Waterfalls: ಎಷ್ಟು ಚೆನ್ನಾಗಿದೆ ಜಲಪಾತ ಅಂತ ಇಲ್ಲಿಗೆ ಹೋಗೋ ಮುಂಚೆ ಸ್ವಲ್ಪ ಯೋಚನೆ ಮಾಡಿ

Saanaapura Falls: ಕೆಲವರು ಇಲ್ಲಿ ಸ್ಥಳೀಯ ನಾವೀಕರು ದೋಣಿಗಳನ್ನು ಹಾಕಿಕೊಂಡು ಸ್ವಲ್ಪ ದೂರದವರೆಗೂ ಸುತ್ತಾಡಿಸಿ ಇಲ್ಲಿ ಕಿರುಜಲಪಾತಗಳನ್ನು ತೋರಿಸುತ್ತಾರೆ.  ದೋಣಿಯಲ್ಲಿ ಸುತ್ತಾಡುತ್ತಾ ಇಲ್ಲಿಯ ನದಿ ನಿರ್ಮಿತ  ಕಿರುಜಲಪಾತಗಳನ್ನು ನೋಡುವುದೇ ಸಂಭ್ರಮವಾಗಿದೆ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವವಿಖ್ಯಾತ (World famous Jog Falls) ಹಂಪಿಯ (Hampi) ಸ್ಮಾರಕಗಳು ಎಲ್ಲರಿಗೂ ಗೊತ್ತು. ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೂ ಗೊತ್ತು, ವಿಜಯನಗರ ಅರಸರ ಮೊದಲು ರಾಜಧಾನಿ ಆನೆಗೊಂದಿಯೂ ಗೊತ್ತು. ಆದರೆ ಇದೇ ಪ್ರದೇಶದಲ್ಲಿ ತುಂಗಭದ್ರಾ ನದಿಯಿಂದ ಸೃಷ್ಠಿಯಾದ ಕಿರುಜಲಪಾತಗಳಿವೆ. ಸುಂದರ ಆಕರ್ಷಕವಾಗಿರುವ ಜಲಪಾತಗಳನ್ನು ಕಣ್ತುಂಬಿಸಿಕೊಳ್ಳುವವರು ಹೆಚ್ಚು ಆದರೆ ಇಲ್ಲಿಗೆ ಬರಲು ಸರಿಯಾದ ರಸ್ತೆ ಇಲ್ಲ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವಿಲ್ಲ. ಮೂಲತಃ ಇದು ಸಾಣಾಪುರ (Saanaapura) ಬಳಿಯಲ್ಲಿದ್ದರೂ ವಿಶ್ವ ಪ್ರವಾಸೋದ್ಯಮ ಮ್ಯಾಪ್ ನಲ್ಲಿ ಹಂಪಿ ಜಲಪಾತಗಳೆಂದು ದಾಖಲಾಗಿದೆ. ಹಂಪಿಗೆ ಬಂದವರು ಇದು ಎಲ್ಲಿದೆ ಎಂದು ಹುಡಕಬೇಕಾಗಿದೆ. 

ವಿಶ್ವಪರಂಪರೆ ಪಟ್ಟಿಯಲ್ಲಿರುವ ಹಂಪಿಯು ಸ್ಮಾರಕಗಳಿಂದ ಖ್ಯಾತಿ ಹೊಂದಿದೆ. ಧಾರ್ಮಿಕ ಹಾಗು ಪೌರಾಣಿಕ ಹಿನ್ನೆಲೆಯಲ್ಲಿ ಅಂಜನೇಯನ ಜನ್ಮ ಸ್ಥಳ ಅಂಜನಾದ್ರಿಯೂ ಈಗ ಪ್ರವಾಸಿಗರ ತಾಣವಾಗಿದೆ. ದೇಶ ಹಾಗು ವಿದೇಶಿಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ವಿಕೇಂಡ್ ನ ಬೆಸ್ಟ್ ಸ್ಪಾಟ್ ಆಗಿರುವ ಆನೇಗೊಂದಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಈ ಮಧ್ಯೆ ಪ್ರವಾಸಿಗರ ಮಾರ್ಗಸೂಚಿಯಲ್ಲಿ ಹಂಪಿ ಫಾಲ್ಸ್ ಎಂಬ ಮಾಹಿತಿ ಇದೆ.

ಮ್ಯಾಪ್​ ನೋಡಿ ಬರುವವರು ಪರದಾಡಬೇಕು

ಮ್ಯಾಪ್ ನೋಡಿಕೊಂಡು ಬರುವ ಪ್ರವಾಸಿಗರು ಈ ಫಾಲ್ಸ್ ಗಳು ಎಲ್ಲಿವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕಾರಣ ಈ ಜಲಪಾತಗಳಿಗೆ ಸರಿಯಾದ ದಾರಿ ಇಲ್ಲ. ಇಲ್ಲಿಗೆ ಬಂದವರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳಿಲ್ಲ. ತುಂಗಭದ್ರಾ ನದಿಯು ಹರಿಯುವ ಸಾಣಾಪುರ ಬಳಿಯಲ್ಲಿ ಈ ಜಲಪಾತಗಳಿವೆ. ತುಂಗಭದ್ರಾ ನದಿಯ ನೀರು ಹರಿಯುವಾಗ ಕಲ್ಲು ಬಂಡೆಗಳ ಮಧ್ಯೆ ಹಾಯ್ದು ಹೋಗುವಾಗ ಜಲಧಾರೆ ಧುಮ್ಮುಕ್ಕುತ್ತಿವೆ. ಒಂದು ಕಡೆ ನದಿಯ ಪ್ರಪಾತವಿದೆ, ನದಿಯ ನೀರು ಹರಿಯುವಾಗ ಕಲ್ಲುಗಳ ಮಧ್ಯೆ ಹರಿಯುವ ನಾದ, ಅಲ್ಲಿ ಸೃಷ್ಠಿಯಾಗುವ ಸೌಂದರ್ಯ ನೋಡಿದವರು ಫುಲ್ ಖುಷ್ ಆಗುತ್ತಾರೆ.

ನದಿಯ ನೀರು ಹರಿಯುದ ಕಲ್ಲುಗಳು ಸಹ ರಂಧ್ರಗಳಾಗಿವೆ. ಅವುಗಳ ಮಧ್ಯೆಯೇ ನೀರು ಹರಿಯುತ್ತಿದೆ. ಸ್ವಲ್ಪ ಎತ್ತರದಿಂದ ಹರಿಯುವ ನೀರು ನೋಡಿ ಆನಂದಿಸುತ್ತಾರೆ.ಇದೇ ಸ್ಥಳದಲ್ಲಿ ತುಂಗಭದ್ರಾ ನದಿಯು ಪ್ರಪಾತದ ರೂಪದಲ್ಲಿ ಹರಿಯುತ್ತಿದೆ. ಕಲ್ಲು ಬಂಡೆಗಳ ಮಧ್ಯೆ ಇರುವ ಈ ಸ್ಥಳ ನೋಡಿದವರು ಹೊಸಲೋಕಕ್ಕೆ ಹೋದಂಥ ಅನುಭವವಾಗುತ್ತದೆ.

ಇದನ್ನೂ ಓದಿ: ತಮಿಳುನಾಡು ಸರ್ಕಾರಕ್ಕೆ ಕೌಂಟರ್ ಕೊಡಲು ಸಿಎಂ ಬೊಮ್ಮಾಯಿ ರೆಡಿ, ನಾಳೆಯೇ 'ಮೇಕೆದಾಟು' ನಿರ್ಣಯ ಮಂಡನೆ

ಇದೇ ಸ್ಥಳದಲ್ಲಿ ಕನ್ನಡ, ತೆಲಗು ಭಾಷೆಯಲ್ಲಿ ನಾಲ್ಕೈದು ಚಲನಚಿತ್ರಗಳ ಚಿತ್ರಿಕರಣವಾಗಿದೆ. ಸುಂದರ ಸ್ಥಳವಾಗಿರುವ ಈ ಸ್ಥಳವು ಫಿಲ್ಮ ಶೂಟಿಂಗ್ ಸೂಕ್ತವಾದ ಸ್ಥಳವಾಗಿದೆ.ಮಾಹಿತಿ ಹೊಂದಿರುವ ಪ್ರವಾಸಿಗರು ಇಲ್ಲಿಯ ಕಿರುಜಲಪಾತಗಳಲ್ಲಿ ಮಿಂದು ಸಂಭ್ರಮಿಸುತ್ತಾರೆ, ಸುಮಾರು ಹೊತ್ತು ಇಲ್ಲಿ ಕಾಲ ಕಳೆಯುವ ಪ್ರವಾಸಿಗರಿಗೆ ಈ ಸ್ಥಳದಲ್ಲಿ ಸಮಯ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ.

ಕೆಲವರು ಇಲ್ಲಿ ಸ್ಥಳೀಯ ನಾವಿಕರು ದೋಣಿಗಳನ್ನು ಹಾಕಿಕೊಂಡು ಸ್ವಲ್ಪ ದೂರದವರೆಗೂ ಸುತ್ತಾಡಿಸಿ ಇಲ್ಲಿ ಕಿರುಜಲಪಾತಗಳನ್ನು ತೋರಿಸುತ್ತಾರೆ.  ದೋಣಿಯಲ್ಲಿ ಸುತ್ತಾಡುತ್ತಾ ಇಲ್ಲಿಯ ನದಿ ನಿರ್ಮಿತ  ಕಿರುಜಲಪಾತಗಳನ್ನು ನೋಡುವುದೇ ಸಂಭ್ರಮವಾಗಿದೆ, ಈ ಮೊದಲು ಇಲ್ಲಿಗೆ ಬರುವ ಪ್ರವಾಸಿಗರು ಈಜಾಡಲು ಹೋಗಿ ನದಿಯ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆಗಳಿದ್ದವು. ಆದರೆ ಸ್ಥಳೀಯ ನಾವಿಕರು ದೋಣಿಗಳನ್ನು ಹಾಕಿ ಸಹಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಡಿಫ್ರೆಂಟ್ ವೈಬ್ ಕೊಡುವ ಈ ಕೋರಮಂಗಲದ ಕೆಫೆಗಳಿಗೆ ಒಮ್ಮೆ ವಿಸಿಟ್ ಮಾಡಿ

ಕಿರುಜಲಪಾತಗಳ ಪ್ರದೇಶದಲ್ಲಿ ನದಿಯ ಆಳಕ್ಕೆ ಇಳಿಯದಂತೆ ಕಾವಲು ಇದ್ದಾರೆ. ಸರಕಾರ ಹಾಗು ಜಿಲ್ಲಾಡಳಿತವು ಈ ಸ್ಥಳವನ್ನು ಅಭಿವೃದ್ದಿಪಡಿಸಬೇಕು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಜನತೆ ಒತ್ತಾಯಿಸುತ್ತಿದ್ದಾರೆ.
Published by:Sandhya M
First published: