ರಾಜ್ಯದ ಪ್ರಮುಖ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಕುರಿತು ಶೀಘ್ರದಲ್ಲಿಯೇ ತೀರ್ಮಾನ; ಕೋಟಾ ಶ್ರೀನಿವಾಸ ಪೂಜಾರಿ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬರುವಂತೆ ವಿಎಚ್​ಪಿ, ಬಜರಂಗದಳ ಆಗ್ರಹಿಸಿತು. ಭಕ್ತರ ಉಡುಪಿಗೆ ಆಕ್ಷೇಪಿಸಿ ಈ ಬಗ್ಗೆ ಮುಜರಾಯಿ ಇಲಾಖೆಗೆ ಮನವಿ ಕೂಡ ಮಾಡಿತ್ತು. 

news18-kannada
Updated:January 16, 2020, 1:11 PM IST
ರಾಜ್ಯದ ಪ್ರಮುಖ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಕುರಿತು ಶೀಘ್ರದಲ್ಲಿಯೇ ತೀರ್ಮಾನ; ಕೋಟಾ ಶ್ರೀನಿವಾಸ ಪೂಜಾರಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ.16): ದೇವಾಲಯಗಳಲ್ಲಿನ ಶಿಷ್ಟಾಚಾರ ಹಾಗೂ ಸಂಪ್ರದಾಯಗಳನ್ನು ಪಾಲಿಸುವ ಉದ್ದೇಶದಿಂದ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ನಿಯಮ ಜಾರಿಗೆ ತರುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಈ ಬಗ್ಗೆ ಅನೇಕ ಪ್ರಸ್ತಾಪಗಳು ಬಂದಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಕೇರಳ ಗುರುವಾಯುರು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯವಾಗಿದೆ. ಇನ್ನು ಇತ್ತೀಚಿಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿಯೂ ಗರ್ಭಗುಡಿ ಪ್ರವೇಶಿಸಲು ವಸ್ತ್ರ ಸಂಹಿತೆ ಅನುಸರಿಸುವುದ ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಾಗಿದೆ. ಈಗ ರಾಜ್ಯದಲ್ಲಿ ಈ ನಿಯಮವನ್ನು ಜಾರಿಗೆ ತರಬೇಕು ಎಂಬ ಕೂಗು ಕೇಳಿಬಂದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬರುವಂತೆ ವಿಎಚ್​ಪಿ, ಬಜರಂಗದಳ ಆಗ್ರಹಿಸಿತು. ಭಕ್ತರ ಧಿರಿಸಿಗೆ ಆಕ್ಷೇಪಿಸಿ ಈ ಬಗ್ಗೆ ಮುಜರಾಯಿ ಇಲಾಖೆಗೆ ಮನವಿ ಕೂಡ ಮಾಡಿತ್ತು.

ಈ ಕುರಿತು ಇಂದು ಮಾತನಾಡಿದ ಸಚಿವರು, ವಸ್ತ್ರ ಸಂಹಿತೆ ಕುರಿತು  ಹಲವು ದೇವಸ್ಥಾನಗಳಿಂದ ಪ್ರಸ್ತಾವನೆ ಬಂದಿವೆ. ಜೊತೆಗೆ ಸಂಘ ಸಂಸ್ಥೆಗಳಿಂದ ಲೂ ಪ್ರಸ್ತಾವನೆ ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ನಂತರ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ  ಈ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನು ಓದಿ: ಬಗೆಹರಿಯದ ಕೆಪಿಸಿಸಿ ಬಿಕ್ಕಟ್ಟು; ಇನ್ನೊಂದು ವರದಿ ತರಿಸಿಕೊಂಡ ಹೈಕಮಾಂಡ್; ಡಿಕೆಶಿ ಕೊನೆ ಪ್ರಯತ್ನ?

ಜನವರಿ  20.21 ರಂದು ಧಾರ್ಮಿಕ ಪರಿಷತ್ ಸಭೆ ಇದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ. ಅಲ್ಲದೇ ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಕೂಡ ಸಲಹೆ ಪಡೆಯಲಾಗುವುದು ಎಂದರು.
Published by: Seema R
First published: January 16, 2020, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading