ಪರಿಹಾರಕ್ಕಾಗಿ ಡಿಸಿಎಂ ಲಕ್ಷಣ ಸವದಿ ಕಾಲಿಗೆ ಬಿದ್ದು ಗೋಳಾಡಿದ ರೈತ

ಕುಷ್ಟಗಿ ತಾಲೂಕಿನ ಮನ್ನಾಪುರ ರೈತ ಏಕಾಏಕಿ ಸಿಎಂ ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದರು. ಹುಲಿಯಾಪುರದ ಕೆರೆಗೆ ಭೂಮಿ ಕೊಟ್ಟಿದ್ದ ರೈತರಿಗೆ ಇನ್ನು ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸಾಕಾಗಿದೆ ಎಂದು ಡಿಸಿಎಂ ಮುಂದೆ ರೈತ ಕಣ್ಣಿರಿಟ್ಟಿದ್ದಾನೆ

Seema.R | news18-kannada
Updated:November 1, 2019, 12:27 PM IST
ಪರಿಹಾರಕ್ಕಾಗಿ ಡಿಸಿಎಂ ಲಕ್ಷಣ ಸವದಿ ಕಾಲಿಗೆ ಬಿದ್ದು ಗೋಳಾಡಿದ ರೈತ
ಲಕ್ಷ್ಮಣ ಸವದಿ
  • Share this:
ಕೊಪ್ಪಳ (ನ.1): ಪರಿಹಾರ ಸಿಗದೇ ಕಂಗಾಲಾದ ರೈತರೊಬ್ಬರು ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಲಿಗೆ ಏಕಾಏಕಿ ಏರಗಿ ಗೋಳಾಡಿದ ಘಟನೆ ನಡೆದಿದೆ.

ಈ ಹಿನ್ನೆಲೆ ಕುಷ್ಟಗಿ ತಾಲೂಕಿನ ಮನ್ನಾಪುರ ರೈತ ಏಕಾಏಕಿ ಸಿಎಂ ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದರು. ಹುಲಿಯಾಪುರದ ಕೆರೆಗೆ ಭೂಮಿ ಕೊಟ್ಟಿದ್ದ ರೈತರಿಗೆ ಇನ್ನು ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸಾಕಾಗಿದೆ ಎಂದು ಡಿಸಿಎಂ ಮುಂದೆ ರೈತ ಕಣ್ಣಿರಿಟ್ಟಿದ್ದಾನೆ.

ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದರೂ, ಕೂಡ ಉಪವಿಭಾಗಧಿಕಾರಿಗಳು ವಿಳಂಬ ನೀತಿಯಿಂದಾಗಿ  ಪರಿಪಾಡಲು ಪಡುವಂತೆ ಆಗಿದೆ. ಪರಿಹಾರ ಕೇಳಲು ಹೋದರೆ, ಸಣ್ಣ ಪುಟ್ಟ ತಾಂತ್ರಿಕ ತೊಂದರೆ ಹಿಡಿದುಕೊಂಡು ಎಸಿ ಸಿ.ಡಿ.ಗೀತಾ ರೈತರಿಗೆ ಸತಾಯಿಸುತ್ತಿದ್ದಾರೆ. ಭೂಮಿ ಕಳೆದುಕೊಂಡು, ಪರಿಹಾರ ಕೂಡ ಸಿಗದೇ ನಾವು ಅತಂತ್ರರಾಗಿದ್ದೇವೆ ಎಂದು ಭೂಮಿ ಕಳೆದುಕೊಂಡ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಕಾಂಗ್ರೆಸ್​, ಕಮ್ಯೂನಿಸ್ಟರು ವ್ಯವಸ್ಥಿತವಾಗಿ ಇತಿಹಾಸವನ್ನು ತಿರುಚಿದ್ದಾರೆ; ಯತ್ನಾಳ್​​​​

ರೈತರ ಪ್ರತಿಭಟನೆ ಕಂಡು ಕಂಡು ಕಕ್ಕಾಬಿಕ್ಕಿಯಾದ ಡಿಸಿಎಂ ಬಳಿಕ, ನಿಧಾನವಾಗಿ ರೈತರ ಸಮಸ್ಯೆ ಆಗಲಿಸಿದರು. ಬಳಿಕ ತಕ್ಷಣವೇ ರೈತರಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

First published: November 1, 2019, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading