KGF Babu: 350 ಕೋಟಿ ಹಂಚಲು ಮುಂದಾಗಿದ್ದ KGF ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್!

ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ (350 Crore) ರೂಪಿಸುವ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

ಕೆಜಿಎಫ್ ಬಾಬು

ಕೆಜಿಎಫ್ ಬಾಬು

  • Share this:
ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು (KGF Babu) ಅವರಿಗೆ  ಕೆಪಿಸಿಸಿ ನೋಟಿಸ್ (KPCC Notice) ನೀಡಿದೆ. ಚಿಕ್ಕಪೇಟೆ ಕ್ಷೇತ್ರದಿಂದ (Chickpet Assembly Constituency) ಸ್ಪರ್ಧೆ ಮಾಡುತ್ತೇನೆ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ್ದರು. ಇದರ ಜೊತೆಗೆ ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ (350 Crore) ರೂಪಿಸುವ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಟಿಕೆಟ್‌ ನೀಡಲಿ, ಬಿಡಲಿ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿರುತ್ತೀರಿ. ಇದು ಪಕ್ಷಕ್ಕೆ ಸವಾಲು ಹಾಕಿರುವಂತಿದೆ. ನಿಮ್ಮ ಈ ಬೇಜವಾಬ್ದಾರಿ ನಡವಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಈ ಬಗ್ಗೆ ತಮ್ಮ ವಿವರಣೆಯನ್ನು ಪತ್ರ ತಲುಪಿದ 7 ದಿನಗಳೊಳಗಾಗಿ ನೀಡಬೇಕು ಅಂತ ಕೆಪಿಸಿಸಿ ಶಿಸ್ತು ‌ಸಮಿತಿಯಿಂದ ಕೆಜಿಎಫ್ ಬಾಬು ಅವರಿಗೆ ಸೂಚಿಸಿದೆ.

ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಕೆಜಿಎಫ್ ಬಾಬು ತಮ್ಮ ಕ್ಷೇತ್ರಕ್ಕೆ ಪ್ರಣಾಳಿಕೆ (Manifesto) ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ್ದರು. ಕಾಂಗ್ರೆಸ್ ತಮಗೆ ಚಿಕ್ಕಪೇಟೆಯ (Chickpet Assembly Constituency) ಟಿಕೆಟ್ ನೀಡುತ್ತೆ ಎಂಬ ಭರವಸೆಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದರು.

ತಮ್ಮ ಕ್ಷೇತ್ರದ ಮಕ್ಕಳ ಶಿಕ್ಷಣಕ್ಕಾಗಿ (Education) ಪ್ರತಿ ಮನೆಗೆ ವಿದ್ಯಾರ್ಥಿ ವೇತನದ (Student scholarship) ರೂಪದಲ್ಲಿ 5,000 ರೂಪಾಯಿ ನೀಡುವ ಮಹತ್ವದ ನಿರ್ಧಾರವನ್ನು ಕೆಜಿಎಫ್ ಬಾಬು ತೆಗೆದುಕೊಂಡಿದ್ದರು. ಇದಕ್ಕಾಗಿ ಬರೋಬ್ಬರಿ 350 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದ್ದಾರೆ.

KPCC given show cause notice to KGF Babu mrq
ಪೋಸ್ಟರ್


ಇದನ್ನೂ ಓದಿ:  Hubballli: ಅಪ್ಕೊಂಡು ಫೋಟೋ ಕ್ಲಿಕ್ ಮಾಡ್ಕೊಂಡ, ಬೆದರಿಕೆ ಹಾಕಿ ಐದಾರು ಸಲ ರೇಪ್ ಮಾಡಿದ್ದ ಯುವಕ ಅರೆಸ್ಟ್

ಇದು ಚುನಾವಣೆಗಾಗಿ ಅಲ್ಲ

ನಾನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಣವನ್ನು ವಿತರಣೆ ಮಾಡುತ್ತಿಲ್ಲ. ನಾನು ಬೆಳೆದು ಬಂದ ಸಮಾಜಕ್ಕೆ ಮರಳಿ ಕೊಡಲು ಬಯಸುತ್ತಿದ್ದೇನೆ. ಜನರಿಗೆ ಸಹಾಯ ಮಾಡೋದು ನನ್ನ ಉದ್ದೇಶವಾಗಿದೆ. ನಾನು ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿ ನನ್ನ ಸಮಾಜದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನ್ಯೂಸ್ 18ಗೆ ನೀಡಿದ್ದ ಸಂದರ್ಶನದಲ್ಲಿ ಕೆಜಿಎಫ್ ಬಾಬು ಹೇಳಿದ್ದರು.

1,743 ಕೋಟಿ ರೂ ಆಸ್ತಿ ಘೋಷಿಸಿಕೊಂಡಿರುವ ಕೆಜಿಎಫ್ ಬಾಬು

2021ರ ಎಂಎಲ್​ಸಿ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಕೆಜಿಎಫ್ ಬಾಬು ಸ್ಪರ್ಧಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ 1,743 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಈ ಹಿಂದೆ ಸಚಿವ ಎಂಟಿಬಿ ನಾಗರಾಜ್ ಅವರು 1,200 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಆದ್ರೆ ಎಂಎಲ್​ಸಿ ಚುನಾವಣೆಯಲ್ಲಿ 397 ಮತಗಳ ಅಂತರದಿಂದ ಕೆಜಿಎಫ್ ಬಾಬು ಸೋಲು ಅನುಭವಿಸಿದ್ದರು.

180 ಕೋಟಿ ವೆಚ್ಚದಲ್ಲಿ ಅಪಾರ್ಟ್​ಮೆಂಟ್ ನಿರ್ಮಾಣದ ಗುರಿ

ಇನ್ನೂ ವಿದ್ಯಾರ್ಥಿ ವೇತನದ ಜೊತೆಗೆ ತಮ್ಮ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಬಹುಮಹಡಿ ಕಟ್ಟಡ ನಿರ್ಮಿಸಿ ಒಂದೊಂದು ಫ್ಲ್ಯಾಟ್ ನೀಡುವ ಯೋಜನೆಯ ಮಾಹಿತಿಯನ್ನು ಸಹ ನ್ಯೂಸ್ 18 ಜೊತೆ ಹಂಚಿಕೊಂಡರು. ಇದಕ್ಕಾಗಿ 180 ಕೋಟಿ ವೆಚ್ಚದಲ್ಲಿ ಆಪಾರ್ಟ್​ಮೆಂಟ್ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

KPCC given show cause notice to KGF Babu mrq
ಕೆಜಿಎಫ್ ಬಾಬು


ಇದನ್ನೂ ಓದಿ:  Idgah Ground: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ, ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ!

ಸ್ಲಂ ನಿವಾಸಿಗಳು ಸಾಮೂಹಿಕವಾಗಿ ತಾವಿರುವ ಭೂಮಿ ನೀಡಲು ಸಿದ್ಧರಾದ್ರೆ, ಬಹುಮಹಡಿ ಕಟ್ಟಡ ನಿರ್ಮಿಸುತ್ತೇನೆ. ನನ್ನ ಚಾರಿಟೇಬಲ್ ಟ್ರಸ್ಟ್ ಮೂಲಕ ಭೂಮಿ ಸ್ವೀಕರಿಸಿ ಕಟ್ಟಡ ನಿರ್ಮಿಸೋದಾಗಿ ಕೆಜಿಎಫ್ ಬಾಬು ಹೇಳಿದ್ದಾರೆ. ಇಲ್ಲಿ ನಿರ್ಮಾಣವಾಗುವ ಕಟ್ಟಡದಲ್ಲಿ ಪ್ರತಿ ಕುಟುಂಬಕ್ಕೆ ಒಂದೊಂದು ಫ್ಲ್ಯಾಟ್ ನೀಡಲಾಗುತ್ತದೆ. ಕೋಲಾರದಲ್ಲಿಯೂ ಇದೇ ರೀತಿ ಬಹುಮಹಡಿ ಕಟ್ಟಡ ನಿರ್ಮಿಸುವ ಕನಸನ್ನು ಕೆಜಿಎಫ್ ಬಾಬು ಹೊಂದಿದ್ದಾರೆ.
Published by:Mahmadrafik K
First published: