Teacher: ಸಂಜೆ ಕ್ಲಾಸ್ ನೆಪದಲ್ಲಿ ಅಂಗಾಂಗ ಮುಟ್ಟಿ ಪಾಠ; ಮಹಿಳೆಯರ ಜೊತೆಯಲ್ಲಿರೋ ಖಾಸಗಿ ವಿಡಿಯೋ ವೈರಲ್

ಈ ವಿಡಿಯೋಗಳು ವೈ ರಲ್ ಆಗ್ತಿದ್ದಂತೆ ಮಹಮ್ಮದ್ ಅಜರುದ್ಧೀನ್ ನಾಪತ್ತೆಯಾಗಿದ್ದಾನೆ. ಕಳೆದ ಮೂರು ದಿನಗಳಿಂದಲೂ ಬಾಡಿಗೆ ಮನೆಗೂ ಆಗಮಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿರುವ ಶಿಕ್ಷಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಅಮಾನತುಗೊಂಡಿರುವ ಶಿಕ್ಷಕ

ಅಮಾನತುಗೊಂಡಿರುವ ಶಿಕ್ಷಕ

  • Share this:
ಶಾಲಾ ಮಕ್ಕಳೊಂದಿಗೆ (School Children) ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಶಿಕ್ಷಕನನ್ನು (Teacher) ರಾಯಚೂರು ಡಿಡಿಪಿಐ (Raichur DDPI) ಅಮಾನತು (Suspend)ಮಾಡಿ ಆದೇಶ ಹೊರಡಿಸಿದ್ದಾರೆ. ಮಹಮ್ಮದ್ ಅಜರುದ್ದೀನ್ ಅಮಾನತುಗೊಂಡಿರುವ ಶಿಕ್ಷಕ. ಮಹಮ್ಮದ್ ಅಜರುದ್ಧೀನ್ ಸಿಂಧನೂರು (Sindhanuru) ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿಕೊಂಡು, ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, Koppal) ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಸಂಜೆ ಕ್ಲಾಸ್ ನೆಪದಲ್ಲಿ ಮಕ್ಕಳ ಅಂಗಾಂಗ ಮುಟ್ಟಿ ಶಿಕ್ಷಕ ಅಜರುದ್ದೀನ್ ಪಾಠ ಮಾಡುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನು ಮಹಮ್ಮದ್ ಅಜರುದ್ಧೀನ್ ಇಬ್ಬರು ಮಹಿಳೆಯರ ಜೊತೆಯಲ್ಲಿರುವ ಖಾಸಗಿ ವಿಡಿಯೋಗಳು ವೈರಲ್ ಆಗಿದ್ದವು. ಇದರ ಜೊತೆಗೆ ಮಕ್ಕಳ ಅಂಗಗಳನ್ನು ಮುಟ್ಟಿ ವಿಕೃತಿ ಮೆರೆದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿತ್ತು.

ಈ ವಿಡಿಯೋಗಳು ವೈ ರಲ್ ಆಗ್ತಿದ್ದಂತೆ ಮಹಮ್ಮದ್ ಅಜರುದ್ಧೀನ್ ನಾಪತ್ತೆಯಾಗಿದ್ದಾನೆ. ಕಳೆದ ಮೂರು ದಿನಗಳಿಂದಲೂ ಬಾಡಿಗೆ ಮನೆಗೂ ಆಗಮಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿರುವ ಶಿಕ್ಷಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಇದನ್ನೂ ಓದಿ:  Death: ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ; ಕೂದಲು ಉದುರುವ ಸಮಸ್ಯೆ, ಯುವತಿ ಆತ್ಮಹತ್ಯೆ

ಶಿಕ್ಷಕನ ವಿರುದ್ಧ ದೂರು ದಾಖಲು

ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಸಂತ್ರಸ್ತೆ ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕ ನಮ್ಮ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದು, ನನಗೆ ಸರಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿದ್ದನು. ಅದೇ ಮಗಳಿಗೆ ಪಾಠ ಹೇಳುತ್ತೇನೆ ಅಂತ ನಂಬಿಸಿದ್ದನು. ಮಗಳಿಗೆ ಪಾಠ ಹೇಳಿ ಕೊಡುವ ನೆಪದಲ್ಲಿ ಮನವೊಲಿಸಿ ನನ್ನ ಸಂಭೋಗ ಮಾಡಿದ್ದಾನೆ.

ನಂತರ ಈ ವಿಡಿಯೋವನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿ ಮಾನಸಿಕ ಹಿಂದೆ ನೀಡಿರುತ್ತಾನೆ. ಆತನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಕೊಲೆ ಮಾಡೋದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾಲೆಯ ಮುಖ್ಯ ಗುರುಗಳಿಂದ ಸ್ಫೋಟಕ ಮಾಹಿತಿ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಮ್ಮದ್ ಅಜರುದ್ಧೀನ್ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ನ್ಯೂಸ್ 18 ಜೊತೆ ಮಾತನಾಡಿದ್ದಾರೆ. ಶಿಕ್ಷಕ‌ ಅಜರುದ್ದೀನ್ ಹಿಂದೆ ಮುಸ್ಲಿಂ ಸಮುದಾಯ ಆತನ ಜೊತೆಯಲ್ಲಿದೆ. ಅಜರುದ್ದೀನ್ ಅಮಾನತು ಎಂದಾಕ್ಷಣ ಶಾಲೆಗೆ ಬಂದು ಮುಸ್ಲಿಂ ಯುವಕರು ಮುತ್ತಿಗೆ ಹಾಕಿದ್ದರು. ಗ್ರಾಮದಲ್ಲಿ ಸುಮಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ ಎಂಬ ಮಾಹಿತಿಯನ್ನು ಶಿಕ್ಷಕ ಶರಣಪ್ಪ ಹೇಳುತ್ತಾರೆ.

ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕ ಸಸ್ಪೆಂಡ್

ಶಾಲೆಗೆ ಬರುವ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಅದರಲ್ಲಿಯೂ ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ಪೋಷಕರು ಅತ್ಯಂತ ಗೌರವದಿಂದ ಕಾಣುತ್ತಾರೆ. ಕೊರೊನಾ ಬಂದ ಬಳಿಕ ಶಾಲೆಗಳಲ್ಲಿ ಆನ್ ಲೈನ್ ಪಾಠಗಳು ಆರಂಭಗೊಂಡಿವೆ. ಇನ್ನೂ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಪೋಷಕರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ:  Government School: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ

ಮಹಿಳೆಯರಿಗೆ ಅಶ್ಲೀಲ ಮೆಸೇಜ್ 

ಶಾಲೆಗಳು ಎಲ್ಲ ಮಕ್ಕಳ ಪೋಷಕರ ನಂಬರ್ ಪಡೆದು ವಾಟ್ಸಪ್ ಗ್ರೂಪ್ ರಚನೆ ಮಾಡಿ, ಪಾಠ, ಹೋಮ್ ವರ್ಕ್ ಸೇರಿದಂತೆ ಇತ್ಯಾದಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಇದನ್ನೇ ದುರುಪಯೋಗ ಮಾಡಿಕೊಂಡ ಶಿಕ್ಷಕನೋರ್ವ, ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಅಮಾನತುಗೊಂಡಿದ್ದಾನೆ.

ತುಮಕೂರು ಜಿಲ್ಲೆಯ ಮಧುಗಿರಿ ದೊಡ್ಡಹಟ್ಟಿ ಸರ್ಕಾರಿ ಶಾಲೆಯ ಸುರೇಶ್‌ ಅಮಾನತುಗೊಂಡ ಶಿಕ್ಷಕ. ಮಕ್ಕಳಿಂದ ಪೋಷಕರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದನು
Published by:Mahmadrafik K
First published: