ನೀರಿನ ಸಮಸ್ಯೆ ನೀಗಿಸಲು ಪೊಲೀಸರಿಂದಲೇ ನಿರ್ಮಾಣವಾಯಿತು ಕೆರೆ

ಕಿಡದಾಳ ಭಾಗದಿಂದ ಗಿಣಗೆರೆಗೆ ಹೋಗುವ ಹಳ್ಳದ ನೀರನ್ನು ನಿಲ್ಲಿಸಿ ಕೆರೆ ನಿರ್ಮಿಸಲಾಗಿದೆ

ಕೆರೆ

ಕೆರೆ

  • Share this:
ಕೊಪ್ಪಳ (ಜು. 2): ಇದೊಂದು ಅಪರೂಪದ ಕಾರ್ಯ.  ಪೊಲೀಸ್​​ ನೌಕರರ ವಸತಿ ಗೃಹಗಳಿಗೆ ನೀರಿನ ಸಮಸ್ಯೆಯಾಗದಂತೆ ಕೆರೆಯನ್ನೇ ನಿರ್ಮಿಸಲಾಗಿದೆ. ಈ ಮೂಲಕ ಇಲಾಖೆಯ ಕುಟುಂಬಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ವಿಶೇಷ ಎಂದರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಪ್ರೇರಣೆಯಿಂದ ಇಲಾಖೆಯ ಸಿಬ್ಬಂದಿಗಳೇ ಶ್ರಮವಾದ ಮಾಡಿ ಈ ಕೆರೆ ನಿರ್ಮಿಸಿದ್ದಾರೆ. ಕೇವಲ ಕುಡಿಯುವ ನೀರಿನ ಆಗರವಾಗಿರದೇ ಈ ಕೆರೆ ಈಗ ಪಿಕ್​ನಿಕ್​ಸ್ಪಾಟ್​ನಂತೆ ರೂಪುಗೊಂಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸರಿಗಾಗಿ  ಬಸಾಪುರದ ಬಳಿ 18 ಎಕರೆ ಭೂಮಿಯಲ್ಲಿ ನಾಲ್ಕು ವರ್ಷಗಳ ಹಿಂದೆ 120 ಕ್ವಾಟ್ರಸ್ ಹಾಗೂ 8 ಅಧಿಕಾರಿಗಳ ಕ್ವಾಟ್ರಸ್ ಗಳನ್ನು ನಿರ್ಮಿಸಲಾಗಿತ್ತು. ಈ ವಸತಿ ಗೃಹಗಳಿಗೆ ಕೊಳವೆ ಬಾವಿ ಮುಖಾಂತರ ನೀರು ಒದಗಿಸಲು ಆರಂಭಿಸಿದರೂ ಸರಿಯಾಗಿ ನೀರು ಸಿಗಲಿಲ್ಲ. ಇದರಿಂದಾಗಿ ಇಲ್ಲಿಗೆ ಸಿಬ್ಬಂದಿಗಳ ಕುಟುಂಬದವರು ವಾಸ ಮಾಡಲು ಹಿಂಜರಿದಿದ್ದರು, ಉದ್ಘಾಟನೆಯಾಗಿ ನಾಲ್ಕು ವರ್ಷವಾಗಿದ್ದರೂ ಇಲ್ಲಿ ಕೇವಲ 7 ಕುಟುಂಬಗಳು ಮಾತ್ರ ವಾಸವಾಗಿದ್ದರು,

ಇದಕ್ಕೆ ಕಾರಣ ಇಲ್ಲಿ ಕುಡಿವ ನೀರಿನ ಸಮಸ್ಯೆ.ಈ ಮಧ್ಯೆ ಕೊಪ್ಪಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿದ್ದ ಶ್ರೀಧರ ತಮ್ಮ ಸಿಬ್ಬಂದಿಗಳ ಕುಟುಂಬಗಳಿಗೆ ಶಾಶ್ವತ ಕುಡಿವ ನೀರು ಸಿಗಬೇಕು ಎಂಬ ಉದ್ದೇಶದಿಂದ ಒಟ್ಟು 2.5 ಎಕರೆ ಭೂಪ್ರದೇಶದಲ್ಲಿ 25 ಅಡಿ ಆಳವಾದ ಕೆರೆಯನ್ನು ನಿರ್ಮಿಸಲು ಉದ್ದೇಶಿಸಿದರು, ಕಿಡದಾಳ ಭಾಗದಿಂದ ಗಿಣಗೆರೆಗೆ ಹೋಗುವ ಹಳ್ಳದ ನೀರನ್ನು ನಿಲ್ಲಿಸಿ ಕೆರೆ ನಿರ್ಮಿಸಲು ಮುಂದಾದರು. ಇದಕ್ಕೆ   ಎಸ್ಪಿಯವರ ಸಂಬಂಧಿಯೊಬ್ಬರು ಧನ ಸಹಾಯ ಮಾಡಲು ಮುಂದಾಗಿದ್ದರು, ಕೆರೆ ನಿರ್ಮಾಣಕ್ಕೆ ಲಭ್ಯವಿರುವ ಪೊಲೀಸರು ಶ್ರಮದಾನ ಮಾಡಲು ಮುಂದಾಗಿ ಸಶಸ್ತ್ರ ಮೀಸಲು ಪಡೆ ಹಾಗೂ ಇತರ ಪೊಲೀಸ್ ತಮ್ಮ ಕೈಲಾದ ಶ್ರಮವನ್ನು ಮಾಡಿ ಸುಂದರವಾದ ಕೆರೆ ನಿರ್ಮಿಸಿದ್ದಾರೆ.

ಇದನ್ನು ಓದಿ: ಮೋದಿ ಸಂಪುಟದಲ್ಲಿ ಸಚಿವ ಸ್ಥಾನಪಡೆಯಲಿದ್ದಾರಾ ಸಂಸದ ಪ್ರತಾಪ್​ ಸಿಂಹ?

ಪೊಲೀಸರ ಶ್ರಮದಾನದಿಂದ ರೂಪುಗೊಂಡ ಕೆರೆಗೆ ಈಗ ಇಲ್ಲಿನ ಸಮಸ್ಯೆ ನಿವಾರಿಸಿದೆ. ಇತ್ತೀಚೆಗೆ ಆದ ಉತ್ತಮ ಮಳೆಯಾಗಿದ್ದರಿಂದ ಸುಮಾರು 10 ಅಡಿಯವರೆಗೂ ನೀರು ಕೆರೆಯಲ್ಲಿ ನಿಂತಿದೆ.  ಕೆರೆಯಲ್ಲಿ ನೀರು ನಿಲ್ಲುತ್ತಿದ್ದಂತೆ ಅಕ್ಕ ಪಕ್ಕದ ಬೋರೆವೆಲ್ ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ, ಇದರಿಂದಾಗಿ ಪೊಲೀಸ್ ಕ್ವಾಟ್ರಸ್ ಗೆ ಬರಲು ಹಿಂಜರಿಯುತ್ತಿದ್ದ ಪೊಲೀಸ್ ಕುಟುಂಬಗಳು ಈಗ ಇದೇ ಕ್ವಾಟ್ರಸ್ ಗಳಿಗೆ ಬರಲು ಮುಂದಾಗಿದ್ದಾರೆ. ಈಗ ಬಹುತೇಕ ಕ್ವಾಟ್ರಸ್ ಗಳು ಭರ್ತಿಯಾಗಿವೆ.

ಇದನ್ನು ಓದಿ: 100 ಕಾಫಿ ಮಾರುತ್ತಿದ್ದ ಹಟ್ಟಿ ಕಾಪಿ ಲಾಭಾ ಇಂದು 15 ಕೋಟಿ; ಬೆಂಗಳೂರಿನ ಫಿಲ್ಟರ್​ ಕಾಫಿಯ ಯಶಸ್ಸಿನ ಕಥೆ ಇದು

ನಗರ ಹೊರವಲಯದಲ್ಲಿರುವದರಿಂದ ಉತ್ತಮ ಹವಾಮಾನವಿರುವ ಕಾರಣಕ್ಕೆ ಪೊಲೀಸರು ಇದೇ ಕ್ವಾಟ್ರಸ್ ಗಳಿಗೆ ಬರುತ್ತೇವೆ ಎಂದು ಅರ್ಜಿ ಹಾಕುತ್ತಿದ್ದಾರೆ ಸಿಬ್ಬಂದಿಗಳು ಈ ಮಧ್ಯೆ ಇದನ್ನು ಪಿಕಿನಿಕ್ ಸ್ಪಾಟ್ ಮಾಡಲು ಮುಂದಾಗಿರುವ ಪೊಲೀಸರು ತಾವೇ ಕೆರೆಯ ಸುತ್ತಲು ಗಿಡಗಳನ್ನು ಬೆಳೆಸಲು ಮುಂದಾಗಿದ್ದಾರೆ, ಮಕ್ಕಳಿಗಾಗಿ ಮೋಜಿನ ಕ್ರೀಡಾ ಸಾಮಾಗ್ರ, ದೈಹಿಕ ಕಸರತ್ತಿಗಾಗಿ ಜಿಮ್ ಸಾಮಾಗ್ರಿಗಳನ್ನು ಹಾಕಿದ್ದಾರೆ. ಇದರ ಮಧ್ಯೆ ಈಗ ಇಲ್ಲಿ ಟೆನಿಸ್ ಕೋರ್ಟ ಸಹ ನಿರ್ಮಾಣವಾಗುತ್ತಿದೆ. ಪೊಲೀಸರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾಗಿ ಹೋಗುವುದು ಸ್ವಾಭಾವಿಕ.  ಆದರೆ ತಾವು ಇರುವ ಸ್ಥಳದಲ್ಲಿ ಶಾಶ್ವತವಾಗಿ ನೆನಪುಳಿಯುವಂತ ಕಾರ್ಯವನ್ನು ಕೊಪ್ಪಳ ಜಿಲ್ಲಾ ಪೊಲೀಸರು ಮಾಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: