ಬೆಂಗಳೂರು (ಸೆಪ್ಟೆಂಬರ್ 01) ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದರು. ಈ ಪೈಕಿ 3 ಜನ ಯುವತಿಯರು ಹಾಗೂ 4 ಜನ ಹುಡುಗರು ಎಂದು ತಿಳಿದುಬಂದಿದೆ. ಅದರಲ್ಲಿ ತಮಿಳುನಾಡಿನ ಹೊಸೂರು ಶಾಸಕ ವೈ.ಪ್ರಕಾಶ್ ಮಗ ಕರುಣಾ ಸಾಗರ್ ಮತ್ತು ಆತನ ಪತ್ನಿ ಸಹ ಮೃತಪಟ್ಟಿದ್ದರು. ಮೃತರನ್ನು ಬಿಂದು (28), ದಂಪತಿ, ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಎನ್ನಲಾಗಿತ್ತು. ಇವರು ಚಲಾಯಿಸುತ್ತಿದ್ದ ಆಡಿ ಕಾರು ಬಹಳ ವೇಗವಾಗಿ ಸಾಗಿ ಫೂಟ್ಪಾತ್ ತಡೆಗೋಡೆ ಗುದ್ದಿ ಬಳಿಕ ಬ್ಯಾಂಕ್ ಕಟ್ಟಡಕ್ಕೆ ಗುದ್ದಿ ಅಪಘಾತವಾಗಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಮಂದಿಯೂ ದಾರುಣ ಸಾವು ಕಂಡಿದ್ಧಾರೆ.
ತಡರಾತ್ರಿ ಈ ಅಪಘಾತ ಸಂಭವಿಸುವುದಕ್ಕೂ ಮುನ್ನ ಪೊಲೀಸರ ಕಣ್ಣಿಗೆ ಈ ಕಾರು ಬಿದ್ದಿತ್ತಂತೆ. ರಾತ್ರಿ 10:35ರ ಸುಮಾರಿಗೆ ಅತಿವೇಗವಾಗಿ ಸಾಗುತ್ತಿದ್ದ ಈ ಕಾರನ್ನು ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದರು. ಈ ಘಟನೆಯ ವಿವರ ನೀಡಿದ ಕಾನ್ಸ್ಟೆಬಲ್ ಪ್ರಶಾಂತ್, ತಾವು ಯಾಕೆ ರ್ಯಾಷ್ ಡ್ರೈವಿಂಗ್ ಮಾಡಿದಿ ಎಂದು ಪ್ರಶ್ನಿಸಿದ್ದರು. ಇದೇ ರಸ್ತೆಯಲ್ಲಿ ತಮ್ಮ ಮನೆ ಇದೆ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಕರುಣ್ ಸಾಗರ್ ತಮಗೆ ತಿಳಿಸಿದರು. ನೈಟ್ ಕರ್ಫ್ಯೂ ಇದೆ. ಹುಷಾರಾಗಿ ನಿಧಾನವಾಗಿ ಹೋಗಿ ಎಂದು ತಾನು ಅವರಿಗೆ ತಿಳಿ ಹೇಳಿದ್ದಾಗಿ ಕಾನ್ಸ್ಟೆಬಲ್ ಪ್ರಶಾಂತ್ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೋರಮಂಗಲದ ಶಾಸಕರ ಕಾರು ಅಪಘಾತ ಪ್ರಕರಣದ ಸಂಪೂರ್ಣ ವರದಿ ತಯಾರು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಮೃತರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ರಕ್ತ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಮದ್ಯಪಾನ ಅಥವಾ ಮಾದಕ ವಸ್ತು ಸೇವನೆ ಬಗ್ಗೆ ಧೃಡಪಡಿಸಲು ರಕ್ತ ಪರೀಕ್ಷೆ ವರದಿ ಅಗತ್ಯ ಇದೆ. ಆದರೆ, ರಕ್ತ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಬಳಿಕ ಪೊಲೀಸರು ಅಪಘಾತದ ಸಂಪೂರ್ಣ ವರದಿಯನ್ನು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.
ಸಂಚಾರ ಪೂರ್ವ ವಿಭಾಗ ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ವರದಿ ತಯಾರಾಗುತ್ತಿದೆ. ಮೂವರ ಮೊಬೈಲ್ ಗಳು ಸಿಕ್ಕಿವೆ ಅವುಗಳ ಡಾಟಾ ಅನಾಲಿಸಿಸ್ ಸಹ ನಡೆಯುತ್ತಿದ್ದೆ. ರಕ್ತ ಪರೀಕ್ಷೆ , ಹಾಗೂ ಮೊಬೈಲ್ ಡಾಟಾ ಅನಾಲಿಸಿಸ್ ವರದಿ ಬಂದ ಕೂಡಲೆ ವರದಿ ಬಹುತೇಕ ಸಿದ್ದವಾಗಲಿದೆ. ರಕ್ತ ಪರೀಕ್ಷೆ ವರದಿ ಇನ್ನೂ ಬರಬೇಕಾಗಿರುವುದರಿಂದ ನಾಳೆ ವರದಿ ಸಲ್ಲಿಕೆ ಸಾಧ್ಯತೆ ಇದೆ ಎನ್ನಲಾಗಿದೆ. ಕೋರಮಂಗಲದಲ್ಲಿ ನಡೆದಿರುವ ಈ ಅಪಘಾತ ನಗರದಲ್ಲಿ ತಲ್ಲಣ ಉಂಟುಮಾಡಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: ಕೋರಮಂಗಲ ಅಪಘಾತಕ್ಕೆ ಒಂದೆರಡು ಗಂಟೆ ಮೊದಲು ವಾರ್ನಿಂಗ್ ಕೊಟ್ಟಿದ್ದ ಪೊಲೀಸರು
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ