• Home
  • »
  • News
  • »
  • state
  • »
  • ಲಾಕ್​ಡೌನ್​ ಸಂಕಷ್ಟ: ಹಿಂಗಾರಿನಲ್ಲಿ ಬೆಳೆದ ಭತ್ತ ಕೇಳೋರೇ ಇಲ್ಲ

ಲಾಕ್​ಡೌನ್​ ಸಂಕಷ್ಟ: ಹಿಂಗಾರಿನಲ್ಲಿ ಬೆಳೆದ ಭತ್ತ ಕೇಳೋರೇ ಇಲ್ಲ

ಭತ್ತ

ಭತ್ತ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತಈಗ ಮಾರುಕಟ್ಟೆಯಲ್ಲಿ ಭತ್ತದ ದರ ಇಳಿಕೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ಆಗ್ರಹಿಸಿದ್ದಾರೆ

  • Share this:

ಕೊಪ್ಪಳ (ಮೇ. 28): ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಲಾರಂಭಿಸಿದ್ದು, ರೈತರು ಭತ್ತ ನಾಟಿಗೆ ಮುಂದಾಗುತ್ತಿದ್ದಾರೆ. ಆದರೆ, ಜಿಲ್ಲೆಯ ರೈತರು ಮಾತ್ರ ಹಿಂಗಾರಿ ಹಂಗಾಮಿನಲ್ಲಿ ಬೆಳೆದ ಭತ್ತವನ್ನು ಮಾರಾಟ ಮಾಡಲು ಆಗದೆ  ಕಂಗಾಲಾಗಿದ್ದಾರೆ, ಮಾರುಕಟ್ಟೆಯಲ್ಲಿ ಭತ್ತದ ದರ ಪಾತಾಳಕ್ಕೆ ಇಳಿದಿದೆ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಈಗ ಬೆಂಬಲ ಬೆಲೆಗೆ ಮಾರಾಟ ಮಾಡಲು ಹೆಸರು ನೋಂದಾಯಿಸುವ ಅವಧಿ ಮುಗಿದಿದೆ‌. ಲಾಕ್ ಡೌನ್​ ಪರಿಣಾಮದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನಲೆ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಅವಧಿ ವಿಸ್ತರಿಸಲು ರೈತರು ಆಗ್ರಹಿಸಿದ್ದಾರೆ. ತುಂಗಭದ್ರಾ ಜಲಾಶಯದ ವ್ಯಾಪ್ತಿ ಎಡದಂಡೆ ನಾಲೆಯಿಂದ ಒಟ್ಟು 8.50 ಲಕ್ಷ ಎಕರೆ ಪ್ರದೇಶದಲ್ಲಿ ಉತ್ಕೃಷ್ಠ ತಳಿಯಾದ ಸೋನಾ ಮಸೂರಿ ಹಾಗು ಆರ್ ಎನ್ ಆರ್ ಎಂಬ ಭತ್ತವು ಐರೋಪ್ಯ ರಾಷ್ಟ್ರ ರಫ್ತು ಆಗುತ್ತಿದೆ. ಪ್ರತಿ ಎಕರೆ 40-45 ಚೀಲ ಭತ್ತ ಬೆಳೆಯುವ ರೈತರು ಈಗ ಬೆಳೆದ ಭತ್ತವನ್ನು ಮಾರಾಟ ಮಾಡಲು ಆಗದೆ ಪರದಾಡುತ್ತಿದ್ದಾರೆ‌.


ತುಂಗಭದ್ರಾ ಎಡದಂಡೆ ನಾಲೆಗೆ ಬೇಸಿಗೆಯಲ್ಲಿ ನೀರು ಬಿಟ್ಟಿದ್ದರಿಂದ ಕೋಟ್ಯಾಂತರ ಚೀಲ ಭತ್ತವನ್ನು ಬೆಳೆದಿದ್ದಾರೆ. ಹಿಂಗಾರಿನ ಭತ್ತ ಕಟಾವು ಮಾಡುವ ವೇಳೆ ಭತ್ತದ ದರ ಕುಸಿತ ಕಂಡಿತು. ಪ್ರತಿ ಚೀಲಕ್ಕೆ 2000 ಸಾವಿರ ರೂಪಾಯಿ ಇದ್ದ ದರ 1400-1500 ಕ್ಕೆ ಇಳಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗಬಹುದು ಎಂದುಕೊಂಡು ರೈತರು ಕಾಯಿಯುತ್ತಿದ್ದರು. ಆದರೆ, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೊರೊನಾ ಹಿನ್ನೆಲೆ ಜನತಾ ಕರ್ಪ್ಯೂ ಹಾಗೂ ಲಾಕ್ ಡೌನ್ ಮಾಡಲಾಯಿತು. ಇದರಿಂದ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ಆರಂಭವಾಗಿಲ್ಲ. ಅಷ್ಟೇ ಅಲ್ಲದೇ, ಲಾಕ್ ಡೌನ್ ಹಿನ್ನೆಲೆಯಲ್ಲಿ ಭತ್ತದ ದರವು ಇನ್ನಷ್ಟು ಕುಸಿತವಾಗಿದೆ.  ಭತ್ತವನ್ನು ಯಾರು ಕೇಳುವವರೆ ಇಲ್ಲದಂತಾಗಿದೆ. ಇದರಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲಿ ನೋಡಿದರೂ ಭತ್ತದ ರಾಶಿಯೇ ಕಾಣುತ್ತಿವೆ.


ಈ ಮಧ್ಯೆ ಚಂಡಮಾರುತದಿಂದಾಗಿ ಭತ್ತದ ರಾಶಿಯು ಮಳೆಯಿಂದಾಗಿ ತೇವಾಂಶ ಹೆಚ್ಚಾಗುತ್ತಿದೆ.  ಇದರಿಂದಾಗಿ ಭತ್ತದ ಗುಣಮಟ್ಟ ಹಾಳಾಗುತ್ತಿದೆ. ಈ ಹಿನ್ನಲೆ ಸರಕಾರ ಬೆಂಬಲ‌ ಬೆಲೆಯಲ್ಲಿ ಭತ್ತದ ಖರೀದಿಗೆ ಹೆಸರು ನೋಂದಾಯಿಸುವ ಅವಧಿ ಮುಂದುವರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.


ಇದನ್ನು ಓದಿ: ತಮ್ಮೂರಿನವರ ಸಹಾಯಕ್ಕಾಗಿ ವಿದೇಶಿ ಉದ್ಯೋಗ ತೊರೆದ ದಾವಣಗೆರೆ ವ್ಯಕ್ತಿ; ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ


ಈ ಮಧ್ಯೆ ಮಾರ್ಚ್​ 31 ರವರೆಗೂ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರೈತರಿಂದ ಹೆಸರು ನೊಂದಾಯಿಸಲು ಅವಧಿ ನೀಡಲಾಗಿತ್ತು, ಈ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 574 ಜನರು ಮಾತ್ರ ಹೆಸರು ನೊಂದಾಯಿಸಿದ್ದಾರೆ ಅದರಲ್ಲಿ 12 ಜನರು 561 ಕ್ವಿಂಟಾಲ್ ಭತ್ತ ಮಾರಾಟ ಮಾಡಿದ್ದಾರೆ, ಇನ್ನೂ ಹಿಂಗಾರಿಯಲ್ಲಿಯ ಭತ್ತವನ್ನು ಖರೀದಿಸಲು ರೈತರ ನೊಂದಾವಣೆಗೆ ಮೇ 5 ರವರೆಗೂ ಅವಕಾಶ ನೀಡಲಾಗಿತ್ತು ಆಗ ಕೇವಲ ಇಬ್ಬರು ಮಾತ್ರ ಹೆಸರು ನೊಂದಾಯಿಸಿದ್ದಾರೆ ಇದರಿಂದಾಗಿ ಸರಕಾರಕ್ಕೆ ಬೇಕಾಗುವಷ್ಟು ಭತ್ತ ಖರೀದಿಸಲಾಗಿದೆ, ಮತ್ತೆ ಖರೀದಿಸುವುದು ಕಷ್ಟ ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್.ಈ ಬಗ್ಗೆ ಪ್ರತಿಕ್ರಿಯಿಸಿ ಕೃಷಿ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ ಲಾಕ್ ಡೌನ್ ನಿಂದ ರೈತರು ಸಂಕಷ್ಟ ಅನುಭವಿಸುತ್ತಿರುವದರಿಂದ ಸರಕಾರದಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಕಾಶ ನೀಡುವಂತೆ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)

Published by:Seema R
First published: