ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವಿರುದ್ಧ ಕಾನೂನು ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (KPCC President DK Shivakumar) ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿ.ಟಿ ರವಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ಡಿ.ಕೆ ಶಿವಕುಮಾರ್ ಸಿದ್ಧತೆ ನಡೆಸಿದ್ದು, ಈ ಕುರಿತಂತೆ ನಾಳೆ ಕೆಪಿಸಿಸಿ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ. ಶಾಲಾ ಮಕ್ಕಳನ್ನು (School Children) ಗುರಿಯಾಗಿಸಿಕೊಂಡು ಡಿ.ಕೆ ಸಹೋದರರು ಕುಕ್ಕರ್ನಲ್ಲಿ (Cooker) ಬಾಂಬ್ ಇಟ್ಟಿದ್ದರು ಎಂದು ಸಿ.ಟಿ ರವಿ ಆರೋಪ ಮಾಡಿದ್ದರು ಎನ್ನಲಾಗಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿ.ಕೆ ಶಿವಕುಮಾರ್ ಅವರು, ಇದೀಗ ಅವರ ವಿರುದ್ಧ ಕಾನೂನು (Law) ಸಮರ ಸಾರಲು ಮುಂದಾಗಿದ್ದಾರಂತೆ.
ಸಿ.ಟಿ ರವಿ ಏನು ಹೇಳಿದ್ದರು?
ದಾವಣಗೆರೆಯಲ್ಲಿ ಮಾತನಾಡಿದ್ದ ಸಿ.ಟಿ ರವಿ ಅವರು ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು. ಮಹಾ ಸಂಗಮ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಕುಕ್ಕರ್ ನಲ್ಲಿ ಬಾಂಬ್ ಇಡುವ ಕೆಲಸವನ್ನು ಡಿಕೆ ಬ್ರದರ್ಸ್ ಮಾಡಿದ್ದರು. ಆಮೇಲೆ ಅವರನ್ನು ಕೆಪಿಸಿಸಿ ಅಧ್ಯಕ್ಷರು ನಮ್ಮ ಬ್ರದರ್ಸ್ ಅಂದರು.
ಇದನ್ನೂ ಓದಿ: Tirumala: ಏಪ್ರಿಲ್ನಲ್ಲಿ ತಿರುಪತಿಗೆ ಹೋಗುತ್ತಿದ್ದೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇಬೇಕು!
ಅದೇ ಡಿಕೆ ಶಿವಕುಮಾರ್ ಬ್ರದರ್ಸ್ ಕುಕ್ಕರ್ ನಲ್ಲಿ ಬಾಂಬ್ ಇಡುವ ಸಂಚು ಮಾಡಿದ್ದರು. ಆ ಸಂಚಿಗೆ ಶಕ್ತಿ ಬಂದಿದ್ದು ಕಾಂಗ್ರೆಸ್ನ ಓಲೈಕೆಯ ಪರಿಣಾಮ, ಆದರೆ ಬಿಜೆಪಿ ದೇಶ ವಿರೋಧಿಗಳಿಗೆ ಮಣೆ ಹಾಕುವ ಪಾರ್ಟಿ ಅಲ್ಲ. ಬಾಂಬ್ ಇಡುವರಿಗೆ ಬಿರಿಯಾನಿ ತಿನ್ನಿಸುವ ಪಾರ್ಟಿ ಅಲ್ಲ. ಬಾಂಬ್ ಇಡುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾತ್ರವಲ್ಲ, ಯುಪಿ ಮಾದರಿಯಲ್ಲಿ ಬುಲ್ಡೋಜರ್ ಚಲಾವಣೆ ಮಾಡಲು ನಮಗೆ ಬರುತ್ತೆ ಎಂಬುದನ್ನು ತೋರಿಸುತ್ತೇವೆ. ಬುಲ್ಡೋಜರ್ ಓಡಿಸಲು ನಮಗೂ ಬರುತ್ತದೆ ಎಂದು ಗುಡುಗಿದ್ದರು.
ಮೋಸ ಮಾಡುವ ಹೊಸ ದಾರಿ ಹುಡುಕಿದ ಕಾಂಗ್ರೆಸ್
ಹಿಂದೂ ಕಾರ್ಯಕರ್ತರ ಶಾಪ ವಿಮೋಚನೆ ನಿಮಗೆ ಆಗಿಲ್ಲ. ಭಾರತದ ಸೈನಿಕರಿಗೆ ನೀವು ಮಾಡಿದ ಅಪಮಾನದ ಶಾಪ ವಿಮೋಚನೆ ದೂರ ಆಗಿಲ್ಲ. ಈಗ ಮೋಸ ಮಾಡುವ ಹೊಸ ಯೋಚನೆಯನ್ನು ಹುಡುಕಿದ್ದೀರಿ. ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಮತ್ತೆ ವಂಚನೆ ಮಾಡಲು ಮುಂದಾಗಿದ್ದೀರಿ. ಆದರೆ ನಿಮ್ಮದೇ ಸರ್ಕಾರಗಳು ಅಧಿಕಾರದಲ್ಲಿ ಇರುವ ದೇಶದ ಯಾವುದೇ ರಾಜ್ಯದಲ್ಲಿ ನೀವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ.
ಇದನ್ನೂ ಓದಿ: Narendra Modi: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ, ಪ್ರಧಾನಿ ಕಾರಿನ ಬಳಿ ಓಡಿ ಬಂದ ಯುವಕ!
ನಾವು ಮಾಡಿ ತೋರಿಸಿದ್ದೇವೆ
ನೀವು ಮೂಗು, ಮೊಣಕೈ ತುಪ್ಪ ಸವರಿ ಮೋಸ ಮಾಡುವ ಕೆಲಸ ಮಾಡುತ್ತಿದ್ದೀರಿ. ಸುಳ್ಳು ಮತ್ತು ಮೋಸ ಕಾಂಗ್ರೆಸ್ ನೀತಿಯ ಒಂದು ಭಾಗ. ಮೋದಿ ಅವರು ಜನ ಧನ ಯೋಜನೆ ಖಾತೆಗೆ ದುಡ್ಡು ಹಾಕಿದ್ದರು, ಕಿಸಾನ್ ಸಮ್ಮಾನ್ ಯೋಜನೆ, ಮನೆ ಮನೆಗೆ ನೀರು ಕೊಡುವ ಯೋಜನೆ, ಮನೆ ಮನೆಗೆ ಶೌಚಾಲಯ ನಿರ್ಮಿಸಿದ್ದೇವೆ. ಈ ಯಾವುದೇ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಮೊದಲು ಡಂಗುರ ಮಾಡಿರಲಿಲ್ಲ. ಈ ಯೋಜನೆಗಳನ್ನು ನಾವು ಮಾಡಿ ತೋರಿಸಿದ್ದೇವೆ ಎಂದು ವಾಗ್ದಾಳಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ