಚುನಾವಣೆ ಮುಗಿದ ಮೇಲೆ ಬಿಜೆಪಿ ಮೂಸು ನೋಡಲ್ಲ. ಚುನಾವಣೆ ಫಲಿತಾಂಶ ಬಂದ ಒಂದೇ ವಾರದಲ್ಲಿ ರಮೇಶ್ ಬಿಜೆಪಿ ಬಿಡೋ ಸ್ಥಿತಿ ನಿರ್ಮಾಣ ಆಗಲಿದೆ. ಏನೇ ಆದರೂ ರಮೇಶ ವಾಪಸ್ ತೆಗೆದುಕೊಳ್ಳುವ ಸ್ಥಿತಿ ಇಲ್ಲ. ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಹೇಳಿದರು.

ಗೋಕಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಯಾವ ಕಾರಣಕ್ಕೆ ರಮೇಶ ಜಾರಕಿಹೊಳಿ‌ ಬಿಟ್ಟರು ಇಂದಿಗೂ ಅರ್ಥ ಆಗಿಲ್ಲ. ಹಿನ್ನೆಲೆ, ಉದ್ದೇಶ ಅರ್ಥ ಆಗಿದೆ. ಆದರೇ ಬಹಿರಂಗವಾಗಿ ಹೇಳಲು ಆಗಿಲ್ಲ. ರಮೇಶ್ ಯಾವುದೇ ಸೈದಾಂತಿಕ ಕಾರಣ ಪಕ್ಷ ಬಿಡಲು ಇಲ್ಲ. ಯುವ ಕಾಂಗ್ರೆಸ್ ನಲ್ಲಿ ಉಪಾಧ್ಯಕ್ಷ ಹುದ್ದೆ ಕೊಟ್ಟಿದೆ. ಪಕ್ಷಕ್ಕೆ ಯಾವುದೇ ಪ್ರಯೋಜನ ಮಾಡಿಲ್ಲ. ಸತೀಶ್ ತೆಗೆದು ರಮೇಶ ಜಾರಕಿಹೊಳಿ‌ ಮಂತ್ರಿ ಮಾಡಿದ್ದು ಸಿದ್ದರಾಮಯ್ಯನವರು ಎಂದರು.

ರಾಜ್ಯದಲ್ಲಿ ಜಾರಕಿಹೊಳಿ‌ ಬ್ರ್ಯಾಂಡ್ ಹೆಸರುವಾಸಿ ಆಗಿದ್ರೆ ಸತೀಶ ಜಾರಕಿಹೊಳಿಯವರೇ ಕಾರಣ. ಬಾಲಚಂದ್ರ ಜಾರಕಿಹೊಳಿ‌ಯವರು ಆಪರೇಷನ್​​​​​​​​​​ ಕಮಲಕ್ಕೆ ಫೆಮಸ್. ರಮೇಶ ಜಾರಕಿಹೊಳಿ‌ 20 ವರ್ಷ ಶಾಸಕರಾಗಿದ್ದರು ಯಾವುದೇ ಉಪಕಾರ ಆಗೋ ಕೆಲಸ ಮಾಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಅನುದಾನ ತಂದವರು ರಮೇಶ್, ಬಾಲಚಂದ್ರ ; ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಅನುದಾನ ತಂದವರು ರಮೇಶ್ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌. ಇಬ್ಬರು ತಕ್ಕಡಿ ತಗೋಂಡು ಕುಳಿತಿರುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರನ್ನು ಹುಚ್ಚರನ್ನಾಗಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಜಿಎಸ್ ಟಿ ಅಲ್ಲ ಗೋಕಾಕ್ ನಲ್ಲಿ ರಮೇಶ್ ಹಾಗೂ ಅಳಿಯನ ಜಿಎಸ್ ಟಿ ಬೇರೆ ಇದೆ. ಇನ್ನೂ ಅನೇಕ ಗ್ರಾಮಗಳಿಗೆ ಬಸ್ ಬಿಡಲು, ವಿದ್ಯುತ್ ನೀಡಲು ಆಗಿಲ್ಲ. ಇದು 25 ವರ್ಷಗಳ ಕಾಲ ರಮೇಶ ಜಾರಕಿಹೊಳಿ‌ ಸಾಧನೆ ಎಂದರು.

ಮತದಾರರೇ ನಮ್ಮ ದೇವರು ಎಂದು ಹೇಳುತ್ತಿದ್ದಾರೆ. ನಂತರ ನಾಳೆ ಬಾ ಎಂದು ಹೇಳುತ್ತಾರೆ. ಡಿಸೆಂಬರ್ 5 ಚುನಾವಣೆ ಮುಗಿದ ಬಳಿಕ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ರಮೇಶ್ ಜಾರಕಿಹೊಳಿ‌ ಕಚೇರಿ ಕ್ಯಾಪ್ಟನ್ ಬಾಲಚಂದ್ರ ಜಾರಕಿಹೊಳಿ‌ ಆಗಿದ್ದಾರೆ. ಮತದಾರರು ಯಾರು ಹೆದರಿಸುವ ಅವಶ್ಯಕತೆ ಇಲ್ಲ. ಬಾಲಚಂದ್ರ ಜಾರಕಿಹೊಳಿ‌ ಅಂದ್ರೆ ಹಣ ತೂರಾಡೋದು. ನೀವು ಬೇಕಾದರೆ ಹೋಗಿ ಕಮಲ ಚಿತ್ರ ಹಾಕಿದ್ರೆ ಹಣ ಕೊಡ್ತಾರೆ. ಮುಂಬೈನಲ್ಲಿ 25, ಗೋಕಾಕ್ ನಲ್ಲಿ 15 ಕೋಟಿ ಹಣ ವಸೂಲಿ ಮಾಡಿದ್ದಾರೆ‌. ಈ ಚುನಾವಣೆ ಜಾರಕಿಹೊಳಿ‌ ಎರಡು ಭಾಗ ಆಗಲೇಬೇಕು ಎಂದು ರಮೇಶ್ ವಿರುದ್ದ ಸತೀಶ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಮಹೇಶ್ ಕುಮಟಳ್ಳಿ ಮನುಷ್ಯತ್ವ ಇಲ್ಲದವರು; ಮುಗ್ಧತೆಯ ಸೋಗಿನವರು: ಲಕ್ಷ್ಮೀ ಹೆಬ್ಬಾಳ್ಕರ್​ಗೋಕಾಕ್ ನಲ್ಲಿ ಒಂದು ಬೂತ್ ಗೆ ಅರಬಾವಿ ಕಾರ್ಯಕರ್ತರನ್ನು ನೇಮಿಸಿದ್ದಾರೆ‌. ವಾರ್ಡ್ 35 ಸಾವಿರ ಹಣ ಕೊಟ್ಟಿದ್ದಾರೆ. ರಮೇಶ್ ಗರಡಿಯಲ್ಲಿ ಲಖನ್ ಜಾರಕಿಹೊಳಿ‌ ಬೆಳೆದಿದ್ದಾನೆ. ನಮ್ಮದು ಒಂದೇ ಅಜೆಂಡಾ ರಮೇಶ ಜಾರಕಿಹೊಳಿ‌ ಬದಲಾವಣೆ ಅಷ್ಟೇ. ಎಲ್ಲಾ ಊರಲ್ಲಿ ದೇವಸ್ಥಾನ, ಜಾತ್ರೆಗೆ ಹಣ ಕೊಟ್ಟಿದ್ದಾರೆ. ಲಖನ್ ಜಾರಕಿಹೊಳಿ‌ ಕ್ಷೇತ್ರಕ್ಕೆ ಅವಶ್ಯಕತೆ ಇದೆ. ತಾನಾಗೀ ಬೇಟೆ ಬಂದು ಬಲೆಯಲ್ಲಿ ಬಿದ್ದಿದೆ. ಅವಕಾಶ ಬಿಡಬೇಡಿ,‌ ಹಿಡಿದು ಬೆಟ್ಟದಲ್ಲಿ ಬಿಡೋಣ. ಗೋಕಾಕ್ ಕ್ಷೇತ್ರದ ಸ್ವಾತಂತ್ರ್ಯಕ್ಕಾಗಿ ರಮೇಶ ಜಾರಕಿಹೊಳಿ‌ ಬದಲಾವಣೆ ಅವಶ್ಯಕತೆ ಸತೀಶ ಜಾರಕಿಹೊಳಿ ಹೇಳಿದರು.
First published: November 27, 2019, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading