ಕೊಪ್ಪಳ: ಅಯೋಧ್ಯೆಯಲ್ಲಿ ಮರ್ಯಾದಾ ಪುರಷೋತ್ತಮ ಶ್ರೀರಾಮನ ಮಂದಿರ (Ayodhya Temple) ನಿರ್ಮಾಣವಾಗುತ್ತಿದೆ. ಈ ಮಧ್ಯೆ ರಾಮನ ಭಂಟ ಹನುಮನ (God Hanuman) ಜನ್ಮ ಸ್ಥಳವು ಸಹ ಈಗ ಅಭಿವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಅಂಜನಾದ್ರಿ (Anjanadri) ಮಾಸ್ಟರ್ ಪ್ಲಾಸ್ ಸಿದ್ದವಾಗುತ್ತಿದೆ. ರಾಜ್ಯ ಸರಕಾರದಿಂದಲೂ ಅಂಜನಾದ್ರಿ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿದೆ, ಇದಕ್ಕೆ ಹನುಮ ಭಕ್ತರಲ್ಲಿ ಹರ್ಷ ಮೂಡಿಸಿದೆ.ಕರುನಾಡಿನ ಇತಿಹಾಸದಲ್ಲಿ " ಜಲಧಿನೂ ಜೀಗಿದ ಹನುಮನೂದಿಸಿದ ನಾಡು" ಎಂದು ಹಾಡಿ ಹೊಗಳಿದ್ದಾರೆ. ರಾಮಾಯಣದ ಕಿಷ್ಕಾಂದಾ ಎಂದು ಖ್ಯಾತಿ ಹೊಂದಿರುವ ಹಂಪಿ ಸುತ್ತ ಮುತ್ತಲಿನ ಪ್ರದೇಶವಾಗಿದೆ.
ಮೋದಿ ಪತ್ನಿ ಭೇಟಿ ಬಳಿಕ ಎಲ್ಲವೂ ಬದಲಾಯಿತು..
ಇದೇ ಸ್ಥಳದಲ್ಲಿ ವಿಶ್ವದಲ್ಲಿ ಜಾತಿ ಧರ್ಮ, ಭಾಷೆಯ ಬೇಧವಿಲ್ಲದೆ ಪೂಜಿಸುವ ದೇವರಾಗಿರುವ ರಾಮ ಭಂಟ ಹನುಮನ ಜನ್ಮ ಸ್ಥಳವಿದೆ, ಇತ್ತೀಚಿಗೆ ತಿರುಪತಿಯ ತಿರುಮಲ ದೇವಸ್ಥಾನದಿಂದ ಹನುಮನ ಜನ್ಮ ಸ್ಥಳ ತಿರುಪತಿಯ ಬಳಿ ಎಂದು ವಾದಿಸಿದ್ದರೂ ಬಲವಾದ ಸಾಕ್ಷಿಗಳು ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳವೆಂಬ ವಾದ ಮಂಡಿಸಿದ್ದಾರೆ, ತಿರುಪತಿ ತಿರುಮಲ ದೇವಸ್ಥಾನವನ್ನು ಲೆಕ್ಕಿಸದೆ ಭಕ್ತರು ಸಾಗರೋಪಾದಾಯಿಯಲ್ಲಿ ಈಗ ಅಂಜನಾದ್ರಿಗೆ ಬರುತ್ರಿದ್ದಾರೆ, ಅಂಜನಾದ್ರಿಯು ಈಗ ಹನುಮ ಭಕ್ತರಿಂದ ನಿತ್ಯ ಜಾತ್ರೆಯಂತೆ ಇವರು ಸ್ಥಳವಾಗಿದೆ. ಅಂಜನಾದ್ರಿಯು ಕಳೆದ ಒಂದು ದಶಕದ ಹಿಂದೆ ಅಷ್ಟಾಗಿ ಪ್ರಚಾರವಿರಲಿಲ್ಲ. ಆದರೆ ಉತ್ತರ ಭಾರತೀಯರು ಹನುಮನ ಜನ್ಮ ಸ್ಥಳವೆಂದು ಭೇಟಿ ಕೊಡುತ್ತಿದ್ದರು. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋಧಾ ಬೆನ್ ಭೇಟಿ ನೀಡಿದ ನಂತರ ಅಂಜನಾದ್ರಿಯ ಸ್ವರೂಪ ಬದಲಾಗಿದೆ.
ಇದನ್ನೂ ಓದಿ: Badami Banashankari : ಕೋವಿಡ್ ಕರಿನೆರಳು: ಐತಿಹಾಸಿಕ ಬಾದಾಮಿ ಬನಶಂಕರಿ ಜಾತ್ರೆ ರದ್ದು
ಸಿಎಂರಿಂದಲೂ ಅಭಿವೃದ್ಧಿಯ ಭರವಸೆ
ಈಗ ಅಂಜನಾದ್ರಿಯು ರಾಜ್ಯ ಹೊರರಾಜ್ಯದಿಂದ ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹನುಮನ ದರ್ಶನ ಪಡೆಯುತ್ತಾರೆ. ಒಂದು ಕಡೆ ಹನುಮನ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿರುವದರಿಂದ ಇಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಾಂತಾಗಿದೆ, ಇನ್ನೊಂದು ಕಡೆ ಅಂಜನಾದ್ರಿಯು ಹಿಂದುಗಳ ಶಕ್ತಿ ಕೇಂದ್ರವಾಗಿದೆಈ ಮಧ್ಯೆ ಅಂಜನಾದ್ರಿ ಅಭಿವೃದ್ದಿಗಾಗಿ ರಾಜ್ಯ ಸರಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ, ಕೇಂದ್ರ ಸರಕಾರವು ಸಹ ರಾಮ ಸರ್ಕ್ಯೂಟ್ ಯೋಜನೆಯಲ್ಲಿ ಅಂಜನಾದ್ರಿಯನ್ನು ಸೇರಿಸಿಕೊಂಡಿದೆ, ಈ ಮಧ್ಯೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ದಿನಗಳಲ್ಲಿ ಅಂಜನಾದ್ರಿಯನ್ನು ಅಯೋಧ್ಯೆಯ ಶ್ರೀರಾಮ ಮಂದಿರದಂತೆ ಅಭಿವೃದ್ದಿ ಪಡಿಸುವುದಾಗಿ ಹೇಳಿದ್ದಾರೆ.
ಜನವರಿ 19 ರಂದು ಸಿಎಂ ಭೇಟಿ
ಇದರಿಂದಾಗಿ ಅಂಜನಾದ್ರಿಯು ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಹೊಂದಲಿದೆ.ಹಿಂದುಗಳ ಆರಾದ್ಯ ದೇವರಾಗಿರುವ ಹನುಮನ ಜನ್ಮ ಸ್ಥಳ ಅಭಿವೃದ್ದಿ ಪಡಿಸಲು ಮುಖ್ಯಮಂತ್ರಿಗಳ ಘೋಷಣೆಯಿಂದಾಗಿ ಭಕ್ತರು ಹಾಗು ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಈಗಿರುವ ಮಾಹಿತಿ ಪ್ರಕಾರ ಜನವರಿ 19 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿಗೆ ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ, ಆದರೆ ಈಗಿ ಕೊರೊನಾ ಹರಡುವದರಿಂದ ಸಿಎಂ ಕಾರ್ಯಕ್ರಮದ ರೂಪ ರೇಷಗಳು ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Covid: ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ, ಚಿಕ್ಕಲ್ಲೂರು ಜಾತ್ರೆ ರದ್ದು
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು, ಧಾರ್ಮಿಕ ಸ್ಥಳಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ