• Home
  • »
  • News
  • »
  • state
  • »
  • Kolara: ಸೋನಿಯಾ ED ವಿಚಾರಣೆ ವಿರುದ್ಧದ ಪ್ರತಿಭಟನೆಯಲ್ಲೂ ಒಗ್ಗಟ್ಟಿಲ್ಲ, ಕಾಂಗ್ರೆಸ್ ಗುಂಪುಗಾರಿಕೆ!

Kolara: ಸೋನಿಯಾ ED ವಿಚಾರಣೆ ವಿರುದ್ಧದ ಪ್ರತಿಭಟನೆಯಲ್ಲೂ ಒಗ್ಗಟ್ಟಿಲ್ಲ, ಕಾಂಗ್ರೆಸ್ ಗುಂಪುಗಾರಿಕೆ!

ರಮೇಶ್ ಕುಮಾರ್

ರಮೇಶ್ ಕುಮಾರ್

ಕಳೆದ 15 ವರ್ಷದಿಂದ ರಮೇಶ್ ಕುಮಾರ್ ಹಾಗು ಕೆಎಚ್ ಮುನಿಯಪ್ಪ ಮಧ್ಯೆಯ ಸಂಬಂದ ಹಳಸಿದ್ದು, ಜಿಲ್ಲೆಯಲ್ಲಿ ಇಬ್ಬರು ನಾಯಕರ ಪೈಪೋಟಿಯಿಂದ ಇದೀಗ ಶಾಸಕರ ಮಧ್ಯೆ  ಗುಂಪುಗಾರಿಕೆ ಆರಂಭವಾಗಿದ್ದು, ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ ಮಾತು ದೂರದ ಬೆಟ್ಟವಾಗಿದೆ.

  • Share this:

ಕೋಲಾರ(ಜು.23): ಎಐಸಿಸಿ ಅಧ್ಯಕ್ಷ್ಯೆ ಸೋನಿಯಾ ಗಾಂಧಿ (Sonia Gandhi) ಇ.ಡಿ ವಿಚಾರಣೆ ಖಂಡಿಸಿ ಕೋಲಾರದಲ್ಲಿ (Kolara)  ಕಾಂಗ್ರೆಸ್  ವತಿಯಿಂದ ಬೃಹತ್ ಪ್ರತಿಭಟನೆ (Protest) ಹಮ್ಮಿಕೊಳ್ಳಲಾಗಿತ್ತು, ಕೋಲಾರ ನಗರದ ಗಾಂಧೀವನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮಾಜಿ ಸಚಿವ ಟಿ‌.ಬಿ‌ ಜಯಚಂದ್ರ, ಕೋಲಾರ ಕೈ ಉಸ್ತುವಾರಿ MLC ನಾರಾಯಣಸ್ವಾಮಿ, ಎಲ್.ಎ ಮಂಜುನಾಥ್,  ಕೆಎಚ್ ಮುನಿಯಪ್ಪ, ಜಯದೇವ್ ಭಾಗಿಯಾಗಿದ್ದರು. ಇನ್ನು ಕಾಂಗ್ರೆಸ್ ಪ್ರತಿಭಟನೆಯಲ್ಲಿ ಗುಂಪುಗಾರಿಕೆ ಪ್ರದರ್ಶನವೂ  ಜೋರಾಗಿತ್ತು. ಗಾಂಧೀವನ ಹೊರಗೆ ಪ್ರತ್ಯೇಕವಾಗಿ  ರಮೇಶ್ ಕುಮಾರ್ ಅಂಡ್ ಟೀಂ ಪ್ರತಿಭಟನೆಯಲ್ಲಿ ಕುಳಿತಿದ್ದರು. ರಮೇಶ್ ಕುಮಾರ್ ಜೊತೆಗೆ ಶಾಸಕರಾದ ನಂಜೇಗೌಡ, ನಾರಾಯಣಸ್ವಾಮಿ, ಅನಿಲ್ ಕುಮಾರ್, ನಸೀರ್ ಅಹಮದ್, ಜೆಡಿಎಸ್ ಉಚ್ಚಾಟಿತ ಶಾಸಕ ಶ್ರೀನಿವಾಸಗೌಡ,  ಕೊತ್ತೂರು ಮಂಜುನಾಥ್ ಸಾಥ್ ನೀಡಿದರು.


ಕಾಂಗ್ರೆಸ್ ಪ್ರತಿಭಟನೆ ವೇಳೆ ಎರಡು ಕಡೆಯ ಗುಂಪಿನಿಂದ ಪ್ರತ್ಯೇಕವಾಗಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಹಾಕಿದರು. ಕೆಎಚ್ ಮುನಿಯಪ್ಪ ಮಾತನಾಡುವ ವೇಳೆಯಲ್ಲಿ ರಮೇಶ್ ಕುಮಾರ್ ಬೆಂಬಲಿಗರು ಘೋಷಣೆಗಳನ್ನ ಹಾಕಿದ್ದು ಕಂಡುಬಂತು. ಘೋಷಣೆಗಳ ಕೂಗಾಟದ ಮದ್ಯೆಯೇ ಮುನಿಯಪ್ಪ ತಮ್ನ ಭಾಷಣವನ್ನು ಮುಂದುವರೆಸಿದರು.


ಇನ್ನು ಮುನಿಯಪ್ಪ ಮಾತನಾಡುವಾಗ  ಪಾನಮತ್ತ ವ್ಯಕ್ತಿಯು ಭಾಷಣಕ್ಕೆ ಅಡ್ಡಿಪಡಿಸುವ ಯತ್ನ ನಡೆಯಿತು. ಕೂಡಲೇ ಪಕ್ಕಕ್ಕೆ ಎಳೆದೊಯ್ದು ಪೊಲೀಸರು  ವಾಪಾಸ್ ಕಳಿಸಿದರು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೆಎಚ್ ಮುನಿಯಪ್ಪ ಬಣ ಹಾಗು ರಮೇಶ್ ಕುಮಾರ್ ಬಣದ ಶಕ್ತಿ ಪ್ರದರ್ಶನ ಕಂಡು, ಮಾಜಿ ಸಚಿವ ಟಿ.ಬಿ ಜಯಚಂದ್ರ ಹಾಗು ಕೈ ಜಿಲ್ಲಾ ಉಸ್ತುವಾರಿ ಎಮ್.ಎಲ್.ಸಿ ನಾರಾಯಣಸ್ವಾಮಿ ಎರಡು ಗುಂಪಿನ ನಾಯಕರನ್ನ ಸಮಾಲಿಸುವಲ್ಲಿ ಹೈರಾಣಾದರು.


ನಮ್ಮಲ್ಲಿ ಭಿನ್ನಮತ ಇಲ್ಲವೆಂದ ಉಭಯ ನಾಯಕರು


ಕೆಎಚ್ ಮುನಿಯಪ್ಪ ಇದ್ದ ಗಾಂಧೀವನದ ವೇದಿಕೆಗೆ ಆಗಮಿಸಿ ಭಾಷಣ ಮಾಡುವಂತೆ ಕೈ ಉಸ್ತುವಾರಿ ನಾರಾಯಣಸ್ವಾಮಿ ಮನವಿ ಮಾಡಿದರು, ಇದಕ್ಕೆ ಸೊಪ್ಪು ಹಾಕದ ರಮೇಶ್ ಕುಮಾರ್,  ಗಾಂಧೀವನ ಎದುರಿನ ವೃತ್ತದಲ್ಲೆ ಕುಳಿತು ಭಾಷಣ ಮಾಡಿದರು.


ಪ್ರತ್ಯೇಕ ಪ್ರತಿಭಟನೆ ಮಾತನಾಡಿದ ರಮೇಶ್ ಕುಮಾರ್, ನಾವೆಲ್ಲರು ಕಾಂಗ್ರೆಸ್, ಸೋನಿಯಾ ಗಾಂಧಿ ಪರ ಎಲ್ಲರು ಇದೀವಿ, ಯಾರು ಮೋದಿ ಪರವಾಗಿ ಘೋಷಣೆ ಕೂಗಿಲ್ಲ, 2 ಅಲ್ಲ 22 ಗುಂಪಾದರು ನಾವೆಲ್ಲ ಕಾಂಗ್ರೆಸ್ ಎಂದರು, ಭಿನ್ನಮತ ಬಗ್ಗೆ ಪ್ರತಿಕ್ರಿಯೆ ನೀಡಲು ಕೆಎಚ್ ಮುನಿಯಪ್ಪ ನಿರಾಕರಿಸಿದರು.


ಪ್ರಧಾನಿ ಮೋದಿ ವಿರುದ್ದ ರಮೇಶ್ ಕುಮಾರ್ ವಾಗ್ದಾಳಿ


ಪ್ರತಿಭಟನಾ ಭಾಷಣದಲ್ಲಿ ಮಾತನಾಡಿದ ರಮೇಶ್ ಕುಮಾರ್ ಮಾತಿನುದ್ದಕ್ಕು ಪ್ರಧಾನಿ ಮೋದಿ,  ಆರ್.ಎಸ್.ಎಸ್, ಹಿಂದೂ ಮಹಾಸಭಾ, ಬಿಜೆಪಿ ವಿರುದ್ದ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು. ದೇಶದ  ಸ್ವಾತಂತ್ರ್ಯ ಕ್ಕಾಗಿ   ಹೋರಾಟದಲ್ಲಿ ಕಾಂಗ್ರೆಸ್ ಭಾಗಿಯಾಗಿದ್ದ ವೇಳೆ ಬಿಜೆಪಿ ಪೂರ್ವಿಕರು ಯಾರು ಇರಲಿಲ್ಲ, ಬಿಜೆಪಿಯವರು ಬ್ರಿಟೀಷರ ಬೂಟ್ ಪಾಲೀಷ್ ಮಾಡುತಿದ್ದರು, ದೇಶಕ್ಕಾಗಿ ಪ್ರಾಣ  ಕೊಟ್ಟಿದ್ದು ಕಾಂಗ್ರೆಸ್ ನಾಯಕರು,  ದೇಶದ ಆರ್ಥಿಕ ಸ್ತಿತಿ ಬಗ್ಗೆ ಇತ್ತೀಚೆಗೆ ಕೇಂದ್ರವನ್ನ ಸುಬ್ರಮಣ್ಯಂ ಸ್ವಾಮಿ ಟೀಕಿಸಿದ್ದಾರೆ.


ಇದನ್ನೂ ಓದಿ: School Students: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ


ಇಂದಿರಾಗಾಂಧಿ ರನ್ನ ಕೊಂದಾಗ, ಆ ರಕ್ತ ಭೂಮಿಯಲ್ಲಿ ಚೆಲ್ಲಿದೆ, ಬಿಜೆಪಿಯವರು ಯಾರು ದೇಶಕ್ಕಾಗಿ ರಕ್ತ ಚೆಲ್ಲಿದ್ದಾರೆ ಮೋದಿ ಹೇಳಲಿ ಎಂದರು. ರಾಜೀವ್ ಗಾಂಧಿ ಸಿನಿಮಾ ಹಿರೋ ನಂತಿದ್ದರು, ಅವರನ್ನು ಕೊಂದರು, ಮಹಾತ್ಮ  ಗಾಂಧೀಯನ್ನ ಕೊಂದಿದ್ದು ಗೂಡ್ಸೆ ಅವರು ಯಾರೆಂದು ಎಲ್ಲರಿಗು ತಿಳಿದಿರುವ ವಿಚಾರ ಎಂದರು.


ಮೋದಿಗೆ ಲೆಕ್ಕ ಬರಲ್ವಾ?


ನೋಟ್ ಬ್ಯಾನ್ ವಿಚಾರವಾಗಿ ದೇಶದ ಜನತೆಯ ದಿಕ್ಕು ತಪ್ಪಿಸಲಾಗಿದೆ. ಕಪ್ಪು ಹಣ ಎಷ್ಟು ತಂದಿದ್ದಾರೊ ಇನ್ನು ಮಾಹಿತಿಯಿಲ್ಲ,  ವಿದೇಶದಲ್ಲಿ ಕಾಂಗ್ರೆಸ್ ನವರು ಹಣ ಇಟ್ಟಿದ್ದಾರೆ ಎಂದಿದ್ದರು. ಹಾಗಾಗಿ ಈಗ  ಪ್ರಧಾನಿ ಮೋದಿ ಲೆಕ್ಕ ಕೊಡಲಿ,  ನಿನಗೆ ಲೆಕ್ಕ ಬರಲ್ವಾ ಮೂರ್ಖ ಎಂದು ಏಕವಚನದಲ್ಲೆ ಜರಿದರು.


ಇದನ್ನೂ ಓದಿ: ನನಗು ಸಿಎಂ ಆಗುವ ಆಸೆ ಇದೆ, ದಲಿತ ವ್ಯಕ್ತಿ ಸಿಎಂ ಆಗಬಹುದು ಎಂದ ಶಾಸಕ ಶರಣಬಸ್ಸಪ್ಪಗೌಡ


ಮೋದಿಗೆ ಸಂಸಾರವಿಲ್ಲ, ಬೆಲೆ ಏರಿಕೆಯಾದರೆ ಅವರಿಗೆ ಚಿಂತೆಯಿಲ್ಲ, ಕೆಲಸ ಸಿಗದೆ ಹೋದರೆ ನಷ್ಟವಿಲ್ಲ, ವಿದೇಶಿ ಸಾಲ ವಾಪಾಸ್ ಹೊರೆ ಯಾರ ಮೇಲೆ ಹಾಕ್ತೀರ, ಇದಕ್ಕೆ ನಿಮ್ಮಪ್ಪ ಉತ್ತರ ಕೊಡ್ತಾರಾ ಹೇಳಪ್ಪ, ಎಂದ ರಮೇಶ್ ಕುಮಾರ್ ವಾಗ್ದಾಳಿ ನಡೆದಿರು.

Published by:Divya D
First published: