ಸೋಮಶೇಖರ್, ಮುನಿರತ್ನ, ಭೈರತಿ ಮತ್ತೆ ಕಾಂಗ್ರೆಸ್​ ಸೇರಲು ಯತ್ನಿಸಿದ್ದರು; ದಿನೇಶ್​ ಗುಂಡೂರಾವ್​ ಹೊಸ ಬಾಂಬ್​

ಇದೇ ವೇಳೆ, ಆಪರೇಷನ್ ಕಮಲ ಮಾಡುವ ಬಿಜೆಪಿ ನಾಯಕರಿಗೆ  ದಿನೇಶ್​ ಗುಂಡೂರಾವ್​ ಎಚ್ಚರಿಕೆ ನೀಡಿದರು. ಮತ್ತೆ ಆಪರೇಷನ್ ಕಮಲ ಮಾಡಿದರೆ ಜನ ಓಡಿಸ್ತಾರೆ ಹುಷಾರ್. ನಮ್ಮ ಶಾಸಕರಿಗೆ ಪೋನ್ ಮಾಡಿದರೆ ಜನ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

Latha CG | news18-kannada
Updated:December 3, 2019, 5:53 PM IST
ಸೋಮಶೇಖರ್, ಮುನಿರತ್ನ, ಭೈರತಿ ಮತ್ತೆ ಕಾಂಗ್ರೆಸ್​ ಸೇರಲು ಯತ್ನಿಸಿದ್ದರು; ದಿನೇಶ್​ ಗುಂಡೂರಾವ್​ ಹೊಸ ಬಾಂಬ್​
ದಿನೇಶ್ ಗುಂಡೂರಾವ್
  • Share this:
ಬೆಂಗಳೂರು(ಡಿ.03): ಅನರ್ಹ ಶಾಸಕರಾದ ಎಸ್​​​​​.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್​​ ಮತ್ತೆ ಕಾಂಗ್ರೆಸ್​​ ಪಕ್ಷಕ್ಕೆ ಬರಲು ಯತ್ನಿಸಿದ್ದರು. ಪ್ರಮುಖ ನಾಯಕರ ಮೂಲಕ ವಾಪಸ್​ ಪಕ್ಷ ಸೇರಲು ಬಂದಿದ್ದರು. ಆದರೆ ಅವರು ಮಾಡಿದ ದ್ರೋಹಕ್ಕೆ ನಾವು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೊಸ ಬಾಂಬ್​ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿಲ್ಲ. ಆಪರೇಷನ್ ಕಮಲಕ್ಕೆ ಹಾಕಿದ್ದ ಬಂಡವಾಳವನ್ನು ವಸೂಲಿ ಮಾಡುವುದರಲ್ಲಿ ಕಾಲ ಕಳೆದಿದ್ದಾರೆ. ಶಾಸಕರ ಖರೀದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಿದೆ. ಕಪ್ಪು ಹಣ ಉಪಚುನಾವಣೆಗೆ ಉಪಯೋಗಿಸಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆ ಬಗ್ಗೆ ಗೊತ್ತಾದ ಬಳಿಕ ನೆರೆಗೆ ಕೇಂದ್ರ ಸ್ಪಂದಿಸಿತು. ಚುನಾವಣೆ ಬರಲಿಲ್ಲ ಅಂದಿದ್ದರೆ ಹಣ ಬಿಡುಗಡೆ ಆಗುತ್ತಿರಲಿಲ್ಲ. ಪ್ರವಾಹ ಬಂದಾಗ ಜನರ ಸಮಸ್ಯೆಗೆ ಸ್ಪಂದಿಸಲು ಆಗಲಿಲ್ಲ. ಈಗ ಒಂದೊಂದು ‌ಕ್ಷೇತ್ರದಲ್ಲಿ ಸಚಿವರು ಠಿಕಾಣಿ ಹೂಡಿದ್ಧಾರೆ. ವೋಟು ಖರೀದಿ ಮಾಡಲು ನೋಟು ಉಪಯೋಗಿಸುತ್ತಿದ್ದಾರೆ.ಎಂಟಿಬಿ ಒಂದು ವೋಟ್​ಗೆ  2 ಸಾವಿರ ರೂ. ಕೊಡ್ತಿದ್ದಾರೆ. ಇದರ ವಿಡಿಯೋ ಸಮೇತ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್​​-ಜೆಡಿಎಸ್​ ತಿರುಕನ ಕನಸು ಕಾಣ್ತಿವೆ: ಡಿ.9ಕ್ಕೆ ಖೇಲ್​ ಖತಂ, ನಾಟಕ ಬಂದ್​; ಸಿ.ಟಿ.ರವಿ

ಇದೇ ವೇಳೆ, ಆಪರೇಷನ್ ಕಮಲ ಮಾಡುವ ಬಿಜೆಪಿ ನಾಯಕರಿಗೆ  ದಿನೇಶ್​ ಗುಂಡೂರಾವ್​ ಎಚ್ಚರಿಕೆ ನೀಡಿದರು. ಮತ್ತೆ ಆಪರೇಷನ್ ಕಮಲ ಮಾಡಿದರೆ ಜನ ಓಡಿಸ್ತಾರೆ ಹುಷಾರ್. ನಮ್ಮ ಶಾಸಕರಿಗೆ ಪೋನ್ ಮಾಡಿದರೆ ಜನ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಮೈತ್ರಿ ಸರ್ಕಾರ ಕೆಡವಲು ಆಪರೇಷನ್ ಮಾಡಿದರು. ಸಿಎಂ ಬಿಎಸ್​​ವೈ ಮಾತನಾಡಿರುವ  ಹಲವು ಆಡಿಯೋ, ವಿಡಿಯೋಗಳು ಸಾಬೀತಾಗಿದೆ. ಆಮಿಷ ತೋರಿಸಿ ಶಾಸಕರನ್ನು ಆಪರೇಷನ್ ಮಾಡಿದರು. ಕುದರೆ ವ್ಯಾಪಾರ ಮಾಡಿ ಸರ್ಕಾರ ರಚನೆ ಮಾಡಿದರು. ಹೀಗಾಗಿ ರಾಜ್ಯದ 15 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಬಂತು ಎಂದರು.

ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತದೆ. ಡಿ.9ರಂದು ರಾಜ್ಯದಲ್ಲಿ ಬದಲಾವಣೆಯ ಫಲಿತಾಂಶ ಬರುತ್ತದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಫಲಿತಾಂಶ ಬರುತ್ತೆ. ರಾಜ್ಯದಲ್ಲಿ ನೆರೆ ಬಂದ ರೀತಿ ಫಲಿತಾಂಶ ಬರಲಿದೆ ಎಂದು ಹೇಳಿದರು.
Loading...

370ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 88 ಭಯೋತ್ಪಾದಕ ಘಟನೆಗಳು; ಕೇಂದ್ರ
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...