ಕೊಪ್ಪಳ ಸ್ಥಳೀಯ ಸಂಸ್ಥೆಯಲ್ಲಿ ಯಾರ ಕೈ ಹಿಡಿಯಲಿದ್ದಾರೆ ಮತದಾರರು?

news18
Updated:August 28, 2018, 3:41 PM IST
ಕೊಪ್ಪಳ ಸ್ಥಳೀಯ ಸಂಸ್ಥೆಯಲ್ಲಿ ಯಾರ ಕೈ ಹಿಡಿಯಲಿದ್ದಾರೆ ಮತದಾರರು?
news18
Updated: August 28, 2018, 3:41 PM IST
ಬಸವರಾಜ ಕರುಗಲ್, ನ್ಯೂಸ್ 18 ಕನ್ನಡ

ಕೊಪ್ಪಳ (ಆ.28): ಜಿಲ್ಲೆಯಲ್ಲಿ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯುತ್ತಿದೆ.
ಕೊಪ್ಪಳ ನಗರಸಭೆಯಲ್ಲಿ 31 ವಾರ್ಡ್​ಗಳಿದ್ದು, 132 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಂಗಾವತಿ ನಗರಸಭೆಯಲ್ಲೂ 35 ವಾರ್ಡ್​ಗಳಿದ್ದು, 129 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕುಷ್ಟಗಿ ಪುರಸಭೆಯ 23 ವಾರ್ಡ್​ಗಳ ಪೈಕಿ 70 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಲಬುರ್ಗಾ ಪಟ್ಟಣ ಪಂಚಾಯಿತಿಯಲ್ಲಿ 15 ವಾರ್ಡ್​ಗಳಿದ್ದು, 44  ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕೊಪ್ಪಳ ನಗರಸಭೆ

ಕೊಪ್ಪಳ ನಗರಸಭೆಯ 1ನೇ ವಾರ್ಡಿಗೆ (ಹಿಂದುಳಿದ ವರ್ಗ ಎ ಮಹಿಳೆ) ಕಾಂಗ್ರೆಸ್, ಬಿಜೆಪಿ ಹಾಗೂ ಓರ್ವ ಪಕ್ಷೇತರ ಕಣದಲ್ಲಿದ್ದಾರೆ. 2ನೇ ವಾರ್ಡಿಗೆ (ಹಿಂದುಳಿದ ವರ್ಗ ಬಿ ಮಹಿಳೆ) ಕಾಂಗ್ರೆಸ್ದ ಹಾಗೂ ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 3ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಒಟ್ಟು 5 ಜನ ಸ್ಪರ್ಧಿಸಿದ್ದಾರೆ. 4ನೇ ವಾರ್ಡಿಗೆ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಒಟ್ಟು 4 ಜನ ಕಣದಲ್ಲಿದ್ದಾರೆ. 5ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಒಟ್ಟು 5 ಜನ ಕಣದಲ್ಲಿದ್ದಾರೆ. 6ನೇ ವಾರ್ಡಿಗೆ (ಹಿಂದುಳಿದ ವರ್ಗ ಬಿ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 7ನೇ ವಾರ್ಡಿಗೆ (ಹಿಂದುಳಿದ ವರ್ಗ ಎ) ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಒಟ್ಟು 4ಜನ ಸ್ಪರ್ಧಿಸಿದ್ದಾರೆ. 8ನೇ ವಾರ್ಡಿಗೆ (ಹಿಂದುಳಿದ ವರ್ಗ ಎ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. 9ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. 10ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ಒಟ್ಟು 4 ಜನ ಕಣದಲ್ಲಿದ್ದಾರೆ. 11ನೇ ವಾರ್ಡಿಗೆ (ಹಿಂದುಳಿದ ವರ್ಗ ಎ)ಮೂರು ಪಕ್ಷಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. 12ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಜೆಡಿಎಸ್ ಬಿಟ್ಟು 5ಜನ ಕಣದಲ್ಲಿದ್ದಾರೆ. 13ನೇ ವಾರ್ಡಿಗೆ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಮೂವರು ಪಕ್ಷೇತರರು ಒಟ್ಟು 6ಜನ ಕಣದಲ್ಲಿದ್ದಾರೆ. 14ನೇ ವಾರ್ಡಿಗೆ (ಹಿಂದುಳಿದ ವರ್ಗ ಎ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಒಟ್ಟು 5 ಜನ ಕಣದಲ್ಲಿದ್ದಾರೆ. 15ನೇ ವಾರ್ಡಿಗೆ (ಸಾಮಾನ್ಯ)ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ 4ಜನ ಕಣದಲ್ಲಿದ್ದಾರೆ. 16ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು 5 ಜನ ಕಣದಲ್ಲಿದ್ದಾರೆ. 17ನೇ ವಾರ್ಡಿಗೆ ( ಪರಿಶಿಷ್ಟ ಪಂಗಡ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಒಟ್ಟು 4ಜನ ಕಣದಲ್ಲಿದ್ದಾರೆ. 18ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಹಾಗೂ ಮೂವರು ಇತರರು ಸೇರಿದಂತೆ ಒಟ್ಟು 6ಜನ ಕಣದಲ್ಲುಳಿದಿದ್ದಾರೆ. 19ನೇ ವಾರ್ಡಿಗೆ (ಹಿಂದುಳಿದ ವರ್ಗ ಎ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 20ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಕಾಂಗ್ರೆಸ್, ಬಿಜೆಪಿ ಹಾಗೂ ಓರ್ವ ಪಕ್ಷೇತರ ಸೇರಿದಂತೆ ಮೂವರು ಕಣದಲ್ಲಿದ್ದಾರೆ. 21ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇತರೆ 4ಜನ ಸೇರಿದಂತೆ ಒಟ್ಟು 7ಜನ ಕಣದಲ್ಲಿದ್ದಾರೆ. 22ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಮೂವರು ಪಕ್ಷೇತರರು ಒಟ್ಟು 6ಜನ ಕಣದಲ್ಲಿದ್ದಾರೆ. 23ನೇ ವಾರ್ಡಿಗೆ (ಪರಿಶಿಷ್ಟ ಜಾತಿ ಮಹಿಳೆ) ಜೆಡಿಎಸ್ ಹೊರತುಪಡಿಸಿ ನಾಲ್ವರು ಕಣದಲ್ಲಿದ್ದಾರೆ. 24ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಇಬ್ಬರು ಪಕ್ಷೇತರರು ಒಟ್ಟು 5 ಜನ ಕಣದಲ್ಲಿದ್ದಾರೆ. 25ನೇ ವಾರ್ಡಿಗೆ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆ ಓರ್ವ ಪಕ್ಷೇತರ ಕಣದಲ್ಲಿದ್ದಾರೆ. 26ನೇ ವಾರ್ಡಿಗೆ (ಪರಿಶಿಷ್ಟ ಜಾತಿ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಒಟ್ಟು 5ಜನರು ಸ್ಪರ್ಧೆಯಲ್ಲಿದ್ದಾರೆ. 27ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆ ಇಬ್ಬರು ಪಕ್ಷೇತರರು ಒಟ್ಟು 5 ಜನ ಕಣದಲ್ಲಿದ್ದಾರೆ. 28ನೇ ವಾರ್ಡಿಗೆ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 29ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಜೆಡಿಎಸ್ ಹೊರತುಪಡಿಸಿ ನಾಲ್ವರು ಕಣದಲ್ಲಿದ್ದಾರೆ. 30ನೇ ವಾರ್ಡಿಗೆ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ನಾಲ್ವರು ಇತರರು ಸೇರಿದಂತೆ ಒಟ್ಟು 7ಜನ ಕಣದಲ್ಲಿದ್ದಾರೆ. 31ನೇ ವಾರ್ಡಿಗೆ (ಹಿಂದುಳಿದ ವರ್ಗ ಎ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.
ಒಟ್ಟಾರೆ ಕೊಪ್ಪಳದ 31 ವಾರ್ಡ್ಗಳಲ್ಲಿ 31 ಜನ ಕಾಂಗ್ರೆಸ್, 31 ಜನ ಬಿಜೆಪಿ, 20 ಜನ ಜೆಡಿಎಸ್ ಹಾಗೂ 50 ಜನ ಇತರರು ಚುನಾವಣಾ ಕಣದಲ್ಲಿದ್ದು, ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ.

ಗಂಗಾವತಿ ನಗರಸಭೆ
Loading...

ಗಂಗಾವತಿಯ 1ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆ ಮೂವರು ಪಕ್ಷೇತರರು ಒಟ್ಟು 6 ಜನ ಪಕ್ಷೇತರರು ಕಣದಲ್ಲಿದ್ದಾರೆ. 2ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಮತ್ತು 3ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ನಡುವೆ ಹಣಾಹಣಿ ನಡೆಯಲಿದೆ. 4ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸ್ಪರ್ಧಿಸಿದ್ದಾರೆ. 5ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಹಾಗೂ 6ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 7ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಬಿ) ಬಿಜೆಪಿ, ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರನ ನಡುವೆ ಹಣಾಹಣಿ ನಡೆಯಲಿದೆ. 8ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ನಾಲ್ವರ ನಡುವೆ ಪೈಪೋಟಿ ಏರ್ಪಟ್ಟಿದೆ. 9ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ)ಮ 10ನೇ ವಾರ್ಡಿನಲ್ಲಿ(ಸಾಮಾನ್ಯ), 11ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 12ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 13ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ನಾಲ್ವರು ಕಣದಲ್ಲುಳಿದಿದ್ದಾರೆ. 14ನೇ ವಾರ್ಡಿನಲ್ಲಿ (ಸಾಮಾನ್ಯ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 15ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ), 16ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ನಡುವೆ ನೇರ ಸ್ಪರ್ಧೆ ಇದೆ. 17ನೇ ವಾರ್ಡಿನಲ್ಲಿ (ಸಾಮಾನ್ಯ)ಮೂರು ಪಕ್ಷಗಳು ಸೇರಿದಂತೆ ಒಟ್ಟು 5 ಜನ ಕಣದಲ್ಲಿದ್ದಾರೆ. 18ನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 19ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 5ಜನ ಕಣದಲ್ಲಿದ್ದಾರೆ. 20ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಹಾಗೂ 21ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲುಳಿದಿದ್ದಾರೆ. 22ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಹಾಗೂ 23ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಸೇರಿದಂತೆ 4ಜನ ಕಣದಲ್ಲಿದ್ದಾರೆ. 24ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 25ನೇ ವಾರ್ಡಿನಲ್ಲಿ (ಸಾಮಾನ್ಯ), 26ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ ಮಹಿಳೆ) ಹಾಗೂ 27ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಸೇರಿದಂತೆ ಒಟ್ಟು 4ಜನ ಕಣದಲ್ಲಿದ್ದಾರೆ. 28ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 6ಜನ ಕಣದಲ್ಲಿದ್ದಾರೆ. 29ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಸೇರಿದಂತೆ 4ಜನ ಕಣದಲ್ಲಿದ್ದಾರೆ. 30ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸೇರಿ 5ಜನ ಕಣದಲ್ಲಿದ್ದಾರೆ. 31ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಬಿ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 32ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಇತರರು ಸೇರಿದಂತೆ 5ಜನ ಕಣದಲ್ಲಿದ್ದಾರೆ. 33ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. 34ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ ಮಹಿಳೆ) ಹಾಗೂ 35ನೇ ವಾರ್ಡಿನಲ್ಲಿ(ಪರಿಶಿಷ್ಟ ಪಂಗಡ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.
ಒಟ್ಟಾರೆ ಗಂಗಾವತಿ ನಗರಸಭೆಯ 35 ವಾರ್ಡುಗಳಿಗೆ 35 ಕಾಂಗ್ರೆಸ್, 35 ಬಿಜೆಪಿ, 30 ಜೆಡಿಎಸ್ ಹಾಗೂ 29ಜನ ಇತರರು ಸೇರಿದಂತೆ 129 ಜನ ಅಭ್ಯರ್ಥಿಗಳು ಗೆಲುವಿನ ಕನಸು ಕಾಣುತ್ತಿದ್ದಾರೆ.

ಕುಷ್ಟಗಿ ಪುರಸಭೆ
ಕುಷ್ಟಗಿಯ 1ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ 5ಜನ ಕಣದಲ್ಲಿದ್ದಾರೆ. 2ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 3ನ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ ಮಹಿಳೆ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 4ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 5ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರದಂತೆ 4ಜನ ಕಣದಲ್ಲಿದ್ದಾರೆ. 6ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 7ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 8ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ 4ಜನ ಕಣದಲ್ಲಿದ್ದಾರೆ. 9ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಹಾಗೂ 10ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 11ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಬಿ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 12ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ನೇರ ಹಣಾಹಣಿ ನಡೆಯಲಿದೆ. 13ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 14ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 15ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ನೇರ ಪೈಪೋಟಿ ನಡೆಯಲಿದೆ. 16ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಮೂವರು ಪಕ್ಷೇತರರು ಒಟ್ಟು 6 ಜನ ಕಣದಲ್ಲಿದ್ದಾರೆ. 17ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಹಾಗೂ 18ನೇ ವಾರ್ಡಿನಲ್ಲಿ (ಸಾಮಾನ್ಯ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ನಡುವೆ ನೇರ ಪೈಪೋಟಿ ನಡೆಯಲಿದೆ. 19ನೇ ವಾರ್ಡಿಗೆ (ಪರಿಶಿಷ್ಟ ಜಾತಿ) ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ಅಂಬಣ್ಣ ಭಜಂತ್ರಿ ಅವಿರೋಧ ಆಯ್ಕೆಯಾಗಿದ್ದಾರೆ. ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಈ ವಾರ್ಡಿನಿಂದ ಕರಿಸಿದ್ದಪ್ಪ ಹೊಸವಕ್ಕಲ ಪಕ್ಷೇತರರಾಗಿ ಆಯ್ಕೆಯಾಗಿದ್ದನ್ನ ಸ್ಮರಿಸಬಹುದು. 20ನೇ ವಾರ್ಡಿನಲ್ಲಿ (ಸಾಮಾನ್ಯ) ಜೆಡಿಎಸ್ ಹೊರತು ಪಡಿಸಿ ಮೂರು ಜನ ಕಣದಲ್ಲಿದ್ದಾರೆ. 21ನೇ ವಾರ್ಡಿನಲ್ಲಿ (ಸಾಮಾನ್ಯ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ನೇರ ಹಣಾಹಣಿ ನಡೆಯಲಿದೆ. 22ನೇ ವಾರ್ಡಿನಲ್ಲಿ (ಸಾಮಾನ್ಯ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 23ನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ನೇರ ಹಣಾಹಣಿ ನಡೆಯಲಿದೆ.
ಒಟ್ಟಾರೆ ಕುಷ್ಟಗಿ ಪುರಸಭೆಯ 23ವಾರ್ಡುಗಳಿಗೆ ಸಂಬಂಧಿಸಿದಂತೆ 22 ಕಾಂಗ್ರೆಸ್, 22 ಬಿಜೆಪಿ, 11 ಜೆಡಿಎಸ್ ಹಾಗೂ 15 ಜನ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು70ಜನರ ಪೈಕಿ ಪಕ್ಷೇತರರೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಯಲಬುರ್ಗಾ ಪಟ್ಟಣ ಪಂಚಾಯಿತಿ

ಯಲಬುರ್ಗಾ ಪಟ್ಟಣ ಪಂಚಾಯಿತಿಯ 1ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನೇರ ಹಣಾಹಣಿ ನಡೆಯಲಿದೆ. 2ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 3ನೇ ವಾರ್ಡಿನಲ್ಲಿ(ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ನಾಲ್ವರು ಇತರರು ಸೇರಿದಂತೆ 7ಜನ ಕಣದಲ್ಲಿದ್ದಾರೆ. 4ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ. 5ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 6ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 7ನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಬಿ) ಜೆಡಿಎಸ್ ಹೊರತುಪಡಿಸಿ ಮೂವರು ಕಣದಲ್ಲಿದ್ದಾರೆ. 8ನೇ ವಾರ್ಡಿನಲ್ಲಿ (ಸಾಮಾನ್ಯ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 9ನೇ ವಾರ್ಡಿನಲ್ಲಿ (ಸಾಮಾನ್ಯ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 10ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) 11ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 12ನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 13ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 14ನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. 15ನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.
ಒಟ್ಟಾರೆ ಯಲಬುರ್ಗಾ ಪಟ್ಟಣ ಪಂಚಾಯಿತಿಯ 15 ಸ್ಥಾನಗಳಿಗೆ 15 ಕಾಂಗ್ರೆಸ್, 15 ಬಿಜೆಪಿ, 7 ಜೆಡಿಎಸ್ ಹಾಗೂ 7 ಜನ ಇತರರು ಸೇರಿದಂತೆ 44 ಜನರು ಕಣದಲ್ಲಿ ಉಳಿದಿದ್ದಾರೆ.

ಕೊಪ್ಪಳ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ 104 ಸ್ಥಾನಗಳಿಗೆ 103 ಕಾಂಗ್ರೆಸ್, 103 ಬಿಜೆಪಿ, 68 ಜೆಡಿಎಸ್ 101 ಇತರರು ಸೇರಿದಂತೆ 375 ಜನರು ಸ್ಪರ್ಧಿಸಿದ್ದಾರೆ. ಕುಷ್ಟಗಿಯ 19ನೇ ವಾರ್ಡಿಗೆ ಪಕ್ಷೇತರರೊಬ್ಬರು ಆಯ್ಕೆಯಾಗಿದ್ದರು, 374 ಜನರು ಗೆಲುವಿಗಾಗಿ ನಾನಾ ಕಸರತ್ತು ನಡೆಸಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ