Bengaluru Crime: ಪತ್ನಿಯ ಮೇಲಿನ ಕೋಪಕ್ಕೆ ಕಳ್ಳತನದ ಹಾದಿ ಹಿಡಿದ ಭೂಪ

ಕ್ಯಾಬ್​ ಡ್ರೈವರ್​ ಆಗಿ ಕೆಲಸ ಆರಂಭಿಸಿದ. ಕಡಿಮೆ ಸಂಪಾದನೆ ಹಿನ್ನಲೆ  ಆತ ಸಂಪಾದನೆಗೆ ಹೆಂಡತಿ ಹೀಯಾಳಿಸಿದ್ದಾಳೆ. ಇದರಿಂದ ನೊಂದ ಡ್ರೈವರ್​ ವಿನೋದ್​​​ ತನ್ನ ಹಳೆಯ ​​ ಮನೆ ಕಳ್ಳತನ ಹಾದಿ ಹಿಡಿಯಲು ನಿರ್ಧರಿಸಿದ್ದ

ವಿನೋದ್​ ಕುಮಾರ್​​​

ವಿನೋದ್​ ಕುಮಾರ್​​​

  • Share this:
    ಬೆಂಗಳೂರು (ಏ. 22):  ಪ್ರೀತಿಸಿ ಮದುವೆಯಾಗಿದ್ದ (Love Marriage) ಹೆಂಡತಿ ತನ್ನ ಸಂಪಾದನೆ ಬಗ್ಗೆ ಕ್ಷುಲಕವಾಗಿ ಮಾತನಾಡುತ್ತಿದ್ದ ಹಿನ್ನಲೆ ಬೆಸತ್ತ ವ್ಯಕ್ತಿಯೊಬ್ಬ ಆಕೆ ಮೇಲಿನ ಕೋಪಕ್ಕೆ ಕಳ್ಳತನ (Theft)  ಹಾದಿ ಹಿಡಿದಿರುವ ವಿಚಿತ್ರ ಘಟನೆ ನಡೆದಿದೆ. ಬೆಂಗಳೂರಿನ 27 ಕಡೆ ಈತ ಮನೆ ಕಳ್ಳತನ ಮಾಡಿದ್ದು, ಆತನ ವಿರುದ್ಧ ಪೊಲೀಸರು (Bengaluru Police) ಪ್ರಕರಣ ದಾಖಲಿಸಿದ್ದಾರೆ.

    ಏನಿದು ಘಟನೆ?
    ಈ ಹಿಂದೆ ಹೈದರಾಬಾದ್ ನಲ್ಲಿ ಕಳ್ಳತನ ಮಾಡಿದ್ದ ವಿನೋದ್ ಕುಮಾರ್​​​​ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದು ಸೆರೆವಾಸ ಅನುಭವಿಸಿದ್ದ. ನಂತರ ಕಲ್ಕತ್ತಾಕ್ಕೆ ಹೋಗಿ ಅಲ್ಲಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ . ಈ ವೇಳೇ ಬಾಂಗ್ಲಾ ಯುವತಿ ಜೊತೆ ಪ್ರೇಮವಾಗಿ 2019ರಲ್ಲಿ  ಮದುವೆಯಾಗಿ  ಬಾಂಗ್ಲಾಗೆ ಹೋಗಿದ್ದ . ಅಕ್ರಮವಾಗಿ  ಬಾಂಗ್ಲಾ ನುಸುಳಿದ ಈತ ಅಲ್ಲಿ ಹೆಸರು ಬದಲಿಸಿಕೊಂಡು ಒಂದು ವರ್ಷ ವಾಸ ಮಾಡಿದ್ದ. ಈ ವೇಳೆ ಬಾಂಗ್ಲಾದೇಶದಲ್ಲಿ ಜೀವನ ಮಾಡಲು ಕಷ್ಟವಾಗತ್ತೆ ಎಂದು ಭಾರತಕ್ಕೆ ವಾಪಾಸ್ ಆಗಿದ್ದ.

    ಭಾರತಕ್ಕೆ ಮರಳಿದ ಬಳಿಕ ಮತ್ತೆ  ಕ್ಯಾಬ್​ ಡ್ರೈವರ್​ ಆಗಿ ಕೆಲಸ ಆರಂಭಿಸಿದ. ಕಡಿಮೆ ಸಂಪಾದನೆ ಹಿನ್ನಲೆ  ಆತ ಸಂಪಾದನೆಗೆ ಹೆಂಡತಿ ಹೀಯಾಳಿಸಿದ್ದಾಳೆ. ಈ ವೇಳೆ ನೊಂದ ಡ್ರೈವರ್​ ವಿನೋದ್​​​ ತನ್ನ ಹಳೆಯ ​​ ಮನೆ ಕಳ್ಳತನ ಹಾದಿ ಹಿಡಿಯಲು ನಿರ್ಧರಿಸಿದ್ದ. ಈ ಮೂಲಕ ಹಣ ದೋಚಿ ವಿದೇಶದಲ್ಲಿ ಸೆಟಲ್​ ಆಗುವ ಯೋಜನೆ ರೂಪಿಸಿದ್ದ.

    ಹೈದ್ರಾಬಾದ್​ ಬಳಿಕ ಬೆಂಗಳೂರಲ್ಲಿ ಕಳ್ಳತನಕ್ಕೆ ಸಂಚು

    ಈ ವೇಳೆ ತನ್ನ ಕಲ್ಕತ್ತಾ ಮೂಲದ ಸ್ನೇಹಿತ ರೋಹಿತ್ ಮಂಡಲ್ ಕೂಡ ಆತನ ಕಳ್ಳತನ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾನೆ. ಹೈದ್ರಾಬಾದ್​ನಲ್ಲಿ ಈಗಾಗಲೇ ಸೆರೆವಾಸ ಅನುಭವಿಸಿದ್ದ ರೋಹಿತ್ ಬೆಂಗಳೂರಿನಲ್ಲಿ ಕಳ್ಳತನ ಆರಂಭಿಸಿದ್ದಾರೆ. ಇದಕ್ಕಾಗಿ ಯೂಟ್ಯೂಬ್ ನಲ್ಲಿ ಕಳ್ಳತನ ಮಾಡುವುದು ಹೇಗೆ ಎಂದು ತಿಳಿದುಕೊಂಡು ಕಳ್ಳತನಕ್ಕೆ ಇಬ್ಬರು ಕೂಡ ಯೋಜನೆ ರೂಪಿಸಿ ಎರಡು ತಂಡಗಳಾಗಿ ಕಳ್ಳತನ ಮಾಡುತ್ತಿದ್ದರು.

    ಇದನ್ನು ಓದಿ: ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಹಿಜಾಬ್ ತೆಗೆಯಲು ಒಪ್ಪದ ಇಬ್ಬರು ವಿದ್ಯಾರ್ಥಿನಿಯರು

    ಹಗಲು ವೇಳೆ ಮನೆಗಳನ್ನ ಗುರುತಿಸಿ, ರಾತ್ರಿ ವೇಳೆ ಕಿಟಕಿ ಕಂಬಿಗಳನ್ನ ಮುರಿದು ಒಳ ಪ್ರವೇಶ ಮಾಡಿ ಕಳ್ಳತನ ಮಾಡುತ್ತಿದ್ದರು. ಇನ್ನು ಇವರಿಬ್ಬರು ಬೆಂಗಳೂರಿಗೆ ಬಂದು 27 ಕಡೆ ಕಳ್ಳತನ ಮಾಡಿದ್ದಾರೆ. ಸಂಜಯನಗರ ಠಾಣಾ ವ್ಯಾಪ್ತಿಯಲ್ಲೇ ಏಳು ಮನೆಗಳ್ಳತನ ಮಾಡಿದ್ದಾರೆ. ಕದ್ದ ಮೊಬೈಲ್ ಫೋನ್​ ಆಧಾರದ ಮೇಲೆಯೇ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 79 ಲಕ್ಷ ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳು, ದುಬಾರಿ ಬೆಲೆಯ ವಾಚ್ ಹಾಗೂ ಗಾಗಲ್ಸ್ ವಶಕ್ಕೆ ಪಡೆಯಲಾಗಿದೆ.

    ಇದನ್ನು ಓದಿ: Crime news: ಭೀಕರ ಅಪಘಾತ, ಮದುವೆ ಮನೆಯಿಂದ ಒಟ್ಟಿಗೇ ಮಸಣ ಸೇರಿದ 7 ಸ್ನೇಹಿತರು

    ಸಂಜಯ್​ನಗರದಲ್ಲಿ ಮತ್ತೊಬ್ಬ ಖತರ್ನಾಕ್​​ ಕಳ್ಳನ ಬಂಧನ

    ಸಂಜಯ್​​ನಗರದ ಅಪಾರ್ಟ್ಮೆಂಟ್​ನಲ್ಲಿ ಕೆಲಸಗಾರರು, ಅಡುಗೆ ಮಾಡುವವರ ಸೋಗಿನಲ್ಲಿ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಸಾಯ್​ ರಾಜ್​ ಎಂಬ ಖತರ್ನಾಕ್​ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಾರು ವೇಷದಲ್ಲಿ ಅಪಾರ್ಟ್​ಮೆಂಟ್​​ಗೆ ನುಗ್ಗುತ್ತಿದ್ದ ಈತ ಯಾವ ಮನೆ ಖಾಲಿ ಇದೆ. ಯಾವ ಮನೆಯಲ್ಲಿ ಕಳ್ಳತನ ಮಾಡಬೇಕು ಎಂದು ಸಂಚು ರೂಪಿಸಿ, ಟೆರೆಸ್​ ಸೇರುತ್ತಿದ್ದ. ಕತ್ತಲಾದ ಬಳಿಕ ಟೆರೆಸ್ ನಿಂದ ಬಂದು ಪ್ಲಾಟ್ ಗಳಲ್ಲಿ ಬಾಗಿಲ ಬಳಿ ಇರುವ ಕಿಟಕಿ ಮೂಲಕ ಕೈ ಹಾಕಿ ಲಾಕ್ ಓಪನ್ ಮಾಡಿ ಮನೆ ದೋಚುತ್ತಿದ್ದ. ಕಳವು ಮಾಡಿದ ಬಳಿಕ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರ ಬರುವುದನ್ನ ಕಂಡು ಅವ್ರ ಜೊತೆಯಲ್ಲೆ ನಾಪತ್ತೆ ಆಗುತ್ತಿದ್ದ. ಈತನ ವಿರುದ್ದ ಸದ್ಯ  12 ಕೇಸ್ ಪತ್ತೆ ಆಗಿದ್ದು, 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ
    Published by:Seema R
    First published: