ಮರಳು-ತಿರುಳು ಭಾಗ-4: ಮರಳು ಅಕ್ರಮಕ್ಕೆ ಬಲಿಯಾದ ಜೀವಗಳೆಷ್ಟೋ?

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ, ಸಚಿವರಾದ ತಕ್ಷಣ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಅಕ್ರಮಕ್ಕೆ ಬ್ರೇಕ್ ಹಾಕುತ್ತೇನೆ. ತಿಂಗಳಿಗೊಮ್ಮೆ ಜಿಲ್ಲೆಗೆ ಬಂದು ಇಲಾಖೆಯ ಪ್ರಗತಿ ಪರಿಶೀಲಿಸುತ್ತೇನೆ. ಜನಸಾಮಾನ್ಯರ ಕಷ್ಟಗಳಿಗೆ ನೆರವಾಗುತ್ತೇನೆ ಎಂದು ಕಾಗದದ ಹುಲಿಯಾದರೆ ಹೊರತು ಆನಂತರ ಜಿಲ್ಲೆಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊಪ್ಪಳ(ಜು.31): ಕಳೆದ ಮಾರ್ಚ್​​ನಿಂದ ಬಹುತೇಕ ಮೇ ಅಂತ್ಯದವರೆಗೆ ಕೋವಿಡ್-19 ಭೀತಿಯ ತೀವ್ರತೆ ಇತ್ತು. ಈಗ ತಕ್ಕಮಟ್ಟಿಗೆ ಜಾಗೃತಿ ಬಂದಿದೆ. ಬಹುತೇಕ ವ್ಯಾಪಾರ ವಹಿವಾಟುಗಳು ಆರಂಭಗೊಂಡಿದ್ದು, ಸರಾಗವಾಗಿ, ಕೊರೋನಾ ಮುನ್ನೆಚ್ಚರಿಕೆ ಸಹಿತ ನಡೆಯುತ್ತಿವೆ. ಆದರೆ ಮರಳು ಮಾರಾಟ, ಸಾಗಾಣಿಕೆಗೆ ಮಾತ್ರ ಅಧಿಕೃತ ಮುದ್ರೆ ಬಿದ್ದಿಲ್ಲ.

ಈಗಾಗಲೇ ಮರಳಿನ ಅಕ್ರಮ, ಫಿಲ್ಟರ್ ಸ್ಯಾಂಡ್ ಮಾಫಿಯಾ, ಗ್ರಾಮೀಣ ಭಾಗಗಳಲ್ಲಿ ನಿತ್ಯ ನಡೆಯುವ ಕತ್ತಲರಾತ್ರಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಈಗೇನಿದ್ದರೂ ಅಧಿಕಾರಿಗಳು ಕಣ್ತೆರೆಯಬೇಕಿದೆ. ಕತ್ತಲಲ್ಲಿ ಬಿದ್ದವರ ಬದುಕಿಗೆ ಬೆಳಕು ನೀಡುವ ಕೆಲಸ ಮಾಡಬೇಕಿದೆ.

ಮರಳಿನ ಉದ್ಯಮ ಜಿಲ್ಲೆಯಲ್ಲಿ ದೊಡ್ಡ ವ್ಯಾಪಾರಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಮೊದಲು ಕದ್ದುಮುಚ್ಚಿ ಅಕ್ರಮಗಳು ನಡೆಯುತ್ತಿದ್ದವು. ಈಗ ಎಲ್ಲವೂ ರಾಜಾರೋಷವಾಗಿ ಖುಲ್ಲಂಖುಲ್ಲಾ ಆಗಿಯೇ ನಡೆಯುತ್ತಿವೆ. ಪೊಲೀಸರೆದುರಿಗೆ ಉಸುಕಿನ ಟ್ರ್ಯಾಕ್ಟರ್, ಟಿಪ್ಪರ್, ಲಾರಿಗಳು ಹೋಗುತ್ತವೆ. ಪೊಲೀಸರು ಕೈ ಅಡ್ಡ ಬೀಸಿದರೆ ರಸೀದಿ ಇಲ್ಲದೇ ಇನ್ನುರೋ, ಐನುರೋ ಕೊಟ್ಟರೆ ಸಾಕು ಸಹಸ್ರಾರು ರೂಪಾಯಿಗೆ ಮರಳನ್ನು ಅಕ್ರಮವಾಗಿ ಮಾರಾಟ ಮಾಡಿ ಖದೀಮರು ಬಂಗಲೆಗಳನ್ನು ಕಟ್ಟಿಸುತ್ತಾರೆ, ಕಟ್ಟಿಸಿಕೊಂಡಿದ್ದಾರೆ ಸಹ.

ಜೀವಗಳೇ ಬಲಿಯಾದವು?

ಈಚೆಗಷ್ಟೇ ದುಡಿಮೆ ಅರಸಿ ಬೇರೆ ರಾಜ್ಯದಿಂದ ಕಾರಟಗಿಗೆ ವಲಸೆ ಬಂದಿದ್ದ ಕುಟುಂಬವೊಂದು ಕಾರಟಗಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳಿನ ಗುಡ್ಡೆ ಕಾಯುವ ಕೆಲಸ ಮಾಡುತ್ತಿತ್ತು. ಪುಟ್ಟ ಪುಟ್ಟ ಮಕ್ಕಳನ್ನು ಹೊಂದಿದ್ದ ಆ ಕುಟುಂಬ ಮಕ್ಕಳನ್ನು ಹೊರಗಡೆ ಆಡಲು ಬಿಟ್ಟು, ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ ಮಕ್ಕಳು ಆಟವಾಡುತ್ತಿದ್ದಾಗ ಮರಳಿನ ದಿಣಣೆ ಕುಸಿದು ಮೂವರು ಕಂದಮ್ಮಗಳು ಪ್ರಾಣವನ್ನೇ ಕಳೆದುಕೊಂಡಿದ್ದವು.

ದಕ್ಷಿಣ ಚೀನಾ ಸಮುದ್ರಲ್ಲಿ ಡ್ಯ್ರಾಗನ್ ರಾಷ್ಟ್ರ ಹಕ್ಕು ಸ್ಥಾಪನೆ; ಅಮೆರಿಕ ನಂತರ ವಿಶ್ವಸಂಸ್ಥೆಯಲ್ಲಿ ಆಸ್ಟ್ರೇಲಿಯಾ ತಕರಾರು

ಕೊಳೂರಿನ ಬಳಿಯೂ ಸಹ ಕೆಲ ವರ್ಷಗಳ ಹಿಂದೆ ಟ್ರ್ಯಾಕ್ಟರ್​​ನಲ್ಲಿ ಮರಳು ತುಂಬುವಾಗ ಪೊಲೀಸ್ ವಾಹನದ ಸದ್ದು ಕೇಳಿಸಿತೆಂದು, ಅವಸರವಾಗಿ ಓಡಿ ಬರುವಾಗ ಮರಳಿನ ದಿಣ್ಣೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಮರಳಿನ ಅಕ್ರಮಕ್ಕೆ ಜಿಲ್ಲೆಯಲ್ಲಿ ಆಗಿರುವ ಬಲಿ ಒಂದೆರಡಲ್ಲ.

ಹೊಸ ಮರಳು ನೀತಿ:

ಈಗ ರಾಜ್ಯ ಸರಕಾರ ಹೊಸ ಮರಳು ನೀತಿ -2020 ಜಾರಿಗೆ ತಂದಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ದೊರಕಬೇಕು ಎಂದು ಕಾಳಜಿ ತೋರಿಸಿದೆ. ಆದರೆ ಈ ಕಾಳಜಿ ಇನ್ನೂ ಕಾಗದದಲ್ಲಿ ಉಳಿದಿದೆಯೇ ಹೊರತು ಜಿಲ್ಲೆಯಮಟ್ಟಿಗೆ ಕಾರ್ಯರೂಪಕ್ಕೆ ಬಂದಿಲ್ಲ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ, ಸಚಿವರಾದ ತಕ್ಷಣ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಅಕ್ರಮಕ್ಕೆ ಬ್ರೇಕ್ ಹಾಕುತ್ತೇನೆ. ತಿಂಗಳಿಗೊಮ್ಮೆ ಜಿಲ್ಲೆಗೆ ಬಂದು ಇಲಾಖೆಯ ಪ್ರಗತಿ ಪರಿಶೀಲಿಸುತ್ತೇನೆ. ಜನಸಾಮಾನ್ಯರ ಕಷ್ಟಗಳಿಗೆ ನೆರವಾಗುತ್ತೇನೆ ಎಂದು ಕಾಗದದ ಹುಲಿಯಾದರೆ ಹೊರತು ಆನಂತರ ಜಿಲ್ಲೆಗೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ.

ಜಿಲ್ಲೆಯಲ್ಲಿ ಮರಳಿನ ಅಕ್ರಮದ ಬಗ್ಗೆ ಕೇಳಿದ್ದೇನೆ. ಅಂಥ ಮಾಹಿತಿ ಇದ್ದರೆ ಕೊಡಿ. ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಶೀಘ್ರದಲ್ಲೇ ಈ ಕುರಿತು ಸಭೆ ನಡೆಸಿ, ಪಾಯಿಂಟ್ಗಳ ಸ್ಥಿತಿ-ಗತಿ ಆರಿತುಕೊಂಡು ಮರಳಿನ ಕ್ರಮಬದ್ಧ ಸಾಗಣೆಗೆ ಅವಕಾಶ ಕಲ್ಪಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

ಮರಳಿಗೆ ಸಂಬಂಧಿಸಿದಂತೆ ಅಕ್ರಮ ನಡೆಯುತ್ತಿರುವುದು ಸತ್ಯ. ಹತೋಟಿಗೆ ತರಬೇಕೆಂದರೆ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಯ ಕೊರತೆ ಇದೆ. ಹಾಗಾಗಿಯೇ ಹೊಸ ಮರಳು ನೀತಿ ಜಾರಿಗೆ ತಂದಿದ್ದೇವೆ. ಈ ನೀತಿಯನ್ವಯ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 350 ರೂ.ಗೆ ಟನ್ ಮರಳು ದೊರಕಲಿದೆ. ಕೊಪ್ಪಳಕ್ಕೆ ಪ್ರತಿ ತಿಂಗಳು ಬರುವುದಾಗಿ ಹೇಳಿದ್ದೆ. ಕೊರೋನಾ ಕಾರಣದಿಂದ ಬರಲಾಗಿಲ್ಲ. ಶೀಘ್ರದಲ್ಲೇ ಕೊರೋನಾ ನಿಯಂತ್ರಣವಾಗಲಿದ್ದು, ಆನಂತರ ಜಿಲ್ಲಾವಾರು ಸಭೆ ನಡೆಸುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳೀದ್ದಾರೆ.
Published by:Latha CG
First published: