Koppal: ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಶಾಂತವಾಗಿದ್ದ ಕೊಪ್ಪಳದಲ್ಲಿ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಗಲಾಟೆ ಬೆನ್ನಲ್ಲೇ ಗ್ರಾಮದಲ್ಲಿ ಕಲ್ಲುತೂರಾಟ ಕೂಡ ನಡೆದಿದೆ.

 ಕೊಪ್ಪಳದಲ್ಲಿ ಗಲಾಟೆ, ಸಾವನ್ನಪ್ಪಿದ ಪಾಷಾವಲಿ

ಕೊಪ್ಪಳದಲ್ಲಿ ಗಲಾಟೆ, ಸಾವನ್ನಪ್ಪಿದ ಪಾಷಾವಲಿ

  • Share this:
ಕೋಮುಘರ್ಷಣೆಯಿಂದ ಕರ್ನಾಟಕ ಬೆಂದು ಹೋಗಿದೆ. ಹೊತ್ತಿ ಉರಿದಿದ್ದ ಕರಾವಳಿ (Costal) ಈಗ ಶಾಂತವಾಗಿದೆ. ನಮ್ಮ ರಾಜ್ಯದ ಪೊಲೀಸರು (Police) ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯ ಕರ್ನಾಟಕ (Karnataka) ಮೊದಲಿನ ಸ್ಥಿತಿಗೆ ಮರಳಿದೆ. ಅದರ ನಡುವೆಯೇ ಈಗ ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಕೊಪ್ಪಳ‌ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಮಾರಾಮಾರಿ (Attack) ನಡೆದಿದೆ. ಮಾರಾಮಾರಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ನಂತರದ ಬೆಳವಣಿಗೆಯಲ್ಲಿ ಕಲ್ಲುತೂರಾಟ (Stone Pelting) ನಡೆದಿದ್ದು, ಬೈಕ್​ಗಳು (Bike) ಜಖಂ ಆಗಿದೆ. ಸದ್ಯ ಕೊಪ್ಪಳದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಶಾಂತವಾಗಿದ್ದ ಕೊಪ್ಪಳದಲ್ಲಿ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಯಂಕಪ್ಪ (60) ಮತ್ತು ಪಾಷಾವಲಿ (22) ಸಾವನ್ನಪ್ಪಿದವರು.

ಗಲಾಟೆಯಲ್ಲಿ ಓರ್ವನ ಸ್ಥಿತಿ ಗಂಭೀರ

ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದರೆ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಘಟನೆ ನಡೆದಿದ್ದು ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯವಾಗಿದೆ. ಧರ್ಮಣ್ಣ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ.

koppal clash between 2 groups 2 member death 144 section announce
ಸಾವನ್ನಪ್ಪಿದ ಪಾಷಾವಲಿ


ಮನೆಗಳ ಮೇಲೆ‌ ಕಲ್ಲು ತೂರಾಟ

ಎರಡು ಗುಂಪಿನ ನಡುವೆ ಗಲಾಟೆ ಬೆನ್ನಲ್ಲೇ ಗ್ರಾಮದಲ್ಲಿ ಕಲ್ಲುತೂರಾಟ ಕೂಡ ನಡೆದಿದೆ. ಉದ್ರಿಕ್ತರ ಗುಂಪು ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿದೆ. ಗಲಾಟೆ ವೇಳೆ ಹಲವು ಬೈಕ್​​ಗಳು ಜಖಂ ಆಗಿದೆ. ಹುಲಿಹೈದರ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: ವಿಮಾನದೊಳಗೆ ಸಿಗರೇಟ್​ ಸೇದಿ ಬಾಬಿ ಕಟಾರಿಯಾ ಉದ್ದಟತನ, ಗುಡುಗಿದ ಸಚಿವ ಸಿಂಧಿಯಾ!

144 ಸೆಕ್ಷನ್ ಜಾರಿ

2 ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂದಿನಿಂದ ಆಗಸ್ಟ್​​ 20ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗ್ರಾಮದಿಂದ 2 ಕಿಮೀ ವ್ಯಾಪ್ತಿಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ಜಾರಿಗೊಳಿಸಿ ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸ್ಥಳದಲ್ಲೇ ಎಸ್​ಪಿ ಅರುಣಾಂಗ್ಶು ಗಿರಿ ಬೀಡುಬಿಟ್ಟಿದ್ದಾರೆ. ತಪ್ಪಿತಸ್ಥರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತಾ ಎಸ್​​ಪಿ ಹೇಳಿದ್ದಾರೆ.

ಬೂದಿಮುಚ್ಚಿದ ಕೆಂಡದಂತಿರುವ ಗ್ರಾಮ

ಗಲಾಟೆಯಿಂದ ಪ್ರಕ್ಷುಬ್ಧವಾಗಿರುವ ಹುಲಿಹೈದರ ಗ್ರಾಮದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಗಾಯಾಳುಗಳಿಗೆ ಕನಕಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.  ಇದರ ನಡುವೆ ಪೊಲೀಸರ ವಿರುದ್ಧವೇ ಆಕ್ರೋಶವೂ ವ್ಯಕ್ತವಾಗಿದೆ.

ಇದನ್ನೂ ಓದಿ: ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ! ಈ ಯುವಕ ಹೇಳಿದ್ದು ಕೇಳಿದ್ರೆ ಎದೆ ನಡುಗುತ್ತೆ

ವಿಜಯಪುರದಲ್ಲಿ ಸಿಗರೇಟ್​ ಹೊಗೆ ವಿಚಾರಕ್ಕೆ ಹೊಡೆದಾಟ

ಸಿಗರೇಟ್ ಹೊಗೆ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಬೆಳ್ಳುಂಡಗಿ ಎಂಬುವವರೇ ಹಲ್ಲೆಗೊಳಗಾದ ವ್ಯಕ್ತಿ. ಅದೇ ಗ್ರಾಮದ ಅಕ್ಷಯ್ ಎಂಬಾತ ರಾಡ್​​ನಿಂದ ಹಲ್ಲೆ ನಡೆಸಿದ್ದಾನೆ.

ಗ್ರಾಮದ ರವಿ ಪಾನ್‌ಶಾಪ್ ಎದುರು ಅಕ್ಷಯ್ ಹಾಗೂ ಸ್ನೇಹಿತರು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಪಾನ್ ಶಾಪ್​ಗೆ ಬಂದಿದ್ದ ಮಲ್ಲಪ್ಪ, ಸಿಗರೇಟ್ ದೂರ ನಿಂತು ಸೇದಿ. ಇಲ್ಲಿ ಹೊಗೆ ಬಿಡಬೇಡಿ ಎಂದಿದ್ದಾನೆ. ಇಷ್ಟಕ್ಕೆ ಆಕ್ರೋಶಗೊಂಡ ಅಕ್ಷಯ್ ಮನೆಯಿಂದ ಕಬ್ಬಿಣದ ರಾಡ್ ತಂದು ಮಲ್ಲಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಕಳೆದ ಆಗಸ್ಟ್​ 3ರಂದು ನಡೆದಿದ್ದ ಘಟನೆ ಇದಾಗಿದ್ದು, ಈಗ ವಿಡಿಯೋ ವೈರಲ್ ಆಗಿದೆ. ಗಾಯಾಳು ಮಲ್ಲಪ್ಪಗೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆಗೈದ ಪ್ರಕರಣ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.
Published by:Thara Kemmara
First published: