ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಮತ್ತೊಬ್ಬಳಿಗೆ ತಾಳಿ ಕಟ್ಟಿದ್ದ; 2 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ

ದೈಹಿಕ ಆಸೆ ತೀರಿಸಿಕೊಂಡ ನಂತರ ರವಿಕುಮಾರ ಮಂಜವ್ವಳಿಂದ ದೂರವಾಗಲು ಯತ್ನಿಸಿದ್ದ.  ಆದರೆ ಮಂಜವ್ವ  ಮದುವೆ ಮಾಡಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಒತ್ತಡ ಹಾಕಿದ್ದಾಳೆ. ಈ ಒತ್ತಡಕ್ಕೆ ಮಣಿದ ರವಿಕುಮಾರ 2018 ಡಿಸೆಂಬರ್ 4 ರಂದು ಕುಷ್ಟಗಿ ಉಪನೊಂದಣಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಕೊಂಡಿದ್ದ

ಆರೋಪಿ ರವಿಕುಮಾರ

ಆರೋಪಿ ರವಿಕುಮಾರ

  • Share this:
ಕೊಪ್ಪಳ(ಆ.21): ಯುವ ಮನಸ್ಸುಗಳು ಪ್ರೀತಿ-ಪ್ರೇಮ ಎಂದು ಅಲೆದಾಡುತ್ತಿವೆ. ಈ ಪ್ರೀತಿ, ಪ್ರೇಮ ಮಾಡುವ ಮುನ್ನ ಪೂರ್ವಾಪರ ವಿಚಾರ ಮಾಡದೆ ಪ್ರೀತಿಸಿ, ದೈಹಿಕ ಆಕರ್ಷಣೆಯಿಂದ ಜಾರಿದರೆ ಆಗುವುದೇ ದುರಂತ. ಇಂಥ ದುರಂತ ನಡೆದಿದ್ದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ. ಆದರೆ ಈ ಪ್ರಕರಣ ನಡೆದಿದ್ದು ವಿಜಯಪುರ ಜಿಲ್ಲೆಯ ಹಿಟ್ಟನಹಳ್ಳಿ ಕ್ರಾಸ್ ಬಳಿ. ಈ ಕಥೆಯಲ್ಲಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಗಂಡನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಏನು ಆಗಿಲ್ಲ ಎಂಬಂತೆ ವರ್ತಿಸಿದ್ದ. ಆದರೆ ಪೊಲೀಸರ ವಿಚಾರಣೆಯ ನಂತರ ಕೊಲೆ ಮಾಡಿ 27 ತಿಂಗಳ ನಂತರ ಆರೋಪಿಯ ಬಂಧನವಾಗಿದೆ.

ಕುಷ್ಟಗಿ ರವಿಕುಮಾರ ಹಿರೇಮನಿ ಬಂಧಿತ ಆರೋಪಿ. ಈತ ಫಾರ್ಮಸಿಯನ್ನು ಓದಿದ್ದು ವಿಜಯಪುರ ಜಿಲ್ಲೆಯಲ್ಲಿ ಬಾಲಾಜಿ ವಿಂಡ್ ಪಾವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರವಿಕುಮಾರ ಮಂಜವ್ವ (32 ) ಎಂಬುವವರನ್ನು ಹುಬ್ಬಳ್ಳಿಯಲ್ಲಿ ಓದುತ್ತಿರುವಾಗ ಪರಿಚಯ ಮಾಡಿಕೊಂಡಿದ್ದ. ಬಿಎ, ಬಿಎಡ್ ಓದಿರುವ ಮಂಜವ್ವ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದವರು.

ಹುಬ್ಬಳ್ಳಿಯಲ್ಲಿ ಓದುತ್ತಿರುವಾಗ ಕುಷ್ಟಗಿಯ ಫಾರ್ಮಿಸಿ ಕಲಿತಿರುವ ರವಿಕುಮಾರನ ಪರಿಚಯವಾಗಿದೆ. ಪರಿಚಯ, ಸ್ನೇಹ ನಂತರ ದೈಹಿಕ ಸಂಪರ್ಕವಾಗಿದೆ. ದೈಹಿಕ ಆಸೆ ತೀರಿಸಿಕೊಂಡ ನಂತರ ರವಿಕುಮಾರ ಮಂಜವ್ವಳಿಂದ ದೂರವಾಗಲು ಯತ್ನಿಸಿದ್ದ.  ಆದರೆ ಮಂಜವ್ವ  ಮದುವೆ ಮಾಡಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಒತ್ತಡ ಹಾಕಿದ್ದಾಳೆ. ಈ ಒತ್ತಡಕ್ಕೆ ಮಣಿದ ರವಿಕುಮಾರ 2018 ಡಿಸೆಂಬರ್ 4 ರಂದು ಕುಷ್ಟಗಿ ಉಪನೊಂದಣಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಕೊಂಡಿದ್ದ. ಮದುವೆಗೆ ಮಂಜವ್ವಳ ಮನೆಯವರು ವಿರೋಧವಿದ್ದರಿಂದ ಮದುವೆಯಾದ ನಂತರ ಅವರು ಸಹ ಆಕೆ ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ವಿರೋಧ ಪಕ್ಷಕ್ಕೂ ನಾಲಾಯಕ್​ ಅಂತಾ ಜನ ಮನೆಗೆ ಕಳುಹಿಸಿದ್ದಾರೆ; ನಳೀನ್ ಕುಮಾರ್ ಕಟೀಲ್ ಲೇವಡಿ

ಮದುವೆಯಾದ ಮಂಜವ್ವಳನ್ನು ಕುಷ್ಟಗಿಯಲ್ಲಿ ಬಿಟ್ಟು ಹೋಗಿದ್ದ ರವಿಕುಮಾರ, ಆಗಾಗ ಬಂದು ಹೋಗುತ್ತಿದ್ದ. ಮಂಜವ್ವ ಕುಷ್ಟಗಿಯಲ್ಲಿ ರವಿಕುಮಾರ ವಿಜಯಪುರದಲ್ಲಿ ಇರುವುದರಿಂದ ಕೆಲಸ ಬಿಡಲು ಒತ್ತಾಯಿಸಿದ್ದಾಳೆ. ಆದರೆ ಕೆಲಸ ಬಿಡಲು ಆಗಿಲ್ಲ. ಈ ಮಧ್ಯೆ ರವಿಕುಮಾರ್ ಇನ್ನೊಂದು ಮದುವೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದ. ಮೊದಲು ಪತ್ನಿ ಇರುವಾಗ ಮದುವೆ ಮಾಡಿಕೊಂಡರೆ ಇನ್ನೊಂದು ಮದುವೆಯಾದರೆ ತೊಂದರೆ ಎಂದು ಅರಿತು ಆಕೆಯನ್ನು ಕೊಲೆ ಮಾಡಬೇಕೆಂದು ನಿಶ್ಚಿಯಿಸಿಕೊಂಡಿದ್ದ.

ಅದಕ್ಕಾಗಿ ಮೂಹರ್ತ ಫಿಕ್ಸ್ ಮಾಡಿಕೊಂಡ ರವಿಕುಮಾರ 2019 ಮೇ ತಿಂಗಳಲ್ಲಿ ಮಂಜವ್ವಳನ್ನು ವಿಜಯಪುರಕ್ಕೆ ಬರಲು ಹೇಳಿದ್ದಾನೆ. ಗಂಡ ವಿಜಯಪುರಕ್ಕೆ ಬರಲು ಹೇಳಿದ್ದರಿಂದ ಕುಷ್ಟಗಿಯಿಂದ ವಿಜಯಪುರಕ್ಕೆ ಹೊರಟವಳನ್ನು ಹುನಗುಂದದಲ್ಲಿ ಇಳಿಸಿದ್ದಾನೆ. ಹುನಗುಂದ ಬಸ್ ನಿಲ್ದಾಣದಿಂದ ತನ್ನ ಬೈಕ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ವಿಜಯಪುರ ಹೋಗುವ ಮಾರ್ಗದಲ್ಲಿ  ಹಿಟ್ಟನಹಳ್ಳಿ ಕ್ರಾಸ್ ಬಳಿಯಲ್ಲಿ ಮೂತ್ರ ವಿಸರ್ಜನೆ ಹೋಗಲು ಬೈಕ್ ನಿಲ್ಲಿಸಿದ್ದಾನೆ. ಆಕೆಯು ಸಹ ಮೂತ್ರ ವಿಸರ್ಜನೆ  ಮಾಡುವಾಗ ಹಿಂದಿನಿಂದ ಬಂದು ಕತ್ತು ಹಿಸುಕಿ, ಕೊಲೆ ಮಾಡಿ, ಕಲ್ಲನ್ನು  ತಲೆ ಮೇಲೆ ಎತ್ತಿ ಹಾಕಿ ವಿಜಯಪುರಕ್ಕೆ ಹೋಗಿದ್ದ. ಕೊಲೆಯ ನಂತರ ತನ್ನ ಕೆಲಸಕ್ಕೆ ಹೋಗಿದ್ದ ರವಿಕುಮಾರ, ಕಳೆದ ವರ್ಷ ಇನ್ನೊಂದು ಮದುವೆಯಾಗಿದ್ದ. ಎರಡನೆಯ ಮದುವೆಯ ವಿಷಯ ಮಂಜವ್ವಳ ತಂದೆಗೆ ಬೇರೆಯವರಿಂದ ಗೊತ್ತಾಗಿ,  ನಂತರ ಮಗಳ ಬಗ್ಗೆ ವಿಚಾರಿಸಿದ್ದಾರೆ.  ಮೊದಲು ವಿಜಯಪುರದಲ್ಲಿದ್ದಾಳೆ ಎಂದು, ಮತ್ತೊಮ್ಮೆ ಆಕೆ ನನ್ನೊಂದಿಗೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಲಮಟ್ಟಿಗೆ ಡ್ಯಾಂಗೆ ಬಾಗಿನ ಅರ್ಪಿಸಿ, ರೈತರ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ

ಇದರಿಂದ ಅನುಮಾನಗೊಂಡ  ಮಂಜವ್ವಳ ತಂದೆ ಹನುಮಪ್ಪ ಕೊಪ್ಪಳ ಎಸ್ಪಿಗೆ ಆಕೆ ಕಾಣೆಯಾಗಿರುವ ಕುರಿತ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಚಾರಣೆಯ ವೇಳೆ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿನ್ನೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಪ್ರೀತಿ,  ಪ್ರೇಮ ಎಂದು ಮೈ ಮರೆಯುವವರು ಸಾಕಷ್ಟು ಸಲ ವಿಚಾರ ಮಾಡಬೇಕೆನ್ನುವುದು ಈ ಪ್ರಕರಣ ಸಾಕ್ಷಿಯಾಗಿದೆ.
Published by:Latha CG
First published: