ನ್ಯೂಸ್ 18 ಕನ್ನಡ ವರದಿ ಫಲಶ್ರುತಿ | ಸರ್ಕಾರದ ಅಕ್ಕಿ ಕಾಳಸಂತೆಯಲ್ಲಿ ಮಾರುತ್ತಿದ್ದ ದಂಧೆಕೋರರು ವಶಕ್ಕೆ
ಮಾಲೀಕ ಎನ್ನಲಾದ ರಾಜಾವಲಿಯನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಿ, ವಿವರ ಬಾಯಿ ಬಿಡಿಸಲಾಯಿತು. ಜವಾಹರ ರಸ್ತೆಯಲ್ಲಿ ಕಿರಣ್ ಟ್ರೇಡರ್ಸ್ ಹೆಸರಿನ ಇನ್ನೊಂದು ಅಂಗಡಿಯ ಬೀಗ ತೆಗೆದು ನೋಡಿದಾಗ ಸುಮಾರು ಇನ್ನೂರು ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ.
news18-kannada Updated:May 12, 2020, 7:19 PM IST

ಪಡಿತರ ಅಕ್ಕಿ
- News18 Kannada
- Last Updated: May 12, 2020, 7:19 PM IST
ಕೊಪ್ಪಳ: ಸರಕಾರದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ದಂಧೆಕೋರರನ್ನು ಕೊಪ್ಪಳ ಜಿಲ್ಲಾಡಳಿತ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ಸಂಬಂಧ ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ದಂಧೆಕೋರರನ್ನು ವಶಕ್ಕೆ ಪಡೆದಿದೆ.
ಲಾಕ್ಡೌನ್ ಪರಿಹಾರವಾಗಿ ಇತ್ತೀಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡಿದೆ. ಆದರೆ, ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಸಂಬಂಧ ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ಪ್ರಕರಣದ ಜಾಡು ಹಿಡಿದು ಕಳ್ಳತನ ಪತ್ತೆ ಹಚ್ಚಲು ಕೊಪ್ಪಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಾರಾಯಣರೆಡ್ಡಿ ನೇತೃತ್ವದ ತಂಡ ದಿಢೀರ್ ದಾಳಿಗೆ ಮುಂದಾಯಿತು. ದಾಳಿಯ ಸೂಚನೆ ಅರಿತ ಅಂಗಡಿ ಮಾಲೀಕ ಬೀಗ ಹಾಕಿ ಪರಾರಿಯಾಗಿದ್ದ. ಕಿರಣ್ ಟ್ರೇಡರ್ಸ್ ಹೆಸರಿನ ಮತ್ತೊಂದು ಅಂಗಡಿ ಕೊಪ್ಪಳ ಎಪಿಎಂಸಿಯಲ್ಲಿ ಇರೋದನ್ನು ಪತ್ತೆ ಹಚ್ಚಿದ ತನಿಖಾ ತಂಡ ಅಲ್ಲಿಯೂ ದಿಢೀರನೇ ದಾಳಿ ನಡೆಸಿತು. ದಾಳಿ ವೇಳೆ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದುದನ್ನು ಅಧಿಕಾರಿಗಳ ತಂಡ ರೆಡ್ ಹ್ಯಾಂಡ್ ಆಗಿ ಹಿಡಿಯಿತು.
ಇದನ್ನು ಓದಿ: ಬಡವರ ಅನ್ನಕ್ಕೆ ಕನ್ನ ಹಾಕಿದ ಖದೀಮರು! ; ಅಧಿಕಾರಿಗಳ ಪಾಲುದಾರಿಕೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ?
ಮಾಲೀಕ ಎನ್ನಲಾದ ರಾಜಾವಲಿಯನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಿ, ವಿವರ ಬಾಯಿ ಬಿಡಿಸಲಾಯಿತು. ಜವಾಹರ ರಸ್ತೆಯಲ್ಲಿ ಕಿರಣ್ ಟ್ರೇಡರ್ಸ್ ಹೆಸರಿನ ಇನ್ನೊಂದು ಅಂಗಡಿಯ ಬೀಗ ತೆಗೆದು ನೋಡಿದಾಗ ಸುಮಾರು ಇನ್ನೂರು ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ. ಅದು ಸರಕಾರದ ಪಡಿತರವೊ? ಅಥವಾ ರೈತರಿಂದ ಖರೀದಿಸಿದ ಅಕ್ಕಿಯೊ? ಎಂಬ ವಿಷಯ ಕುರಿತು ಲೆಕ್ಕ ಪತ್ರ ಪರಿಶೀಲನೆ ನಡೆದಿದೆ.
ವರದಿ : ಬಸವರಾಜ ಕರುಗಲ್
ಲಾಕ್ಡೌನ್ ಪರಿಹಾರವಾಗಿ ಇತ್ತೀಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡಿದೆ. ಆದರೆ, ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಸಂಬಂಧ ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು.