HOME » NEWS » State » KOLARA FARMERS GAINING INCOME FROM TAMARIND TREE RRK SESR

ಅಪ್ಪ ನೆಟ್ಟ ಹುಣಸೆ ಮರದ ಹುಳಿ ಮಗನ ಬಾಳಿಗೆ ಸಿಹಿ; ಕೋಲಾರದ ರೈತನ ಯಶೋಗಾಥೆ

30 ವರ್ಷದ ಹಿಂದೆ ಯಾವುದೇ ಲಾಭಾದ ಉದ್ದೇಶವಿಲ್ಲದೇ ಮಾಡಿದ ಕೃಷಿ ಕಾಯ ಈಗ  ಲಕ್ಷಾಂತರ ರೂ ಆದಾಯ ತಂದು ಕೊಡುತ್ತಿದೆ

news18-kannada
Updated:February 27, 2021, 2:39 PM IST
ಅಪ್ಪ ನೆಟ್ಟ ಹುಣಸೆ ಮರದ ಹುಳಿ ಮಗನ ಬಾಳಿಗೆ ಸಿಹಿ; ಕೋಲಾರದ ರೈತನ ಯಶೋಗಾಥೆ
ಹುಣಸೆ ಕೃಷಿಯಿಂದ ಲಾಭಾ ಪಡೆಯುತ್ತಿರುವ ಕುಟುಂಬ
  • Share this:
ಕೋಲಾರ (ಫೆ. 26): ಕೃಷಿಯಲ್ಲಿ ಶೀಘ್ರವಾಗಿ ಲಾಭಾದಾಯಕ ಬೆಳೆಗಳತ್ತ ಜನರು ಚಿಂತಿಸುವುದು ಸಾಮಾನ್ಯ. ಇದೇ ಹಿನ್ನಲೆ ದೀರ್ಘ ಕಾಲದ ಫಸಲಿನತ್ತ ವಾಲುವುದು ಕಡಿಮೆ. ಆದರೆ, ಹಿಂದಿನ ತಲೆ ಮಾರು ಆಗಲ್ಲ. ಕಡಿಮೆ ಅವಧಿ ಬೆಳೆಗಿಂತ ದೀರ್ಘಾವಧಿ ಬೆಳೆಗಳತ್ತ ಗಮನಹರಿಸುವ ಮೂಲಕ ತಮ್ಮ ತಲೆ ಮಾರುಗಳು ನೆಮ್ಮದಿಯ ಜೀವನ ನಡೆಸಲಿ ಎಂಬ ಉದ್ದೇಶ ಹೊಂದಿರುತ್ತಾರೆ. ಇಲ್ಲೊಂದು ಕುಟುಂಬ ಕೂಡ ಈಗ ತಮ್ಮ ತಂದೆ ನೆಟ್ಟ ಮರದಿಂದ ಬದುಕು ಹಸನಾಗಿಸಿಕೊಂಡಿದ್ದಾರೆ.  30 ವರ್ಷದ ಹಿಂದೆ ಯಾವುದೇ ಲಾಭಾದ ಉದ್ದೇಶವಿಲ್ಲದೇ ಮಾಡಿದ ಕೃಷಿ ಕಾಯ ಈಗ  ಲಕ್ಷಾಂತರ ರೂ ಆದಾಯ ತಂದು ಕೊಡುತ್ತಿದೆ. ಕನಸಿನಲ್ಲಿಯೂ ಏಣಿಸದಂತೆ ಹುಣಸೆ ಉಳಿ ಈಗ ಈ ರೈತರ ಜೀವನ ಸಿಹಿ ಮಾಡಿದೆ.  ತಾಲೂಕಿನ ಉರಟಿ ಅಗ್ರಹಾರ  ಗ್ರಾಮದ ನಿವಾಸಿ ವೀರಭದ್ರರೆಡ್ಡಿ30 ವರ್ಷಗಳ ಹಿಂದೆ 2 ಎಕರೆಯಲ್ಲಿ 42 ಹುಣಸೆ ಗಿಡ ಗಳನ್ನು ನೆಟ್ಟಿದ್ದರು. ಅವುಗಳು ಈಗ ಫಲವತ್ತಾಗಿ ಬೆಳೆದು ಲಕ್ಷ ಲಕ್ಷ ಆದಾಯ ತಂದು ಕೊಡುತ್ತಿವೆ. ತಂದೆಯ ದೂರದೃಷ್ಟಿ ಆಲೋಚನೆಯಿಂದ ವೀರಭದ್ರ ರೆಡ್ಡಿ ಕುಟುಂಬ ಈಗ ನೆಮ್ಮದಿಯ ಬದುಕು ಕಾಣುತ್ತಿದೆ.

ಪೋಷಕರು ನೆಟ್ಟಿದ್ದ ಗಿಡಗಳು

ರೈತ ವೀರಭದ್ರಪ್ಪ ಅವರ ತಂದೆ ನೆಟ್ಟಿದ ಗಿಡಗಳು 35 ವರ್ಷ ವಯಸ್ಸಿನ ಮರಗಳಾಗಿದ್ದು, ಕಳೆದ 10 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಫಸಲು ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 30 ರಿಂದ 50 ರೂಪಾಯಿ ಬೆಲೆಯಿದ್ದು, ಜಿಲ್ಲೆಯ ಚಿಂತಾಮಣಿ ಮತ್ತು ಆಂಧ್ರದ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದ್ದಾರೆ. ಕಟಾವು ಮುಗಿಯುವ ವೇಳೆಗೆ ಬೆಲೆ ಮತ್ತಷ್ಟು ಏರಲಿದೆ ಎನ್ನುವ ವಿಶ್ವಾಸವನ್ನು  ರೈತರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರೈತ ವೀರಭದ್ರಪ್ಪ, ಎಲ್ಲಾ ತಂದೆ ತಾಯಿಯರು ಹೀಗೆ ಮುಂದೆ ಬದುಕಲು ನೆರವು ಮಾಡಿಕೊಟ್ಟಲ್ಲಿ ಅದಕ್ಕಿಂತ ಹೆಚ್ಚೇನು ಬೇಕಿಲ್ಲ ಎಂದು ತಂದೆ ತಾಯಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನು ಓದಿ: ಸತ್ತವರ ಹೆಸರಿನಲ್ಲಿ ಪಡಿತರ ಅಕ್ಕಿ; ಸರ್ಕಾರಕ್ಕೆ ವಂಚಿಸಿದ ವಿತರಕ

ಹುಣಸೆ ಮರಗಳಿಗೆ ವಾರ್ಷಿಕವಾಗಿ ಬೀಳುವ ಮಳೆಯ ನೀರೇ ಸಾಕಾಗಿದ್ದು, ನೀರಿನ ಅಭಾವವೂ ಇವರನ್ನ ಕಾಡುವುದಿಲ್ಲ. ಮಳೆ ಕಡಿಮೆ ಪ್ರದೇಶದಲ್ಲಿ ಬೆಳೆಯಲು ಇದು ಸೂಕ್ತ ಬೆಳೆ.  ಇನ್ನು ಜೀವನಾಂಶಕ್ಕೆ ಅಕ್ಕ ಪಕ್ಕದ ಖಾಲಿ ಪ್ರದೇಶದಲ್ಲಿ ರಾಗಿ, ಹುರಳಿ ಬೆಳೆದುಕೊಂಡು, ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ವೀರಭದ್ರಪ್ಪ ಮತ್ತು ಕುಟುಂಬ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕ್ಕೆ ಉತ್ತಮವಾದ  ಹುಣಸೆ ಹಣ್ಣಿಗೆ ಬೇಡಿಕೆಯಂತೂ ಕಡಿಮೆಯಾಗಲ್ಲ. ಆದರೆ, ಮರಗಳನ್ನ ಗಣನೀಯವಾಗಿ ಕಡಿಯುವ ಸಂಖ್ಯೆಯು ಹೆಚ್ಚುತ್ತಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದೆ.

ಒಟ್ಟಿನಲ್ಲಿ ತಮ್ಮ ಪೋಷಕರಿಗೆ ತೊಟಗಾರಿಕಾ ಬೆಳೆಗಳ ಮೇಲಿದ್ದ ಪ್ರೀತಿಯಿಂದ 2 ಎಕರೆಯ ಪ್ರದೇಶದಲ್ಲಿ ನೆಟ್ಟಿದ್ದ ಹುಣಸೆ ಗಿಡಗಳು ಈಗ ಮರವಾಗಿ ಬೆಳೆದಿದೆ, ಅಂದು ತಂದೆಯವರು ನೆಟ್ಟಿದ್ದ ಗಿಡಗಳಿಗೆ ನೀರು ಹಾಕಿ ಪೋಷಿಸಿದ್ದ ವೀರಭದ್ರಪ್ಪ ಇಂದು  ಕುಟುಂಬದ ಸಮೇತ ಮರಗಳನ್ನ ಪೋಷಣೆ ಮಾಡುತ್ತಿದ್ದಾರೆ. ಕಟಾವು ವೇಳೆಯಲ್ಲಿ ಕಾಯಿ ಶೇಖರಿಸುವುದು, ಒಣಗಿಸಿ ಮೂಟೆಗಳಲ್ಲಿ ತುಂಬುವುದರಲ್ಲಿ ಕುಟುಂಬವೇ ತೊಡಗಿಸಿಕೊಂಡಿದೆ, ಕೃಷಿಯಲ್ಲಿ ಧೀರ್ಘಕಾಲ ಫಸಲು ನೀಡುವ ಮರಗಳನ್ನ ನೆಡುವುದರಿಂದ, ತಲೆ ತಲಾಂತರದವರು ಧೈರ್ಯದಿಂದ ಜೀವನ ನಡೆಸಬಹುದು ಎಂಬ ನಮ್ಮ ಹಿರಿಯ ರೈತರ ಸಲಹೆಗೆ ಇದೊಂದು ಉತ್ತಮ ಉದಾಹರಣೆ ಎಂದರು ತಪ್ಪಾಗಲಾರದು.
Published by: Seema R
First published: February 27, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories