Kolara: ಮುಳಬಾಗಿಲು ನಗರಸಭೆ ಸದಸ್ಯನ ಕೊಲೆ ಕೇಸ್, ಆರೋಪಿ ಬಾಲಾಜಿ ಸಿಂಗ್ ಮೇಲೆ ಫೈರಿಂಗ್

ಕೋಲಾರದ ಮುಳಬಾಗಿಲು ನಗರದಲ್ಲಿ ಜೂನ್ 7 ರಂದು ಬೆಳಗ್ಗೆ ನಡೆದಿದ್ದ ಮಾರಕಾಸ್ತ್ರಗಳ ದಾಳಿಯಲ್ಲಿ ಸಿಲುಕಿದ್ದ ನಗರಸಭೆ ಸದಸ್ಯ ಜಗನ್ಮೋಹನ್ ರೆಡ್ಡಿ ಭೀಕರವಾಗಿ ಕೊಲೆಯಾಗಿದ್ದರು. ವಿವಿಧ ರಾಜ್ಯಗಳಲ್ಲಿ ಆರೋಪಿಗಳು ಸಂಚರಿಸಿದ್ದ, ಸುಪಾರಿ ಪಡೆದು ಕೊಲೆ ಮಾಡಿದ್ದ ಓರ್ವ ಆರೋಪಿಯನ್ನ ಪೊಲೀಸರು ಬಂದಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಜೂ.7): ಜೂ. 7ರಂದು ಕೋಲಾರದ  ಮುಳಬಾಗಿಲು ನಗರದಲ್ಲಿ ಮುತ್ಯಾಲಪೇಟೆ ರಸ್ತೆಯಲ್ಲಿನ ಗಂಗಮ್ಮ ದೇಗುಲದ ಎದುರೇ,  ನಗರಸಭೆ ಸದಸ್ಯ ಹಾಗು ಮಾಜಿ ಶಾಸಕ (Former MLA) ಕೊತ್ತೂರು ಮಂಜುನಾಥ್ ಬಲಗೈ ಬಂಟ  ಜಗನ್ಮೋಹನ್ ರೆಡ್ಡಿಯನ್ನ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ಕೇಸ್ ಪತ್ತೆ ಹೆಚ್ಚಲು ನಾಲ್ಕು ವಿಶೇಷ ತಂಡವನ್ನ  ಎಸ್ಪಿ ದೇವರಾಜ್ (SP Rajiv) ರಚಿಸಿದ್ದರು. ಕಳೆದ 17 ದಿನಗಳಿಂದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಮುಳಬಾಗಿಲು ಪೊಲೀಸರು (Police), ಕೊನೆಗೂ ಹಂತಕರ ತಂಡದ ಓರ್ವನನ್ನ ಪತ್ತೆ ಹಚ್ಚುವಲ್ಲಿ ಯಶಸ್ಚಿಯಾಗಿದ್ದಾರೆ, ಕೊಲೆಯ  ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಾಲಾಜಿ ಸಿಂಗ್  ಅಲಿಯಾಸ್ ಗಬ್ಬರ್ ಸಿಂಗ್  ಎನ್ನುವ ಸುಪಾರಿ ಹಂತಕನನ್ನ ಪೊಲೀಸರು (Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ  ಮಧ್ಯಾಹ್ನ  ಆರೋಪಿ ಬಾಲಾಜಿ ಸಿಂಗ್ ನನ್ನ ಮೈಸೂರಿನಲ್ಲಿ (Mysuru) ಬಂದಿಸಿದ, ಮುಳಬಾಗಿಲು ನಗರ ಠಾಣೆ ಪೊಲೀಸರು, ಬೆಳಗ್ಗೆ ಕೋಲಾರಕ್ಕೆ ಕರೆ ತರುವ ಮಾರ್ಗ ಮಧ್ಯೆ, ಚೆಲುವನಹಳ್ಳಿ ಅರಣ್ಯ ಪ್ರದೇಶ ಬಳಿ, ಆರೋಪಿ ಬಾಲಾಜಿ ಸಿಂಗ್ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ.

ಕುಸಿದು ಬಿದ್ದ  ಬಾಲಾಜಿ ಸಿಂಗ್

ಅದೇ ಸೋಗಿನಲ್ಲಿ ಪರಾರಿಗೆ ಯತ್ನಿಸಿದ್ದು, ಈ ವೇಳೆ ವಿನಾಯಕ್ ಎನ್ನುವ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ಸೆರೆ ಹಿಡಿಯಲು ಕಾಲಿಗೆ ಒಂದು ಸುತ್ತು ಗುಂಡು ಹೊಡೆದ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ , ಕುಸಿದು ಬಿದ್ದ  ಬಾಲಾಜಿ ಸಿಂಗ್​ನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸ್ತಿದ್ದಾರೆ.

ಹಳೇ ದ್ವೇಷಕ್ಕೆ ಸುಪಾರಿ

ಆಸ್ಪತ್ರೆಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್,  ಎಸ್ಪಿ ದೇವರಾಜ್ ಹಾಗು ಮುಳಬಾಗಿಲು ಡಿವೈಎಸ್ಪಿ ಜೈ ಶಂಕರ್ ಭೇಟಿ ನೀಡಿದ್ದು,  ಹಳೇ ದ್ವೇಷಕ್ಕೆ ಸುಪಾರಿ ಪಡೆದು, ನಗರಸಭೆ ಸದಸ್ಯ ಜಗನ್ಮೋಹನ್ ರೆಡ್ಡಿ ಕೊಲೆ ಮಾಡಿರೊದಾಗಿ, ಆರೋಪಿ ಬಾಲಾಜಿ ಸಿಂಗ್ ಹೇಳಿದ್ದಾನೆ.

ಇದನ್ನೂ ಓದಿ: Hubballi: ಆಟೋ ಕಿಂಗ್ ಕೊಲೆ; ತಂಗಿಯನ್ನ ಚುಡಾಯಿಸಿದ್ದಕ್ಕೆ ಎತ್ತಿ ಬಿಟ್ಟಿವಿ ಅಂತ ಅಂದ್ರು ಸೋದರರು

ತಾಯಿಗೆ ನಿಂದನೆ, ದೌರ್ಜನ್ಯ ಕೊಲೆಗೆ ಕಾರಣವಾ ? 

ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ ಮಕ್ಕಳಾದ  ಜಗನ್ನಾಥ್, ಧನುಷ್ ಹಾಗು ಮೃತ ಜಗನ್ಮೋಹನ್ ರೆಡ್ಡಿ ಮಧ್ಯೆಯ ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ, ಜಗನ್ಮೋಹನ್ ರೆಡ್ಡಿ ಕೊಲೆಗೆ,  ಧನುಷ್  ಹಾಗು ಜಗನ್ನಾಥ್ ಪ್ಲಾನ್ ಮಾಡ್ತಿದ್ದ ವೇಳೆ, ಜೊತೆಗೂಡಿದ ಬಾಲಾಜಿ ಸಿಂಗ್  ಸುಪಾರಿ ಪಡೆದು ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿಗಳು ಗೋವಾ, ಮಹಾರಾಷ್ಟ್ರ, ಆಂಧ್ರದಲ್ಲಿ ಸಂಚರಿಸಿದ್ದು, ಮೈಸೂರಿನಲ್ಲಿ ಇದ್ದ ಖಚಿತ ಮಾಹಿತಿ ಮೇರೆಗೆ, ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ತಾಯಿ ಸಾವಿತ್ರಮ್ಮರಿಗೆ ವೈಯಕ್ತಿಕವಾಗಿ ನಿಂದನೆ,  ಜಗನ್ನಾಥ್ ಹಾಗು ಧನುಷ್ ಮೇಲೆ ಸುಳ್ಳು ಆರೋಪ ಹೊರಸಿದ್ದಾರೆಂದು ಜಗನ್ಮೋಹನ್ ರೆಡ್ಡಿ  ವಿರುದ್ದ ಹಗೆ ಸಾಧಿಸಿದ್ದರು ಎನ್ನಲಾಗಿದೆ,  ಅಷ್ಟೇ ಅಲ್ಲದೆ ತಾಯಿ ಸಾವಿತ್ರಮ್ಮ ರಾಜಕೀಯ ಕಾರಣಕ್ಕಾಗಿ ಜಗನ್ಮೋಹನ್ ರೆಡ್ಡಿ ನಿಂದನೆ ಮಾಡಿದ್ದನ್ನು, ಗಂಭೀರವಾಗಿ ಪರಿಗಣಿಸಿದ  ಜಗನ್ನಾಥ್ ಹಾಗು ಧನುಷ್ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ.

ಓದಿನ್ನೂ ಓದಿ: ಆ್ಯಂಬುಲೆನ್ಸ್ ಬರಲಿಲ್ಲ, ವೈದ್ಯರೂ ಇಲ್ಲ! ನರಳಾಡಿದ ಬಾಣಂತಿ

ಇನ್ನು  ಆರೋಪಿ ಬಾಲಾಜಿ ಸಿಂಗ್, ಈ ಹಿಂದೆ  ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿದ್ದಾನೆ,  ಸುಪಾರಿ ಹಂತಕನ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ ಡಿ ದೇವರಾಜ್, ಹಳೇ ದ್ವೇಷವೇ ಕೊಲೆಗೆ ಕಾರಣವೆಂದು ಮಾಹಿತಿ ನೀಡಿದ್ದಾರೆ. ಇನ್ನು ಕೊಲೆಗೆ ಸುಪಾರಿ ನೀಡಿದ ಜಗನ್ನಾಥ್ ಹಾಗು ಸಹೋದರ ಧನುಷ್ ಪತ್ತೆಗಾಗಿ ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿದ್ದಾರೆ.
Published by:Divya D
First published: