Lakshmi Hebbalkar: ಮಾಜಿ ಸಿಎಂ ಯಡಿಯೂರಪ್ಪ ಭೇಟಿಯಾದ ಲಕ್ಮೀ ಹೆಬ್ಬಾಳ್ಕರ್; ಕುತೂಹಲ ಮೂಡಿಸಿದೆ ಕಾಂಗ್ರೆಸ್ ಶಾಸಕಿ ದಿಢೀರ್ ನಡೆ

ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು ಇವತ್ತು ಗುರುಪೂರ್ಣಿಮೆ ಬೇರೆ ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ ಬೇರೆ ರೀತಿ ಏನೂ ಇಲ್ಲ.

ಯಡಿಯೂರಪ್ಪ ಭೇಟಿಯಾದ ಲಕ್ಮೀ ಹೆಬ್ಬಾಳ್ಕರ್

ಯಡಿಯೂರಪ್ಪ ಭೇಟಿಯಾದ ಲಕ್ಮೀ ಹೆಬ್ಬಾಳ್ಕರ್

  • Share this:
ಬೆಂಗಳೂರು (ಜು.13): ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Congress MLA Lakshmi Hebbalkar)  ಅವರು ಇಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರನ್ನು ಭೇಟಿಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಿಢೀರನೇ ಕಾವೇರಿ ನಿವಾಸದಲ್ಲಿ (Kaveri House)  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ರು. ಭೇಟಿ ಬಳಿಕ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಸಮಾಜದ ಹಿರಿಯ ಮುಖಂಡರು, ಈ ಹಿನ್ನೆಲೆಯಲ್ಲಿ  ಸೌಹಾರ್ದಯುತವಾಗಿ ಯಡಿಯೂರಪ್ಪ ಭೇಟಿ ಮಾಡಿದ್ದೇನೆ. ಅವರಿಂದ ಕೆಲವೊಂದು ಮಾರ್ಗದರ್ಶನವನ್ನ ಪಡೆದಿದ್ದೇನೆ  ಅಷ್ಟೇ ಇದರಲ್ಲಿ ಯಾವುದೇ ಕೂತಹಲವಿಲ್ಲ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಬಗ್ಗೆ ಸ್ಪಷ್ಟಪಿಸಿದ್ದಾರೆ.

15 ನಿಮಿಷಗಳ ಕಾಲ ಯಡಿಯೂರಪ್ಪ ಜೊತೆ ಚರ್ಚೆ

ಬುಧವಾರ  ಬೆಳಗ್ಗೆ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಯಡಿಯೂರಪ್ಪನವರನ್ನ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು. ಸಹಜವಾಗಿ ಕಾಂಗ್ರೆಸ್ ಶಾಸಕಿ ಬಿಜೆಪಿಯ ಹಿರಿಯ ಮುಖಂಡರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಗುರುಪೂರ್ಣಿಮೆ ದಿನ ಹಿರಿಯರ ಆಶೀರ್ವಾದ ಪಡೆದೆ

ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು ಇವತ್ತು ಗುರುಪೂರ್ಣಿಮೆ ಬೇರೆ ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ ಬೇರೆ ರೀತಿ ಏನೂ ಇಲ್ಲ.  ಇದೊಂದು ಸೌಹಾರ್ದತವಾದ ಭೇಟಿ ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ.

ಇದನ್ನೂ ಓದಿ: Siddaramotsava: ಸಭೆಗೆ ಬಾರದ ಡಿಕೆ ಶಿವಕುಮಾರ್​ಗೆ ಸಿದ್ದು ಆಪ್ತರ ಟಾಂಗ್; ವೇದಿಕೆ ಮೇಲೆಯೇ ತಿರುಗೇಟು ಕೊಟ್ರು ಡಿಕೆಶಿ ಬ್ರದರ್​

ಸಮುದಾಯದ ಹಾಗೂ ರಾಜಕೀಯ ಚರ್ಚೆ

ಚರ್ಚೆ ಯಾವ ವಿಷಯದ ಬಗ್ಗೆ? ಸಮುದಾಯದ ಅಥವಾ ರಾಜಕೀಯದ ಎಂದು ಮಾಧ್ಯಮದವರು ಕೇಳಿದ್ರು ಪ್ರಶ್ನೆಗೆ ಉತ್ತರಿಸಿದ ಲಕ್ಮೀ ಹೆಬ್ಬಾಳಕ್ರ್​, ಎರಡೂ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ನಮ್ಮ ಸಮುದಾಯದ ಮುಖಂಡರು ಅವರಿಗೆ ಗೌರವ ಕೊಡುತ್ತಾ ಬಂದಿದ್ದೇನೆ, ರಾಜಕೀಯವಾಗಿ ನಮ್ಮ ಮತ್ತು ಯಡಿಯೂರಪ್ಪನವರ ವಿಚಾರಧಾರೆ ಬೇರೆ ಇರಬಹುದು. ಇದು ವೈಯಕ್ತಿಕವಾಗಿ ಬೇರೆ. ಇದರಲ್ಲಿ ಆಡಳಿತ ಮತ್ತು ವಿಪಕ್ಷ ಅಂತ ಬರೋದಿಲ್ಲ. ಕೆಲವೊಂದು ವಿಚಾರದಲ್ಲಿ ಯಡಿಯೂರಪ್ಪನವರ  ಮಾರ್ಗದರ್ಶನ ತಗೆದುಕೊಳ್ಳುತ್ತೇವೆ ಎಂದು ಭೇಟಿ ಬಗ್ಗೆ ಸಮರ್ಥಿಸಿಕೊಂಡರು.

ಬೊಮ್ಮಾಯಿ ಸಾಹೇಬರ ಮೇಲೆ ಭರವಸೆ ಇದೆ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕೊಡಬೇಕು ಎನ್ನುವ ಆಸಕ್ತಿ ಯಡಿಯೂರಪ್ಪ ಅವರಿಗಿತ್ತು ಆದರೆ ಕೆಲವು ತಾಂತ್ರಿಕ ಕಾರಣರಿಂದ ಕೊಡಲು ಆಗಲಿಲ್ಲ,ಆದರೂ ನಮಗೆ ಈ ಅವಧಿಯಲ್ಲಿ ಸಿಗುವ ಭರವಸೆ ಇದೆ ಬೊಮ್ಮಾಯಿ ಸಾಹೇಬರ ಮೇಲೆ ಭರವಸೆ ಇದೆ. ಎಲ್ಲಾ ಅಡೆತಡೆ ನಿವಾರಣೆ ಮಾಡಿ ಮೀಸಲು ಕೊಡಲಿದ್ದಾರೆ ಎನ್ನುವ ಭರವಸೆ ಇದೆ, ಬೇರೆ ಸಮುದಾಯಕ್ಕೆ ತೊಂದರೆಯಾಗದಂತೆ ಮೀಸಲಾತಿ ನೀಡಬೇಕು ಎಂದರು.

ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ

ಡಿಕೆಶಿ ಉತ್ಸವಕ್ಕೆ ಬೆಂಬಲಿಗರ ಪತ್ರ ವಿಚಾರ

ಡಿಕೆಶಿ ಉತ್ಸವಕ್ಕೆ ಬೆಂಬಲಿಗರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಅದರ ಬಗ್ಗೆ ನನಗೆ ಗೊತ್ತಿಲ್ಲ ಸಿದ್ದರಾಮಯ್ಯ ಉತ್ಸವ ಮಾಡುತ್ತಿದ್ದೇವೆ.ಆ ಕಮಿಟಿಯಲ್ಲಿ ನಾನು ಇದ್ದೇನೆ ಇವತ್ತು ಸಭೆ ಇದೆ,ಅದರಲ್ಲಿ ಭಾಗವಹಿಸುತ್ತೇನೆ. 75  ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ, ಮನುಷ್ಯನ ಜೀವನದಲ್ಲಿ ಅದೊಂದು ಸಾರ್ಥಕತೆ ಅವರು ಉತ್ಸವ ಮಾಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ ನಾವೆಲ್ಲ ಸೇರಿ ಮಾಡುತ್ತಿದ್ದೇವೆ. ಅವರಿಗೆ ಒಳ್ಳೆಯದು ಆಗಲಿ ಅನ್ನೋದು ನಮ್ಮೆಲ್ಲರ ಆಸೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ರು.
Published by:Pavana HS
First published: