• Home
  • »
  • News
  • »
  • state
  • »
  • ಮುಜರಾಯಿ ಇಲಾಖೆಯ ಮೂಲಕ ಹಡೀಲು ಬಿದ್ದ ಭೂಮಿಗಳಲ್ಲಿ ಮತ್ತೆ ಭತ್ತದ ಕೃಷಿ; ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಮುಜರಾಯಿ ಇಲಾಖೆಯ ಮೂಲಕ ಹಡೀಲು ಬಿದ್ದ ಭೂಮಿಗಳಲ್ಲಿ ಮತ್ತೆ ಭತ್ತದ ಕೃಷಿ; ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವ್ ರೇಟ್ ನಲ್ಲಿ ಇಳಿಮುಖವಾಗದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಮಾತ್ರ ಸದ್ಯದ ಮಟ್ಟಿಗೆ ಅವಕಾಶ ನೀಡಲಾಗಿದೆ

  • Share this:

ಪುತ್ತೂರು (ಜೂ. 22):  ಮುಜರಾಯಿ ಇಲಾಖೆಯ ಮೂಲಕ ರಾಜ್ಯದೆಲ್ಲೆಡೆ ಇರುವ ಹಡೀಲು ಬಿದ್ದ ಭೂಮಿಗಳ ಪುನಚ್ಛೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ. ಪುತ್ತೂರಿನಲ್ಲಿ ನ್ಯೂಸ್ 18 ಜೊತೆಗೆ ಮಾತನಾಡಿದ ಅವರು ಈ ಭೂಮಿಗಳನ್ನು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಮೂಲಕ ಪುನಚ್ಛೇತನ ನಡೆಸಲಾಗುವುದು ಎಂದು ಅವರು ರಾಜ್ಯದಾದ್ಯಂತ ಭತ್ತ ಬೇಸಾಯ ಮಾಡದೆ ಹಡೀಲು ಬಿದ್ದಿರುವ ಸಾಕಷ್ಟು ಭೂಮಿಗಳಿದ್ದು, ಈ ಸಂಬಂಧ ಶೀಘ್ರವೇ ರಾಜ್ಯದಾದ್ಯಂತ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಅವರು ತಿಳಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಪುತ್ತೂರಿನ ಗದ್ದೆ ಬೇಸಾಯ ಮಾಡುವ ಕೃಷಿಕರಿಗೆ ಉಚಿತವಾಗಿ ಭತ್ತದ ಬೀಜಗಳನ್ನು ವಿತರಣೆ ಮಾಡುತ್ತಿದ್ದು, ಭತ್ತದ ಬೇಸಾಯಕ್ಕೆ ಒತ್ತು ನೀಡುತ್ತಿದೆ ಎಂದ ಅವರು ಅಧಿಕಾರಿಗಳ ಮಾಹಿತಿ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ 5 ಸಾವಿರ ಎಕರೆ ಹಡೀಲು ಭೂಮಿ ನಾಟಿ ಮಾಡದೆ ಉಳಿದಿದೆ.


ಈ ಎಲ್ಲಾ ಭೂಮಿಗಳಲ್ಲಿ ಮತ್ತೆ ಭತ್ತದ ಬೇಸಾಯ ಮಾಡುವ ತೀರ್ಮಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಾನು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಎರಡು ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ಈ ವರ್ಷ ಪ್ರಥಮ ಹಂತದಲ್ಲಿ 1 ಸಾವಿರ ಎಕರೆ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗುವುದು ಎಂದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 150 ಎಕರೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 50 ಎಕರೆ, ಹಾಗೂ ಜಿಲ್ಲೆಯ ಇತರ ತಾಲೂಕುಗಳ ಹಡೀಲು ಭೂಮಿ ಸೇರಿ ಒಟ್ಟು 1 ಸಾವಿರ ಎಕರೆಯಲ್ಲಿ ಭತ್ತದ ಕೃಷಿ ಪ್ರಾರಂಭಿಸಲಾಗುವುದು ಎಂದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅನ್ ಲಾಕ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅನ್ ಲಾಕ್ ಜಾರಿಗೆ ತರಲಾಗುತ್ತಿದೆ.


ಆದರೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವ್ ರೇಟ್ ನಲ್ಲಿ ಇಳಿಮುಖವಾಗದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಮಾತ್ರ ಸದ್ಯದ ಮಟ್ಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡಿದ್ದು, ಇದರ ಜೊತೆಗೆ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಫೋಟೋ ಸ್ಟುಡಿಯೋಗಳಿಂದಲೂ ಅವಕಾಶಕ್ಕೆ ಮನವಿ ಬಂದಿದೆ. ಈ ಬಗ್ಗೆ ಇಂದು ನಡೆಯಲಿರುವ ಮುಖ್ಯಮಂತ್ರಿಗಳ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಆದೇಶ ನೀಡಿದಲ್ಲಿ ಈ ಎಲ್ಲಾ ಅಂಗಡಿಗಳಿಗೂ  ಅವಕಾಶ ಮಾಡಿಕೊಡಲಾಗುವುದು.ಅತೀ ತುರ್ತು ಸಂದರ್ಭದಲ್ಲಿ ಬಟ್ಟೆ ಅಂಗಡಿ, ಚಪ್ಪಲಿ ಹಾಗೂ ಇತರ ಅಂಗಡಿಗಳನ್ನು ತೆರೆಯುವ ಬಗ್ಗೆ ಅವಲೋಕಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


ಇದನ್ನು ಓದಿ: ಕೊರೋನಾ ಜೊತೆ ನೊಣಗಳ ಕಾಟಕ್ಕೆ ಹೈರಾಣದ ಗದಗದ ಹರ್ತಿ ಕಾಟ


ಜಿಲ್ಲೆಗೆ ದಿನಕ್ಕೆ ಬರುತ್ತಿದ್ದ 6 ಸಾವಿರದಿಂದ 7 ಸಾವಿರ ವಾಕ್ಸಿನ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಇದೀಗ 39 ಸಾವಿರದಿಂದ 40 ಸಾವಿರ ಲಸಿಕೆಗಳನ್ನು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 65 ಮೇಲ್ಪಟ್ಟ, 45 ಮೇಲ್ಪಟ್ಟ ಹಾಗೂ 18 ಮೇಲ್ಪಟ್ಟ ಹೀಗೆ  18 ಲಕ್ಷ ವಾಕ್ಸಿನ್ ಪಡೆಯುವ ಅರ್ಹತೆ ಹೊಂದಿದವರಿದ್ದಾರೆ. ಇದರಲ್ಲಿ 4.50 ಲಕ್ಷ ಜನರಿಗೆ ಈಗಾಗಲೇ ವ್ಯಾಕ್ಸಿನ್ ನೀಡಲಾಗಿದೆ. ಇನ್ನುಳಿದವರಿಗೆ ಅತೀ ವೇಗವಾಗಿ ವಾಕ್ಸಿನ್ ನೀಡಲಾಗುತ್ತದೆ. ಕ್ಸಿನ್ ಜೊತೆಗೆ ಕೊರೊನಾ ಸರಪಳಿಯನ್ನು ಕಡಿಯುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದರು.


ಕರ್ನಾಟಕ-ಕೇರಳ ಗಡಿಭಾಗವಾದ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸಮೀಪದ ಕೇರಳ ರಾಜ್ಯದ ವ್ಯಾಪ್ತಿಗೆ ಬರುವ ಮಿಂಚುಪದವು ಎಂಬಲ್ಲಿ ಕೇರಳ ಗೇರು ಅಭಿವೃದ್ಧಿ ನಿಗಮ ಪಾಳು ಬಾವಿಗೆ ಎಂಡೋಸಲ್ಫಾನ್ ಕೀಟನಾಶಕ ಸುರಿದಿದೆ ಎನ್ನುವ ವರದಿಗೆ ಸ್ಪಂದಿಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು. ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು. ಮಿಂಚುಪದವು ಎಂಬಲ್ಲಿರುವ ಪಾಳು ಬಾವಿಗೆ ಕೇರಳ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ನಿಶೇಧಿತ ಎಂಡೋಸಲ್ಫಾನ್ ಅನ್ನು ಸುರಿದು ಬಾವಿಯನ್ನು ಮುಚ್ಚಿದ್ದಾರೆ ಎನ್ನುವ ಮಾಹಿತಿಯನ್ನು ಸ್ವತಹ ಕೇರಳ ಗೇರು ಅಭಿವೃದ್ಧಿ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ನೀಡಿದ ಹಿನ್ನಲೆಯಲ್ಲಿ ಈ ವಿಚಾರವಾಗಿ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆಗಳೂ ನಡೆದಿತ್ತು.

Published by:Seema R
First published: