ಅಧಿಕಾರಕ್ಕಾಗಿ ಕಾಂಗ್ರೆಸ್​​ಗೆ ದ್ರೋಹ ಬಗೆದವರು​​​; ಡಾ. ಸುಧಾಕರ್​​ಗೆ ದಿನೇಶ್​​ ಗುಂಡೂರಾವ್​​ ತಿರುಗೇಟು

ಕಾಂಗ್ರೆಸ್​ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ವಿರುದ್ಧ ಅನರ್ಹ ಶಾಸಕ ಡಾ. ಸುಧಾಕರ್​​​ ಸರಣಿ ಟ್ವೀಟ್​ ಮಾಡಿದ್ದರು. ಈ ವೇಳೆ ನಾವೇನು ನಾವು ಭಿಕ್ಷುಕರಲ್ಲ, ಏನಾದರೂ ಮಾತಾಡುವ ಮುನ್ನ ಮಾತಿನ ಮೇಲೆ ಹಿಡಿತವಿರಲಿ ಎಂದಿದ್ದರು.

news18
Updated:September 18, 2019, 6:48 PM IST
ಅಧಿಕಾರಕ್ಕಾಗಿ ಕಾಂಗ್ರೆಸ್​​ಗೆ ದ್ರೋಹ ಬಗೆದವರು​​​; ಡಾ. ಸುಧಾಕರ್​​ಗೆ ದಿನೇಶ್​​ ಗುಂಡೂರಾವ್​​ ತಿರುಗೇಟು
ದಿನೇಶ್​​ ಗುಂಡೂರಾವ್​​​, ಡಾ. ಸುಧಾಕರ್​​
  • News18
  • Last Updated: September 18, 2019, 6:48 PM IST
  • Share this:
ಬೆಂಗಳೂರು(ಸೆ.18): ಮಾತಿನ ಮೇಲೆ ಹಿಡಿತವಿರಲಿ ಎಂದ ಅನರ್ಹ ಶಾಸಕ ಡಾ. ಸುಧಾಕರ್​​ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​​ ತರಾಟೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್​​ ಅಧಿಕಾರಕ್ಕೆ ಬರುತ್ತೋ, ಬರಲ್ಲವೋ ಎಂಬುದು ಮುಖ್ಯವಲ್ಲ. ಪಕ್ಷದ ರಾಜಕಾರಣಿಗೆ ತತ್ವ ಸಿದ್ದಾಂತ ಇರಬೇಕಾಗುತ್ತದೆ. ಇದು ಸುಧಾಕರ್​​ಗೆ ಇಲ್ಲ ಎಂಬುದು ಗೊತ್ತಿರುವ ವಿಚಾರವೇ. ಪ್ರಧಾನಿ ಹುದ್ದೆ ನೀಡಿದರೂ ಅಧಿಕಾರದ ಆಸೆಗಾಗಿ ಬಿಜೆಪಿ ಜೊತೆಗೆ ಹೋಗಿದ್ದಾರೆ. ಇದು ಕಾಂಗ್ರೆಸ್​​ಗೆ ಮೋಸ ಮಾಡಿದಂತೆಯೇ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ವಿರುದ್ಧ ಅನರ್ಹ ಶಾಸಕ ಡಾ. ಸುಧಾಕರ್​​​ ಸರಣಿ ಟ್ವೀಟ್​ ಮಾಡಿದ್ದರು. ಈ ವೇಳೆ ನಾವೇನು ನಾವು ಭಿಕ್ಷುಕರಲ್ಲ, ಏನಾದರೂ ಮಾತಾಡುವ ಮುನ್ನ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಈ ಭಿಕ್ಷಾ ವರ್ತನೆಯಿಂದ ನಾವು ಹೊರಬಂದು ಇವತ್ತು ರಾಜರಂತಿದ್ದೇವೆ. 'ಮೂರು' ಇದ್ದವರು ಆ ಸ್ಥಾನದಲ್ಲಿ ಒಂದೇ ಒಂದು ಕ್ಷಣವು ಕೂರಬಾರದು ಎಂದು ಟ್ವೀಟ್​ನಲ್ಲಿ ಕಿಡಿಕಾರಿದ್ದರು.

ಇನ್ನು ಕಾಂಗ್ರೆಸ್​ ಪಕ್ಷವೂ ನಿಮ್ಮ ವೈಯಕ್ತಿಕ ಆಸೆಗೆ ಬಲಿಯಾಗಿದೆ. ನೀವು ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಂದಲೇ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ​ಪಕ್ಷಕ್ಕೆ ಬಂದಿದೆ. ನಾವು ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿದ್ವಿ ಎಂಬುದು ನೆನಪಿರಲಿ ಎಂದು ದಿನೇಶ್​​ ಗುಂಡೂರಾವ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ; ಸೀಟು ಹಂಚಿಕೆ ವಿಚಾರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು?

ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನ ಗೆದ್ದಿದ ಕಾಂಗ್ರೆಸ್​, ಲೋಕಸಭೆ ಚುನಾವಣೆಯಲ್ಲಿ ಮಾತ್ರ ಒಂದೇ ಸ್ಥಾನ ಗೆದ್ದಿದೆ. ಇತಿಹಾಸದಲ್ಲೇ ಇಂತಹ ಮುಖಭಂಗ ಕಾಂಗ್ರೆಸ್​ಗೆ ಎಂದೂ ಆಗಿರಲಿಲ್ಲ. ನಿಮ್ಮ ಕೆಟ್ಟ ನಿರ್ಧಾರ ಹಾಗೂ ಬಲಹೀನತೆ ಬಗ್ಗೆ ಪರಾಮರ್ಶಿಸಿಕೊಳ್ಳಿ. ನಿಮ್ಮ ಈ ವರ್ತನೆಯಿಂದ ಕಾಂಗ್ರೆಸ್ ಪಕ್ಷ ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು ಎಂದು ಮತ್ತೊಂದು ಟ್ವೀಟ್​​ನಲ್ಲಿ ಕುಟುಕಿದ್ದರು.

ಇತ್ತೀಚೆಗೆ ಕಾಂಗ್ರೆಸ್​​-ಜೆಡಿಎಸ್​​ ಸರ್ಕಾರ ಮೈತ್ರಿ ಬೀಳಿಸುವಲ್ಲಿ ಡಾ. ಸುಧಾಕರ್​​​ ಪ್ರಮುಖ ಪಾತ್ರವಹಿಸಿದ್ದರು. ತನ್ನ ಕ್ಷೇತ್ರದ ಅಭಿವೃದ್ಧಿಗೆ ಅಂದಿನ ಸಿಎಂ ಕುಮಾರಸ್ವಾಮಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಹಿಂದಿನ ಸ್ಪೀಕರ್​​ ರಮೇಶ್​​ ಕುಮಾರ್​​ 17 ಮಂದಿಯಂತೆಯೇ ಇವರನ್ನು ಅನರ್ಹಗೊಳಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ--------------
First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading