News18 India World Cup 2019

ಸೋಲಿನ ಹೊಣೆ ಹೊತ್ತುಕೊಳ್ಳಲು ಸಿದ್ಧ, ರಾಜೀನಾಮೆಗೂ ಸಿದ್ಧ; ದಿನೇಶ್​ ಗುಂಡೂರಾವ್​

ದೇಶದಲ್ಲಿ ಮೋದಿ ಪರವಾಗಿ ಒಂದು ದೊಡ್ಡ ಅಲೆ ಆರಂಭವಾಯಿತು. ಅದು ಪುಲ್ವಾಮಾ ದಾಳಿ ಆದ ನಂತರ. ಅದಕ್ಕಿಂತ ಮುಂಚೆ ಅವರ ವಿರುದ್ಧವಾದ ಸ್ಥಿತಿ ಇತ್ತು- ದಿನೇಶ್​ ಗುಂಡೂರಾವ್​​

Latha CG | news18
Updated:May 23, 2019, 7:00 PM IST
ಸೋಲಿನ ಹೊಣೆ ಹೊತ್ತುಕೊಳ್ಳಲು ಸಿದ್ಧ, ರಾಜೀನಾಮೆಗೂ ಸಿದ್ಧ; ದಿನೇಶ್​ ಗುಂಡೂರಾವ್​
ದಿನೇಶ್​ ಗುಂಡೂರಾವ್​
Latha CG | news18
Updated: May 23, 2019, 7:00 PM IST
ಬೆಂಗಳೂರು,(ಮೇ 23): ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋಲು ಅನುಭವಿಸಿದ ಹಿನ್ನೆಲೆ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿರುವ ಗುಂಡೂರಾವ್​, "ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಯಾಕೆಂದರೆ ನಾನೇ ಕೆಪಿಸಿಸಿ ಅಧ್ಯಕ್ಷ. ನೈತಿಕ ಹೊಣೆ ಹೊರಲು ನಾನು ಸಿದ್ಧ. ನಾನು ಕಾಂಗ್ರೆಸ್ ಅಧ್ಯಕ್ಷ ಆಗಿರುವ ವೇಳೆ ಕಳಪೆ ಫಲಿತಾಂಶ ಬಂದಿದೆ. ಎಲ್ಲಾ ಜವಾಬ್ದಾರಿ ಹೊರಲು ನಾನು ಸಿದ್ಧ. ಪಕ್ಷದ ನಾಯಕರ ಜೊತೆ ಈ ಬಗ್ಗೆ ತೀರ್ಮಾನ ಮಾಡುತ್ತೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. 12 ರಿಂದ 14 ಸೀಟು ಬರುವ ನಿರೀಕ್ಷೆ ಇತ್ತು. ಜನರ ತೀರ್ಪು ಸ್ವಾಗತ ಮಾಡುತ್ತೇನೆ" ಎಂದು ಹೇಳಿದ್ಧಾರೆ.

ನಮ್ಮ ನಾಯಕರೊಂದಿಗೆ ಚರ್ಚೆ ಮಾಡಿ ರಾಜಿನಾಮೆ ಕೊಡುವುದಕ್ಕೂ ಸಿದ್ದನಿದ್ದೇನೆ. ಪಕ್ಷಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ. 12-13 ಸೀಟು ಬರುತ್ತೆ ಎಂದುಕೊಂಡಿದ್ದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅಂತಹ ಘಟಾನುಘಟಿ ನಾಯಕರೇ ಸೋತಿದ್ದಾರೆ. ಇದು ನನಗೆ ತುಂಬಾ ನೋವು ಉಂಟು ಮಾಡಿದೆ ಎಂದರು.

ಇದನ್ನೂ ಓದಿ: Mandya Election Result: ಜೋಡೆತ್ತು ಅಬ್ಬರಕ್ಕೆ ಮಂಕಾದ ನಿಖಿಲ್; ಯಶ್-ದರ್ಶನ್ ಬೆಂಬಲದಿಂದ ಗೆದ್ದರು ಸುಮಲತಾ

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ಗೌರವ ಕೊಡಬೇಕಾಗುತ್ತದೆ. ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಬಹಳ ದೊಡ್ಡ ಬಹುಮತ ಬಂದಿದೆ. ಮತ್ತೆ ಮೋದಿ ಪ್ರಧಾನಿ ಆಗಲು ಜನ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಆ ಬಗ್ಗೆ ಮೋದಿ ಗಮನ ಹರಿಸಲಿ. ಭಾವನಾತ್ಮಕ ವಿಚಾರಗಳನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ. ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳನ್ನು ಸರಿಪಡಿಸಬೇಕು ಎಂದು ಹಾರೈಸುತ್ತೇನೆ ಎಂದರು.

ದೇಶದಲ್ಲಿ ಮೋದಿ ಪರವಾಗಿ ಒಂದು ದೊಡ್ಡ ಅಲೆ ಆರಂಭವಾಯಿತು. ಅದು ಪುಲ್ವಾಮಾ ದಾಳಿ ಆದ ನಂತರ. ಅದಕ್ಕಿಂತ ಮುಂಚೆ ಅವರ ವಿರುದ್ಧವಾದ ಸ್ಥಿತಿ ಇತ್ತು. ಆದರೆ ನಂತರ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಲೆ ಸೃಷ್ಟಿಮಾಡಿದರು. ಇಂತಹ ಉತ್ತಮ ನಾಯಕ ಬೇಕು ಎಂದು ಮೋದಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಅವರು ಗೆದ್ದಿದ್ದಾರೆ ಎಂದರು.

ಮೈತ್ರಿ ಮಾಡಿಕೊಂಡಿದ್ದಕ್ಕೆ ಸೋಲಾಯ್ತಾ? ಎಂಬ ವಿಚಾರವಾಗಿ ನಾನು ಬಹಳ ಚರ್ಚೆ ಮಾಡಲ್ಲ. ಯಾಕೆಂದರೆ ಪರಿಸ್ಥಿತಿ ನಮ್ಮ ವಿರುದ್ಧವಾಗಿದೆ. ನಮ್ಮ ಸಿದ್ದಾಂತಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಹಾಗೆಯೇ ನಾನು ಇರಲು ಸಿದ್ದ. ಅವಶ್ಯಕತೆ ಇದ್ದರೆ ರಾಜಿನಾಮೆ ನೀಡಲು ಸಿದ್ದ ಎಂದರು.
Loading...

ಮೈತ್ರಿ ಸರ್ಕಾರದಿಂದ ಸೋಲಾಯ್ತಾ..? ಎಂಬ ಪ್ರಶ್ನೆಗೆ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ವಿಶ್ಲೇಷಣೆ ಮಾಡುವುದು ತುಂಬ ಸುಲಭ. ಹಲವು ಕಡೆ ಸಮ್ಮಿಶ್ರ ಮಾಡಿದರೂ, ಅಲ್ಲಿ ಒಳ್ಳೆ ಫಲಿತಾಂಶ ಬಂದಿದೆ. ನಾವು ಅಷ್ಟು ಸುಲಭವಾಗಿ ಹೇಳಲು ಆಗಲ್ಲ. ಆದರೆ ಮೈತ್ರಿಯನ್ನ ಇನ್ನೂ ಚೆನ್ನಾಗಿ ನಡೆಸಿಕೊಂಡು, ಜನರ ವಿಶ್ವಾಸ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅದರಲ್ಲಿ ವಿಫಲರಾದೆವು ಎಂದು ಗುಂಡೂರಾವ್​ ಒಪ್ಪಿಕೊಂಡರು.

ಆಪರೇಷನ್ ಕಮಲದ ಭೀತಿಯಲ್ಲಿರುವ ಗುಂಡೂರಾವ್ ಬಿಜೆಪಿ ವಿರುದ್ಧ ಮಾಡಿದರು. ಮೈತ್ರಿ ಸರ್ಕಾರವನ್ನು ಬೀಳಿಸಬೇಕು ಎಂದು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಈಗಲೂ ಅದನ್ನೆ ಮಾಡಲು ಹೋಗುತ್ತಿದ್ದಾರೆ. ನೋಡೋಣ, ನಾನು ಸಿಎಂ ಜೊತೆ ಚರ್ಚೆ ಮಾಡಿ, ಮುಂದಿನ ತೀರ್ಮಾನ ಏನು ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಏನು ತೊಂದರೆ ಇಲ್ಲ. ನಾವು ಒಟ್ಟಿಗೆ ಇದ್ದೇವೆ. ಮುಂದೆ ಏನಾಗುತ್ತೋ ನೋಡಬೇಕು. ಸರ್ಕಾರ ಉಳಿಸಿಕೊಳ್ಳಲು ನಾವು ಕ್ರಮ ಕೈಗೊಳ್ಳುತ್ತೆ ಎಂದರು.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...