ಬಿಜೆಪಿ 15 ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲುವುದು ಕಷ್ಟ; ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಗೆಲವು ಖಚಿತ. ಜನ ಪಕ್ಷಾಂತರ ಮಾಡಿರುವ ಶಾಸಕರಿಗೆ ಪಾಠ ಕಲಿಸಲಿದ್ದಾರೆ. ಮಂತ್ರಿ, ಉಪ ಮುಖ್ಯಮಂತ್ರಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ​ ಬಿಜೆಪಿಗೆ ಹೋದರು. ಇವರಿಗೆ ಯಾವುದೇ ಸಿದ್ದಾಂತ, ಜನಪರ ಕಾಳಜಿ ಇಲ್ಲ.

Latha CG | news18-kannada
Updated:November 27, 2019, 11:49 AM IST
ಬಿಜೆಪಿ 15 ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲುವುದು ಕಷ್ಟ; ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​
ದಿನೇಶ್ ಗುಂಡೂರಾವ್
  • Share this:
ಬೆಳಗಾವಿ(ನ.27): ಬಿಜೆಪಿ ಸರ್ಕಾರ ರಚನೆಗೆ ಏನೆಲ್ಲಾ ಮಾಡಿದೆ ಎಂಬುದನ್ನು ಜನ ಗಮನಿಸಿದ್ದಾರೆ.  ಆಪರೇಷನ್ ಕಮಲ ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿಯವರಿಗೆ 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇಲ್ಲ.ಹೀಗಾಗಿ ಆಪರೇಷನ್ ಕಮಲ ಮುಂದುವರೆಸುವ ಮಾತು ಆಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. 15 ಕ್ಷೇತ್ರಗಳಲ್ಲಿ ಒಂದನ್ನೂ ಬಿಜೆಪಿ ಗೆಲ್ಲುವುದು ಕಷ್ಟ. ಸರ್ಕಾರ ರಾಜ್ಯದಲ್ಲಿ ಇದೆಯೋ ಇಲ್ಲವೋ ಎನ್ನುವ ಹಾಗೆ ಆಗಿದೆ. 2 ತಿಂಗಳಿಂದ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಚುನಾವಣೆಗೋಸ್ಕರ ಸರ್ಕಾರ ಎಲ್ಲವನ್ನೂ ಬಿಟ್ಟಿದೆ. ಚುನಾವಣೆಗೆ ಹಣ ಮಾಡಲು ವರ್ಗಾವಣೆ ದಂಧೆ ಸೇರಿ ಕೆಲಸದಲ್ಲಿ ಸರ್ಕಾರ ತೊಡಗಿದೆ. ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ’ - ಕುಮಾರಸ್ವಾಮಿಗೆ ಆರ್. ಅಶೋಕ್ ತಿರುಗೇಟು

ಇದೇ ವೇಳೆ, ರಾಜ್ಯದಲ್ಲಿ ಸ್ವಾರ್ಥ ಉದ್ದೇಶಕ್ಕಾಗಿ ಅನೇಕರು ಬಿಜೆಪಿಗೆ‌ ಹೋಗಿದ್ದಾರೆ. ಮೈತ್ರಿ ಸರ್ಕಾರ ರಚನೆ ನಂತರದ ಎಲ್ಲಾ ಬೆಳವಣಿಗೆ ಜನ ನೋಡಿದ್ದಾರೆ. ಜನರಿಗೆ ಅನರ್ಹ ಶಾಸಕರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಅನರ್ಹರ ವಿರುದ್ಧ ಕಿಡಿಕಾರಿದರು.

ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಗೆಲವು ಖಚಿತ. ಜನ ಪಕ್ಷಾಂತರ ಮಾಡಿರುವ ಶಾಸಕರಿಗೆ ಪಾಠ ಕಲಿಸಲಿದ್ದಾರೆ. ಮಂತ್ರಿ, ಉಪ ಮುಖ್ಯಮಂತ್ರಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ​ ಬಿಜೆಪಿಗೆ ಹೋದರು. ಇವರಿಗೆ ಯಾವುದೇ ಸಿದ್ದಾಂತ, ಜನಪರ ಕಾಳಜಿ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಅಧಿಕಾರವಧಿಯ ಸಂದರ್ಭದಲ್ಲಿ ಮಂತ್ರಿಯಾಗಿದ್ದಾಗ ಮಾಡಿದ್ದ ಸಾಧನೆ ಏನು? ಜನರ ಮುಂದೆ ತಮ್ಮ ಸಾಧನೆ ಹೇಳಬೇಕು  ಎಂದು ಆಗ್ರಹಿಸಿದರು.

ಇಸ್ರೋದಿಂದ ಕಾರ್ಟೊಸಾಟ್-3 ಸೇರಿ 14 ಉಪಗ್ರಹಗಳ ಯಶಸ್ವಿ ಉಡಾವಣೆ

ನಮಗೆ ರಮೇಶ್​ ಜಾರಕಿಹೊಳಿ‌ ಬಗ್ಗೆ ಸಹನೆಯಿಂದ ಇತ್ತು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಉಪಮುಖ್ಯಮಂತ್ರಿ,‌ ಮುಖ್ಯಮಂತ್ರಿ, ಪ್ರಧಾನಿ ಆದರೂ ಏನು ಪ್ರಯೋಜನ? ಉಪ ಮುಖ್ಯಮಂತ್ರಿ ಆಗುವ ಉದ್ದೇಶ ಏನಿದೆ? ಅವರು ತಮ್ಮ ಸ್ವಾರ್ಥಕ್ಕಾಗಿ ಪದವಿ ಬಯಸಿದ್ದಾರೆ. ಇಂತವರನ್ನು ಗೋಕಾಕ್ ಜನ ತಿರಸ್ಕಾರ ಮಾಡಬೇಕು.  ಉದ್ದೇಶಪೂರ್ವಕವಾಗಿ ಗೋಕಾಕ್ ಕ್ಷೇತ್ರಕ್ಕೆ ಕಳುಹಿಸಿಲ್ಲ. ನಮಗೆ ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ರಮೇಶ್​​ ಜಾರಕಿಹೊಳಿ‌ಗೆ ಸೋಲಿನ ಭೀತಿ‌ ಇದೆ. ಈಗ ಕ್ಷೇತ್ರದಲ್ಲಿ ರಮೇಶ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
First published: November 27, 2019, 11:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading