ರಾಜ್ಯ ಸರ್ಕಾರದ ಸಾಲಮನ್ನಾ ಟೀಕಿಸಿದ್ದ ಮೋದಿ ಈಗ ರೈತರಿಗೆ ಕೊಟ್ಟಿರುವುದೇನು?; ಹೆಚ್​.ಕೆ.ಪಾಟೀಲ್​ ವ್ಯಂಗ್ಯ

ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಾವು ಮೋದಿ ಸರ್ಕಾರದ ಮೋಸವನ್ನು ಜನರಿಗೆ ತಿಳಿಸುತ್ತೇವೆ. ರಫೇಲ್ ಹಗರಣ ಮೂಲಕ ಮಾಡಿದ ಭ್ರಷ್ಟಾಚಾರ ಬಯಲಿಗೆ ತರುತ್ತೇವೆ. ಸೈನಿಕರಿಗೂ 'ಒಂದೇ ಶ್ರೇಣಿ, ಒಂದೇ ಪಿಂಚಣಿ' ಈಡೇರಿಸದೆ‌ ಮೋಸ ಮಾಡಿದೆ. ರಾಮ ಮಂದಿರ ನಿರ್ಮಾಣ ಮಾಡದೆ ಹಿಂದೂಗಳಿಗೂ ಮೋಸ ಆಗಿದೆ. ಎಲ್ಲಾ ವರ್ಗದ ಜನರು ಅಸಮಾಧಾನಗೊಂಡಿದ್ದಾರೆ. ಮೋದಿ ಮೋಸಗಳನ್ನು ತಿಳಿಸಿ ಜನರಿಗೆ ಜಾಗೃತ ಮಾಡುತ್ತೇವೆ ಎಂದರು.

Latha CG | news18
Updated:February 2, 2019, 3:43 PM IST
ರಾಜ್ಯ ಸರ್ಕಾರದ ಸಾಲಮನ್ನಾ ಟೀಕಿಸಿದ್ದ ಮೋದಿ ಈಗ ರೈತರಿಗೆ ಕೊಟ್ಟಿರುವುದೇನು?; ಹೆಚ್​.ಕೆ.ಪಾಟೀಲ್​ ವ್ಯಂಗ್ಯ
ಎಚ್​​​.​ಕೆ. ಪಾಟೀಲ್
Latha CG | news18
Updated: February 2, 2019, 3:43 PM IST
-ಧರಣೀಶ್​ ಬೂಕನಕೆರೆ

ನವದೆಹಲಿ,(ಫೆ.02): ರಾಜ್ಯ ಸರ್ಕಾರ ಮಾಡಿದ ಸಾಲಮನ್ನಾಕ್ಕೆ ಮೋದಿ ಸರ್ಕಾರ ಚಾಕೋಲೇಟ್​, ಲಾಲಿ ಪಾಪ್, ಫ್ಯಾಶನ್ ಎಂದು ವ್ಯಂಗ್ಯ ಮಾಡಿತ್ತು. ಈ ಸರ್ಕಾರ ತಮ್ಮ ಬಜೆಟ್​​ನಲ್ಲಿ ರೈತರಿಗೆ ಏನು ಮಾಡಿದೆ.? ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ವ್ಯಂಗ್ಯ ಮಾಡಿದ್ದಾರೆ.

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನಿನ್ನೆ ಕೇಂದ್ರದ ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ತಮ್ಮ ಪಕ್ಷದ ಆಶ್ವಾಸನೆ ನೀಡಲು ಬಜೆಟ್​ ಬಳಕೆ ಮಾಡಿಕೊಂಡಿದ್ದಾರೆ. ಬಜೆಟ್ ರಾಜಕೀಯವಾಗಿ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಉದ್ಯೋಗ ಸೃಷ್ಟಿ ಬಗ್ಗೆ ಮೋದಿ ಮಾತನಾಡಿದ್ದರು. ಈ ಬಜೆಟ್​ನಲ್ಲಿ ಈ ಬಗ್ಗೆ ಮಾತನಾಡಿಲ್ಲ. ದೇಶದಲ್ಲಿ ನಿರುದ್ಯೋಗ ಅಸಮಾಧಾನ ಹೆಚ್ಚಾಗಿದೆ. ಈ ಸಮಸ್ಯೆಗೆ ಬಜೆಟ್​ನಲ್ಲಿ ಪರಿಹಾರ ಕಲ್ಪಿಸಿಲ್ಲ. ಬಜೆಟ್​ನಲ್ಲಿ ಸತ್ಯಕ್ಕೆ ದೂರವಾದ ಅಂಕಿ ಅಂಶಗಳಿವೆ. 45 ವರ್ಷದಲ್ಲಿ ಈ ಬಾರಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಕಾಡಿದೆ. ಈ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ಹತ್ತಿಕ್ಕಿದೆ. ಇದು ಕೇಂದ್ರ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ವ್ಯಂಗ್ಯ ಮಾಡಿದರು.

ನಾವು ಕೊಟ್ಟಿದ್ದು ಲಾಲಿಪಾಪ್, ಇವರು ಕೊಟ್ಟಿದ್ದು ಕಾಟನ್ ಕ್ಯಾಂಡಿಯಾ? ಬಜೆಟ್ ವಿರುದ್ಧ ಹೆಚ್​ಡಿಕೆ ಕಿಡಿ

ಒಟ್ಟು 1 ಕೋಟಿ 70 ಲಕ್ಷ ಉದ್ಯೋಗ ನಷ್ಟವಾಗಿದೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ 2% ಬಡ್ಡಿ ವಿನಾಯಿತಿ ನೀಡಿದೆ. ವಾಸ್ತವದಲ್ಲಿ ರೈತನಿಗೆ ಸಾಲ ಕಟ್ಟಲು ಹೇಗೆ ಸಾಧ್ಯ..? ಕನಿಷ್ಠ ಸಾಲಮನ್ನಾ ಅಥವಾ ಬಡ್ಡಿ ಮನ್ನಾ ಮಾಡಬೇಕಿತ್ತು. ಕೇಂದ್ರ ಸರ್ಕಾರ ರೈತರನ್ನು ಲಘುವಾಗಿ ನೋಡುತ್ತಿದೆ. 85 ಸಾವಿರ ಕೋಟಿ ಕಾರ್ಪೊರೇಟ್ ವಲಯಕ್ಕೆ ನೀಡಿದೆ ಎಂದು ತೀವ್ರ ಟೀಕೆ ಮಾಡಿದರು.

ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಾವು ಮೋದಿ ಸರ್ಕಾರದ ಮೋಸವನ್ನು ಜನರಿಗೆ ತಿಳಿಸುತ್ತೇವೆ. ರಫೇಲ್ ಹಗರಣ ಮೂಲಕ ಮಾಡಿದ ಭ್ರಷ್ಟಾಚಾರ ಬಯಲಿಗೆ ತರುತ್ತೇವೆ. ಸೈನಿಕರಿಗೂ 'ಒಂದೇ ಶ್ರೇಣಿ, ಒಂದೇ ಪಿಂಚಣಿ' ಈಡೇರಿಸದೆ‌ ಮೋಸ ಮಾಡಿದೆ. ರಾಮ ಮಂದಿರ ನಿರ್ಮಾಣ ಮಾಡದೆ ಹಿಂದೂಗಳಿಗೂ ಮೋಸ ಆಗಿದೆ. ಎಲ್ಲಾ ವರ್ಗದ ಜನರು ಅಸಮಾಧಾನಗೊಂಡಿದ್ದಾರೆ. ಮೋದಿ ಮೋಸಗಳನ್ನು ತಿಳಿಸಿ ಜನರಿಗೆ ಜಾಗೃತ ಮಾಡುತ್ತೇವೆ ಎಂದರು.
Loading...

ರಾಜ್ಯಕ್ಕೆ ರಾಹುಲ್ ಗಾಂಧಿ ಬರುವ ಬಗ್ಗೆ ಚರ್ಚೆ ನಡೆಯುತ್ತದೆ. ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಸುತ್ತೇವೆ. ಪ್ರಣಾಳಿಕೆ ಬಗ್ಗೆ ಚಟುವಟಿಕೆಗಳು ನಡೆದಿವೆ. ಶೀಘ್ರದಲ್ಲಿ ದಿನಾಂಕ ಅಂತಿಮ ಘೋಷಣೆ ಮಾಡಲಿದ್ದೇವೆ ಎಂದು ಹೇಳಿದರು.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ