ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆ ಒದಗಿಸಲು ಕೊಪ್ಪಳ ಒನ್ ಆಪ್ ಆರಂಭಿಸಿದ ಯುವಕ

ವಿಶೇಷವೆಂದರೆ ಹಣ್ಣು ತರಕಾರಿಯಿಂದ ಹಿಡಿದು ರೈತರ ಇನ್ನಿತರೆ ಉತ್ಪನ್ನಗಳು ಹಾಗೂ ಗ್ರಾಹಕರಿಗೆ ಬೇಕಾದ ಸುಮಾರು 60 ಕ್ಕೂ ಹೆಚ್ಚು ವಸ್ತುಗಳನ್ನು ತನ್ನ ಕೊಪ್ಪಳ ಒನ್ ತಾಣದಲ್ಲಿ ಅಳವಡಿಸಿದ್ದಾನೆ. ಈಗ ಕೊರೊನಾ ಹರಡುತ್ತಿರುವ ಸಂದರ್ಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿದೆ.

ಯುವಕ

ಯುವಕ

  • Share this:
ಕೊಪ್ಪಳ(ಮೇ 17): ಕೊರೋನಾ ಕರ್ಫ್ಯೂ ಲಾಕ್​ಡೌನ್   ಇದ್ದರೂ ಸಹ ಮಾರುಕಟ್ಟೆಗಳಲ್ಲಿ ಜನರು ವಸ್ತುಗಳ ಖರೀದಿಗೆ ಮುಗಿಬೀಳುತ್ತಿರುವ ದೃಶ್ಯವೀಗ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇನ್ನೂ ಕೆಲವರಿಗೆ ಮಾರುಕಟ್ಟೆಯಲ್ಲಿ ನಿಂತು ಜನರ ಮಧ್ಯೆ ಖರೀದಿ ಮಾಡಲು ಹಿಂಜರಿಕೆ, ಭಯ, ಇವುಗಳ ಮಧ್ಯೆ ಪೊಲೀಸರೊಂದಿಗೆ ಕಿರಿಕಿರಿ ಅನುಭವಿಸಬೇಕು. ಈ ಎಲ್ಲಾವನ್ನು ತಪ್ಪಿಸುವ ಉದ್ದೇಶದಿಂದ ಸ್ಥಳೀಯ ಡಿಜಿಟಲ್ ಮಾರುಕಟ್ಟೆಯ ಮೂಲಕ ಜನರು ವಸ್ತುಗಳನ್ನು ಖರೀದಿಸಲು ಅನುಕೂಲವಾಗುವಂತೆ ಕೊಪ್ಪಳದಲ್ಲೊಬ್ಬ ಯುವಕ ಕೊಪ್ಪಳ ಒನ್ ಎಂಬ ವೆಬ್‍ಸೈಟ್ ಆರಂಭಿಸಿದ್ದಾನೆ.

ಹಾಲು, ಹಣ್ಣು, ತರಕಾರಿ ಸೇರಿದಂತೆ ಅನೇಕ ವಸ್ತುಗಳನ್ನು ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡಿದ್ದಾನೆ. ಜನರು ತಮಗೆ ಬೇಕಾದ ವಿವಿಧ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಮಾರ್ಕೆಟ್‍ಗೆ ಹೋಗಿ ವಸ್ತುಗಳನ್ನು ಖರೀದಿಸುವ ತಾಪತ್ರಯವನ್ನು ಈಗ ಡಿಜಿಟಲ್ ಮಾರುಕಟ್ಟೆ ಅನುಕೂಲವಾಗಿದೆ. ದೊಡ್ಡ ದೊಡ್ಡ ಡಿಜಿಟಲ್ ಮಾರುಕಟ್ಟೆಯಂತೆಯೇ ಜನರಿಗೆ ಅನುಕೂಲವಾಗುವ ಹಾಗೂ ಎಲ್ಲ ವಸ್ತುಗಳು ಲಭ್ಯವಾಗುವ ರೀತಿಯಲ್ಲಿ ಕೊಪ್ಪಳದ ಶಿವಬಸವನಗೌಡ ಪಾಟೀಲ್ ಎಂಬ ಯುವಕ ಕೊಪ್ಪಳ ಒನ್ ಎಂಬ ಸ್ಥಳೀಯ ಡಿಜಿಟಲ್ ಮಾರುಕಟ್ಟೆ ತಾಣ ಪ್ರಾರಂಭಿಸಿ ಗಮನ ಸೆಳೆದಿದ್ದಾನೆ.

ವಿಶೇಷವೆಂದರೆ ಹಣ್ಣು ತರಕಾರಿಯಿಂದ ಹಿಡಿದು ರೈತರ ಇನ್ನಿತರೆ ಉತ್ಪನ್ನಗಳು ಹಾಗೂ ಗ್ರಾಹಕರಿಗೆ ಬೇಕಾದ ಸುಮಾರು 60 ಕ್ಕೂ ಹೆಚ್ಚು ವಸ್ತುಗಳನ್ನು ತನ್ನ ಕೊಪ್ಪಳ ಒನ್ ತಾಣದಲ್ಲಿ ನಲ್ಲಿ ಅಳವಡಿಸಿದ್ದಾನೆ. ಈಗ ಕೊರೊನಾ ಹರಡುತ್ತಿರುವ ಸಂದರ್ಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿದೆ. ಹೀಗಾಗಿ ಈ ಕೊಪ್ಪಳ ಒನ್ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ.

ಭಾರತದಲ್ಲಿ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ನೆರವಾಗಲು ಖಲ್ಸಾ ಏಡ್‌ ಸಂಸ್ಥೆಗೆ ಹ್ಯಾರಿ ಪಾಟರ್ ಸೃಷ್ಟಿಕರ್ತೆ ದೇಣಿಗೆ

ಕೊಪ್ಪಳ ಒನ್‍ನಲ್ಲಿ ಹಣ್ಣು, ತರಕಾರಿ, ಹಾಲು, ಮೊಸರು, ದಿನಸಿ, ಸ್ಪೈಸಸ್, ಚಾಕೋಲೇಟ್, ರೈತರ ಇನ್ನಿತರೆ ಉತ್ಪೊನ್ನಗಳು, ಅಲ್ಲದೆ ಬೇರೆ ಬೇರೆ ವಸ್ತುಗಳನ್ನು ಸಹ ಅಳವಡಿಸಲಾಗಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಖರೀದಿಯ ದರದಲ್ಲಿಯೇ ಗ್ರಾಹಕರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಇದರಿಂದಾಗಿ ರೈತರಿಗೂ ಒಂದಿಷ್ಟು ಆದಾಯ ಬರುತ್ತದೆ. ಗ್ರಾಹಕರು ಇಷ್ಟೆ ಖರೀದಿಸಬೇಕು ಎಂದೇನೂ ಇಲ್ಲ. ಅರ್ಧ ಕೆಜಿ ತರಕಾರಿ ಕೇಳಿದರೂ ಸಹ ಅದನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕೊಪ್ಪಳ ಒನ್ ಆರಂಭಿಸಿರುವುದಾಗಿ ಯುವಕ ಶಿವಬಸವನಗೌಡ ಪಾಟೀಲ್ ಹೇಳಿದ್ದಾರೆ.

ಈಗ ಕೊರೋನಾ ಸಂದರ್ಭವಾಗಿರುವುದರಿಂದ ಜನರು ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಬಾರದು. ಇದಕ್ಕಾಗಿ ಡಿಜಿಟಲ್ ಮಾರುಕಟ್ಟೆಯ ಮೂಲಕ ಜನರು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಸ್ಥಳೀಯವಾಗಿರುವ ಕೊಪ್ಪಳ ಒನ್ ನಲ್ಲಿಯೂ  ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಅವರೊಂದಿಗೆ ಈಗಾಗಲೇ ಮಾತನಾಡಲಾಗಿದೆ. ಗ್ರಾಹಕರಿಗೆ ಎಷ್ಟು ಹಣ್ಣು ಬೇಕೋ ಅಷ್ಟನ್ನು ಕೊಪ್ಪಳ ಒನ್‍ನವರು ತಂದು ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ಒಳ್ಳೆಯ ಪ್ರಯತ್ನ ಎನ್ನುತ್ತಾರೆ ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ.

ಈಗಾಗಲೇ ನೂರಕ್ಕೂ ಅಧಿಕ ಹಣ್ಣು ಬೆಳೆಗಾರರು ಶಿವಬಸನಗೌಡರ ಆಪ್ ಬಳಿಸಿಕೊಂಡು ಮಾರಾಟ, ಖರೀದಿ ಮಾಡಿದ್ದಾರೆ. ಈಗ ಕೊಪ್ಪಳದಲ್ಲಿಯೂ ಸ್ಥಳೀಯವಾಗಿ ಡಿಜಿಟಲ್ ಮಾರುಕಟ್ಟೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
Published by:Latha CG
First published: