Sushma Swaraj Fan: ಮಗಳಿಗೆ ಸುಷ್ಮಾ ಸ್ವರಾಜ್ ಹೆಸರಿಡಲು ಮುಂದಾದ ಅಭಿಮಾನಿ; ರೆಡ್ಡಿ, ರಾಮುಲು ಬರೋವರೆಗೂ ನಾಮಕರಣ ಮಾಡಲ್ವಂತೆ!

ಸುಷ್ಮಾ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರೇ ಬಂದು ನಾಮಕಾರಣ ಮಾಡಬೇಕು. ಅವರು ಬರೋವರೆಗೂ ಮಗಳಿಗೆ ನಾಮಕಾರಣ ಮಾಡಲ್ಲ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸುಷ್ಮಾ ಸ್ವರಾಜ್ ಅಭಿಮಾನಿ ಆಗಿರೋ ದೇವರಾಜ್​ ಹೇಳ್ತಿದ್ದಾರೆ.

ಮಗಳಿಗೆ ಸುಷ್ಮಾ ಸ್ವರಾಜ್​ ಹೆಸರಿಡಲು ಮುಂದಾದ ಅಭಿಮಾನಿ

ಮಗಳಿಗೆ ಸುಷ್ಮಾ ಸ್ವರಾಜ್​ ಹೆಸರಿಡಲು ಮುಂದಾದ ಅಭಿಮಾನಿ

  • Share this:
ಕೊಪ್ಪಳ (ಆ.06): ಬಿಜೆಪಿ ಕಾರ್ಯಕರ್ತ  (BJP Activist) ದೇವರಾಜ್ ಎಂಬುವರು ತನ್ನ ಮಗಳಿಗೆ ದಿವಂಗತೆ ಸುಷ್ಮಾ ಸ್ವರಾಜ್ (Sushma Swaraj) ಹೆಸರಿಡಲು ಮುಂದಾಗಿದ್ದಾರೆ. ಕೊಪ್ಪಳ (Koppala) ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿ  ದೇವರಾಜ್ ದಂಪತಿಗೆ ಕಳೆದ ಕೆಲ ದಿನಗಳ ಹಿಂದಷ್ಟೆ ಹೆಣ್ಣು ಮಗು ಜನಸಿದೆ. ದೇವರಾಜ್ (Devaraj)​ ಸುಷ್ಮಾ ಸ್ವರಾಜ್​ ಅವ್ರ ಅಪ್ಪಟ ಅಭಿಮಾನಿ ಹೀಗಾಗಿ ಅವರ ಹೆಸರನ್ನೇ ತನ್ನ ಮಗಳಿಗಿಡಲು ನಿರ್ಧಾರ ಮಾಡಿದ್ದಾರೆ. ಆದ್ರೆ ಮಗಳಿಗೆ ನಾಮಕರಣ ಮಾಡಲು ಜನಾರ್ದನ ರೆಡ್ಡಿ (Janardhana Reddy) ಹಾಗೂ ಸಚಿವ ಶ್ರೀರಾಮುಲು (Sriramulu) ಅವರೇ ಬರಬೇಕೆಂದು ಬಿಜೆಪಿ ಕಾರ್ಯಕರ್ತ ದೇವರಾಜ್​ ಪಟ್ಟು ಹಿಡಿದಿದ್ದಾರೆ.  

ರೆಡ್ಡಿ, ರಾಮುಲು ನಾಮಕರಣಕ್ಕೆ ಬರಬೇಕು

ಸುಷ್ಮಾ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರೇ ಬಂದು ನಾಮಕಾರಣ ಮಾಡಬೇಕು. ಅವರು ಬರೋವರೆಗೂ ಮಗಳಿಗೆ ನಾಮಕಾರಣ ಮಾಡಲ್ಲ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸುಷ್ಮಾ ಸ್ವರಾಜ್ ಅಭಿಮಾನಿ ಆಗಿರೋ ದೇವರಾಜ್​ ಹೇಳ್ತಿದ್ದಾರೆ. ಅಷ್ಟೆ ಅಲ್ಲದೆ ರೆಡ್ಡಿ, ರಾಮುಲು ಆಪ್ತ ಸಹಾಯಕರಿಗೂ ಈ ವಿಚಾರ ತಿಳಿಸಲಾಗಿರೋದಾಗಿಯೂ ದೇವರಾಜ್ ಹೇಳಿದ್ದಾರೆ.

ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್

ದೇಶಕ್ಕೆ ದಿವಂಗತ ಸುಷ್ಮಾ ಸ್ವರಾಜ್ ಅವ್ರ ಕೊಡುಗೆ ಅಪಾರವಾಗಿದೆ. ಜನ ಮೆಚ್ಚಿದ ನಾಯಕಿಯಾಗಿದ್ರು ಸುಷ್ಮಾ ಸ್ವರಾಜ್​, ತನ್ನ ಕೆಲಸ ಮೂಲಕ ಬಡವರ್ಗದ ಜನರ ಪ್ರೀತಿಗೂ ಪಾತ್ರರಾಗಿದ್ರು. ಯೆಮೆನ್ ಸರ್ಕಾರ ಮತ್ತು ಬಂಡುಕೋರರ ನಡುವೆ ಯುದ್ಧ ಪ್ರಾರಂಭವಾದಾಗ ಭಾರತದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಇದ್ದರು. ಇವರು ಕೂಡಲೇ ಕಾರ್ಯಪ್ರವೃತ್ತರಾಗಿ ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ 4640 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ 48 ದೇಶಗಳ ಎರಡು ಸಾವಿರ ನಾಗರಿಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದರು, ಅವರನ್ನು ಕೂಡ ಭಾರತೀಯ ವಾಯುಪಡೆಯ ಸಹಾಯದಿಂದ ಏರ್ ಲಿಫ್ಟ್ ಮಾಡಲಾಯಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾಡಿದ ರಕ್ಷಣಾ ಕಾರ್ಯಾಚರಣೆಯನ್ನು ವಿಶ್ವದಾದ್ಯಂತ ಸ್ಮರಿಸಲಾಗುತ್ತಿದೆ.

ಇದನ್ನೂ ಓದಿ: DK Shivakumar: ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನಲ್ಲೇ ಪ್ಲಾನ್! ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಡಿಕೆಶಿ?

ಜನಮೆಚ್ಚುಗೆಗೆ ಪಾತ್ರರಾಗಿದ್ದರು ಸುಷ್ಮಾ ಸ್ವರಾಜ್​

ಮುಂಬೈ ನಿವಾಸಿ ಹಮೀದ್ ಅನ್ಸಾರಿ ಎಂಬಾತ ಆನ್​​ಲೈನ್ ಸ್ನೇಹಿತೆಯನ್ನು ಭೇಟಿ ಮಾಡಲು 2012 ರಲ್ಲಿ ಅಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ಹೋಗಿ ಬಂಧನಕ್ಕೆ ಒಳಗಾಗಿದ್ದನು. ಬಂಧನದಿಂದ ಬಿಡುಗಡೆ ಮಾಡಲು ಕುಟುಂಬಸ್ಥರು ಪ್ರಯತ್ನ  ನಡೆಸಿದರೂ ಸಾಧ್ಯವಾಗಿಲ್ಲ. ಕೊನೆಯದಾಗಿ ಆತನ ತಾಯಿ ಮೇರ ಮೇಡಂ ಮಹಾನ್ ಎಂದು ಕರೆದು ಸುಷ್ಮಾ ಸ್ವರಾಜ್ ಬಳಿ ಹೋಗಿ ವಿಷಯವನ್ನು ಗಮನಕ್ಕೆ ತಂದರು. ಅದರಂತೆ ಸುಷ್ಮಾ ಸ್ವರಾಜ್ ಕಾರ್ಯ ಪ್ರವೃತ್ತರಾದರು. ಪರಿಣಾಮವಾಗಿ ಅನ್ಸಾರಿ ಬಂಧಮುಕ್ತನಾದನು. ಹೀಗೆ ಅನೇಕ ರೀತಿಯ ಜನಸ್ಪಂದನಾ ಕಾರ್ಯಗಳನ್ನು ನೀಡಿ ಸುಷ್ಮಾ ಸ್ವರಾಜ್​ ಜನಮೆಚ್ಚುಗೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ: Srirangapatna: ಶ್ರೀರಂಗಪಟ್ಟಣ ಮಸೀದಿ ವಿವಾದಕ್ಕೆ ಮತ್ತೆ ಜೀವ, ಮುಸ್ಲಿಮರಿಂದ ನಾಳೆ ಬೃಹತ್ ಜಾಥಾ

ಮೊಮ್ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ

ಈ ಹಿಂದೆ ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯ ನಿವಾಸಿ ಸಿದ್ಧಾರಡ್ಡಿ ದುರ್ಗದ ಅವರು, ತಮ್ಮ ಮೊಮ್ಮಗನಿಗೆ 'ನರೇಂದ್ರ ಮೋದಿ' ಎಂಬ ಹೆಸರು ನಾಮಕರಣ ಮಾಡುವ ಮೂಲಕ ಗಮನಸೆಳೆದಿದ್ದರು. ಅವರ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊಮ್ಮಗನ ಜನ್ಮನಾಮ 'ನ' ಅಕ್ಷರದಿಂದ ಆರಂಭಗೊಂಡಿದೆ ಎಂದು ಶಾಸ್ತ್ರಿಗಳು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಯಾಗಿರುವ ಸಿದ್ಧಾರಡ್ಡಿ ದುರ್ಗದ ಅವರು, ತಮ್ಮ ಮೊಮ್ಮಗನಿಗೆ 'ನರೇಂದ್ರ ಮೋದಿ' ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ಮಗಳು ರಕ್ಷಿತಾ ಹಾಗೂ ಅಳಿಯ ಕೃಷ್ಣಾರಡ್ಡಿ ಕೂಡ ಸಹತಮ ವ್ಯಕ್ತಪಡಿಸಿದ್ದರು
Published by:Pavana HS
First published: