Koppal: ಹುಲಿಹೈದರ ಘರ್ಷಣೆ, ಸರ್ಕಾರದ ನಿರ್ಲಕ್ಷ್ಯವೇ ಗಲಾಟೆಗೆ ಕಾರಣವಾಯ್ತಾ?

ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಠಾಣೆಗೆ ಈ ಹಿಂದೆಯೇ ಬೇಡಿಕೆ ಇರಿಸಿದ್ದರು. ಒಂದು ವೇಳೆ ಗ್ರಾಮದಲ್ಲಿ ಪೊಲೀಸ್ ಠಾಣೆ ಆರಂಭಗೊಂಡಿದ್ರೆ, ಈ ಗಲಾಟೆ ನಡೆಯುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಗಲಾಟೆ

ಗಲಾಟೆ

  • Share this:
ಹುಲಿಹೈದರ್ ಗಲಾಟೆ (Hulihaidara Riots) ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ (Kanagagiri Police Station) ಎರಡು ಗುಂಪುಗಳಿಂದ ದೂರು ದಾಖಲಾಗಿದೆ. ಖಾದರಭಾಷಾ ಹಾಗೂ ಹಂಪಮ್ಮ ಎಂಬವರಿಂದ ದೂರು ಪ್ರತಿ ದೂರು ದಾಖಲಾಗಿದೆ. ಮುಸ್ಲಿಂ ಸಮುದಾಯದ (Muslim Community) ಪರ ಖಾದರ್​ಭಾಷಾರಿಂದ 28 ಜನರು ಮತ್ತು ಎಸ್​ಟಿ ಸಮುದಾಯದ (ST Community) ಪರ ಹಂಪ್ಪಮ್ಮ‌ ಎಂಬವರಿಂದ 30 ಜನರ ವಿರುದ್ಧ ದೂರು ದಾಖಲಾಗಿದೆ. ಗಲಾಟೆ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ 143, 147, 148, 323, 324, 504, 507 ಕಲಂ‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಲಾಟೆಯ ನಡೆದ ಸ್ಥಳದಲ್ಲಿಯ ಸಿಸಿಟಿವಿ ಕ್ಯಾಮೆರಾ (CCTV Camera) ಪರಿಶೀಲಿಸಿ 25 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಇನ್ನಷ್ಟು ಜನರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕಳೆದ ವರ್ಷವೇ ಸಿಎಂಗೆ ಪತ್ರ

ಕಳೆದ ವರ್ಷವೇ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಬಿಜೆಪಿ ಕಾರ್ಯಕರ್ತ ಹನುಮೇಶ್ ಹುಳಕಿಹಾಳ ಎಂಬವರು ಪತ್ರ ಬರೆದಿದ್ದರು.

ಇದನ್ನೂ ಓದಿ:  Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

ಸರ್ಕಾರದ ನಿರ್ಲಕ್ಷ್ಯವೇ ಗಲಾಟೆಗೆ ಕಾರಣವಾಯ್ತಾ?

ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಠಾಣೆಗೆ ಈ ಹಿಂದೆಯೇ ಬೇಡಿಕೆ ಇರಿಸಿದ್ದರು. ಒಂದು ವೇಳೆ ಗ್ರಾಮದಲ್ಲಿ ಪೊಲೀಸ್ ಠಾಣೆ ಆರಂಭಗೊಂಡಿದ್ರೆ, ಈ ಗಲಾಟೆ ನಡೆಯುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಆಗ್ತಿದ್ದು, ಕಾನೂನಿನ ಭಯವಿಲ್ಲ. ಮಹಿಳೆಯರು ಓಡಾಡುವ ಹಾಗಿಲ್ಲ, ಕುಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೀಗಾಗಿ ಹುಲಿಹೈದರ್ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡಬೇಕೆಂದು ಹನುಮೇಶ್ ಪತ್ರ ಬರೆದಿದ್ದರು. ಪೊಲೀಸ್ ಠಾಣೆ ಮಂಜೂರು ಮಾಡಿ ಮಹಿಳೆಯರಿಗೆ, ದುರ್ಬಲರಿಗೆ ರಕ್ಷಣೆ ಮಾಡಿಕೊಡಬೇಕೆಂದು ಪತ್ರ ಬರೆಯಲಾಗಿತ್ತು.

ಗಲಾಟೆಯಲ್ಲಿ ಇಬ್ಬರ ಸಾವು, ಓರ್ವ ಗಂಭೀರ

ಕೊಪ್ಪಳ‌ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಮಾರಾಮಾರಿ (Attack) ನಡೆದಿದೆ. ಮಾರಾಮಾರಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ನಂತರದ ಬೆಳವಣಿಗೆಯಲ್ಲಿ ಕಲ್ಲುತೂರಾಟ (Stone Pelting) ನಡೆದಿದ್ದು, ಬೈಕ್​ಗಳು (Bike) ಜಖಂ ಆಗಿದೆ. ಸದ್ಯ ಕೊಪ್ಪಳದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಮನೆಗಳ ಮೇಲೆ‌ ಕಲ್ಲು ತೂರಾಟ

ಎರಡು ಗುಂಪಿನ ನಡುವೆ ಗಲಾಟೆ ಬೆನ್ನಲ್ಲೇ ಗ್ರಾಮದಲ್ಲಿ ಕಲ್ಲುತೂರಾಟ ಕೂಡ ನಡೆದಿದೆ. ಉದ್ರಿಕ್ತರ ಗುಂಪು ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿದೆ. ಗಲಾಟೆ ವೇಳೆ ಹಲವು ಬೈಕ್​​ಗಳು ಜಖಂ ಆಗಿದೆ. ಹುಲಿಹೈದರ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

144 ಸೆಕ್ಷನ್ ಜಾರಿ

2 ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂದಿನಿಂದ ಆಗಸ್ಟ್​​ 20ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗ್ರಾಮದಿಂದ 2 ಕಿಮೀ ವ್ಯಾಪ್ತಿಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Koppal huli haidara clash complaint filed in kanakagiri police station mrq
ಗಲಾಟೆ


ನಿಷೇಧಾಜ್ಞೆ ಜಾರಿಗೊಳಿಸಿ ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸ್ಥಳದಲ್ಲೇ ಎಸ್​ಪಿ ಅರುಣಾಂಗ್ಶು ಗಿರಿ ಬೀಡುಬಿಟ್ಟಿದ್ದಾರೆ. ತಪ್ಪಿತಸ್ಥರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತಾ ಎಸ್​​ಪಿ ಹೇಳಿದ್ದಾರೆ.

ಇದನ್ನೂ ಓದಿ:  Accident: ತಂದೆಯ ಎದುರೇ ಪ್ರಾಣಬಿಟ್ಟ ಪುಟ್ಟ ಮಗ! ನೋಡ ನೋಡುತ್ತಿದ್ದಂತೆ ನಡೆಯಿತು ಆ್ಯಕ್ಸಿಡೆಂಟ್

ಬೂದಿಮುಚ್ಚಿದ ಕೆಂಡದಂತಿರುವ ಗ್ರಾಮ

ಗಲಾಟೆಯಿಂದ ಪ್ರಕ್ಷುಬ್ಧವಾಗಿರುವ ಹುಲಿಹೈದರ ಗ್ರಾಮದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಗಾಯಾಳುಗಳಿಗೆ ಕನಕಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇದರ ನಡುವೆ ಪೊಲೀಸರ ವಿರುದ್ಧವೇ ಆಕ್ರೋಶವೂ ವ್ಯಕ್ತವಾಗಿದೆ.
Published by:Mahmadrafik K
First published: