Success Story: ಕೊಪ್ಪಳದ ಮಾದರಿ ಮಹಿಳೆಯರಿಗೆ ಕೇಂದ್ರ ಸರ್ಕಾರವೇ ಭೇಷ್ ಅಂತು!

2015 ರಲ್ಲಿ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಕೇವಲ ಒಂದು ಲಕ್ಷ ರೂಪಾಯಿ ಸದಸ್ಯರ ಬಂಡವಾಳದೊಂದಿಗೆ ಆರಂಭವಾಗಿತ್ತು.

ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ

ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ

  • Share this:
ಕೊಪ್ಪಳ: ಓರ್ವ ಮಹಿಳೆ ಸ್ವಾವಲಂಬಿಯಾದರೆ (Women Empowerment) ಆ ಕುಟುಂಬ ನೆಮ್ಮದಿ, ಸುಖವಾಗಿರುತ್ತದೆ ಎಂಬ ಮಾತಿದೆ.  ಮಹಿಳೆಯರು ದೈನಂದಿನ ಕೆಲಸವನ್ನು ಮಾಡಿ ಪುರುಷರ ದುಡಿಮೆಯೊಂದಿಗೆ ತಮ್ಮ ದುಡಿಮೆ ಸೇರಿಸಿ ಕುಟುಂಬದ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ದುಡಿಯುವ ಮಹಿಳೆಯರಿಗೆ ಸ್ವಸಹಾಯ ಗುಂಪುಗಳಲ್ಲಿ (Self Help Groups) ಸಾಲ ರೂಪದಲ್ಲಿ ಹಣದ ಸಹಾಯ ಮಾಡಿದರೆ ಆರ್ಥಿಕತೆ ಹೆಚ್ಚುತ್ತದೆ ಎಂಬುದು ಕೊಪ್ಪಳ ಜಿಲ್ಲೆಯ (Koppal) ಮಂಗಳೂರಿನ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟವೇ  ಸಾಕ್ಷಿ. ಈ ಒಕ್ಕೂಟಕ್ಕೆ ಕೇಂದ್ರ ಸರಕಾರವು (Union Government) ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು (International Women's Day 2022)  ಈ ಒಕ್ಕೂಟಕ್ಕೆ ಆತ್ಮನಿರ್ಭರ ಯೋಜನೆಯಲ್ಲಿ ಪ್ರಶಸ್ತಿ ಪಡೆಯಲು (AtmaNirbhar Bharat Award) ಆಹ್ವಾನಿಸಿಲಾಗಿದೆ. ಒಕ್ಕೂಟದ ಸದಸ್ಯರಿಗೆ ಇದು ಖುಷಿ ನೀಡಿದೆ.

ಒಂದು ಕುಟುಂಬದಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ದುಡಿಯುತ್ತಿದ್ದಾರೆ. ಅವರ ದುಡಿಮೆಗೆ ಸಹಾಯ ಬೇಕಾಗಿದೆ. ಅದಕ್ಕಾಗಿ ಮಹಿಳಾ ಸ್ವಸಹಾಯ ಗುಂಪುಗಳು ಹುಟ್ಟಿಕೊಂಡಿವೆ. ರಾಜ್ಯ ಹಾಗು ಕೇಂದ್ರ ಸರಕಾರವು ಸಹ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುತ್ತಿದೆ.

ಒಕ್ಕೂಟ ಶುರುವಾಗಿದ್ದು ಹೇಗೆ?
ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಮಹಿಳಾ ಸ್ವಸಹಾಯ ಒಕ್ಕೂಟವಾಗಿರುವ ದಿವ್ಯಜ್ಯೋತಿ ಸಂಜೀವಿನ ಒಕ್ಕೂಟ ಮಾದರಿಯಾಗುವಂಥ ಕೆಲಸ ಮಾಡಿದೆ.

2015 ರಲ್ಲಿ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಆರಂಭವಾಗಿದೆ. ಆರಂಭದಲ್ಲಿ ಕೇವಲ ಒಂದು ಲಕ್ಷ ರೂಪಾಯಿ ಸದಸ್ಯರ ಬಂಡವಾಳದೊಂದಿಗೆ ಆರಂಭವಾಗಿದೆ. ಅವರಿಗೆ ಸಮುದಾಯ ಬಂಡವಾಳ ನಿಧಿಯಿಂದ 44.75 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು.

10 ಲಕ್ಷದವರೆಗೂ ವಹಿವಾಟು!
ಮಂಗಳೂರು ಗ್ರಾಮ ಪಂಚಾಯತ್​ನ 7 ವಾರ್ಡುಗಳಲ್ಲಿ ಈ ಮೊದಲು 45 ಸ್ವಸಹಾಯ ಗುಂಪುಗಳಿದ್ದವು.  ಈಗ 71 ಸ್ವಸಹಾಯ  ಗುಂಪುಗಳಾಗಿವೆ. ಇಲ್ಲಿ ಈಗ  ಒಟ್ಟು 148.50 ಲಕ್ಷ ರೂಪಾಯಿ ಸಮುದಾಯ ಬಂಡವಾಳ ನಿಧಿ ಇದೆ.

ಮಂಗಳೂರು ಗ್ರಾಮದಲ್ಲಿ ಕೆಲವರು ಕೌದಿ ಹೊಲೆಯುವ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ. ಉಡುಪು ತಯಾರಿಕೆ ಹಾಗು ಮಾರಾಟ, ಕೃಷಿಯಲ್ಲಿ ನರ್ಸರಿ, ತರಕಾರಿ ಮಾರಾಟ ಹೀಗೆ ಹಲವಾರು ವ್ಯಾಪಾರ ವಹಿವಾಟನ್ನು ಸ್ವಸಹಾಯ ಗುಂಪುಗಳಿಂದ ಸಾಲ ಪಡೆದು ನಿತ್ಯ ದುಡಿಮೆ ಮಾಡುತ್ತಿದ್ದಾರೆ. ಬಸಮ್ಮ ಎಂಬ ಮಹಿಳೆಯು ಸಣ್ಣದಾಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದವರು ಈಗ 10 ಲಕ್ಷ ರೂಪಾಯಿಯವರೆಗೂ ವಹಿವಾಟು ನಡೆಸುವಂತೆ ಅವರ ಅಂಗಡಿ ವ್ಯಾಪಾರ ನಡೆಯುತ್ತಿದೆ.

ಇದನ್ನೂ ಓದಿ: Haunted Places in Karnataka: ದೆವ್ವಗಳಿರೋ ಅನುಭವವಾಗಲು ಕರ್ನಾಟಕದ ಈ ಜಾಗಗಳಿಗೆ ಭೇಟಿ ನೀಡಬಹುದಂತೆ!

ದುಡಿಮೆಗೆ ಬೇಕಾಗುವ ಮೂಲ ಬಂಡವಾಳವನ್ನು ಸ್ವಸಹಾಯ ಗುಂಪುಗಳಿಂದ ಪಡೆದು ಸರಳ ಕಂತುಗಳ ಮೂಲಕ ಪಡೆದ ಸಾಲ ಮರುಪಾವತಿ ಮಾಡುತ್ತಿರುವ ಮಹಿಳೆಯರು ಈಗ ಸಂಪೂರ್ಣವಾಗಿ ಸ್ವಾವಲಂಬಿಗಳಾಗಿದ್ದಾರೆ. ಇಡೀ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಸ್ವಸಹಾಯ ಗುಂಪಿನ ಸದಸ್ಯರಾಗಿ ಸ್ವಾವಲಂಬಿಯಾಗಿ ಕುಟುಂಬದ ಆರ್ಥಿಕತೆ ಹೆಚ್ಚಿಸಲು ಸಹಕಾರಿಯಾಗಿದ್ದಾರೆ.

ಕೊರೊನಾ ಸಂದರ್ಭದಲ್ಲೂ ಎದೆಗುಂದಿಲ್ಲ!
ಈ ಒಕ್ಕೂಟದಿಂದ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ತಮ್ಮ ಸದಸ್ಯರ ನೆರವಿಗೆ ಬಂದಿರುವುದು. ಮಹಿಳೆ  ಆರ್ಥಿಕವಾಗಿ ಗಟ್ಟಿಯಾಗಿದ್ದರೆ ಎಂಥ ಸಂಕಷ್ಟ ಸಮಯದಲ್ಲಿಯೂ ಕುಟುಂಬ ನಿರ್ವಹಣೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಇಂಥ ಒಕ್ಕೂಟಕ್ಕೆ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯವು ಆತ್ಮನಿರ್ಭರ ಯೋಜನೆಯಲ್ಲಿ ಕೆಲಸ ಮಾಡುವ ಸ್ವಸಹಾಯ ಒಕ್ಕೂಟವನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: Red Corn: ರೋಗಬಾಧೆಯೇ ಇಲ್ಲದ ಕೆಂಪು ಜೋಳ ಎಲ್ಲಿ ಸಿಗುತ್ತೆ? 20 ವರ್ಷಗಳಿಂದ ಬೆಳೆಯುತ್ತಿದ್ದಾರೆ ಈ ರೈತ!

ಈ ಕಾರಣಕ್ಕಾಗಿ ಒಕ್ಕೂಟದ ಸದಸ್ಯರನ್ನು ಮಾರ್ಚ 8 ರಂದು ದೆಹಲಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಆಹ್ವಾನಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳಾ ಒಕ್ಕೂಟವು ಈ ಸ್ವಾವಲಂಬಿ ಬದುಕು ಹೇಗೆ ನಿರ್ವಹಿಸಬಹುದು ಎಂಬುದಕ್ಕೆ ಮಾದರಿಯಾಗುವಂಥ ಕೆಲಸ ಮಾಡಿರುವದಕ್ಕೆ ಒಕ್ಕೂಟಕ್ಕೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ತಮ್ಮನ್ನು ಗುರುತಿಸಿರುವ ಕೇಂದ್ರ ಹಾಗು ರಾಜ್ಯ ಸರಕಾರಗಳಿಗೆ ಒಕ್ಕೂಟದ ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ.
Published by:guruganesh bhat
First published: